ಎಸಿ ಪ್ರಭಾವತಿ ಫಕೀರಪೂರ ನೇತೃತ್ವದಲ್ಲಿ ಚನ್ನಮ್ಮ ಸಮಾಧಿ ರಸ್ತೆಯ ಅತಿಕ್ರಮಣ ತೆರವುಗೊಳಿಸಲಾಯಿತು. ತಹಸೀಲ್ದಾರ್ ಬಸವರಾಜ ನಾಗರಾಳ, ಸಿಪಿಐ ಶಿವಶಂಕರ ಗಣಾಚಾರಿ, ಎಸಿ ಕಚೇರಿ ಅಧಿಕಾರಿ ಮಂಜು ಅಂಗಡಿ ಇತರರು ಇದ್ದರು. 
ಜಿಲ್ಲೆ

ಸಮಾಧಿ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ

ಬೈಲಹೊಂಗಲ: ಪಟ್ಟಣದಲ್ಲಿರುವ ಕಿತ್ತೂರ ಚನ್ನಮ್ಮ ಸಮಾಧಿ ರಸ್ತೆಯ ಅತಿಕ್ರಮಣ ತೆರವು ಕಾರ್ಯಾಚರಣೆ ಭಾನುವಾರ ಬೆಳಗ್ಗೆ ಎಸಿ ಪ್ರಭಾವತಿ ಫಕೀರಪೂರ ನೇತೃತ್ವದಲ್ಲಿ ನಡೆಯಿತು.

ಡಬ್ಬಾ ಅಂಗಡಿಗಳು, ಅಡ್ಡಾದಿಡ್ಡಿ ನಿಲ್ಲಿಸಿದ ವಾಹನಗಳನ್ನು ನಿಲ್ಲಿಸಿದವರನ್ನು ತರಾಟೆಗೆ ತೆಗೆದುಕೊಂಡ ಎಸಿ ಪ್ರಭಾವತಿ, ಇದು ಪವಿತ್ರ ಸ್ಥಳ ಇದರ ಸ್ವಚ್ಛತೆ, ಅಂದ ಕಾಪಾಡಿ ಎಂದರು. ಚನ್ನಮ್ಮ ಸಮಾಧಿ ರಸ್ತೆ, ುಟ್‌ಪಾತ್ ಸ್ಥಳ ಅತಿಕ್ರಮಣ ಮಾಡಿದ ಸಾರ್ವಜನಿಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಇನ್ಮುಂದೆ ಯಾರೂ ಈ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡುವುದು, ಡಬ್ಬಾ ಅಂಗಡಿಗಳನ್ನು ನಿಲ್ಲಿಸುವುದು, ಅತಿಕ್ರಮಣ ಮಾಡಿಕೊಂಡು ವ್ಯಾಪಾರ ಮಾಡುವುದನ್ನು ನಿಲ್ಲಿಸಬೇಕೆಂದು ಸೂಚಿಸಿದರು.
ತಹಸೀಲ್ದಾರ್ ಬಸವರಾಜ ನಾಗರಾಳ, ಸಿಪಿಐ ಶಿವಶಂಕರ ಗಣಾಚಾರಿ, ಎಸಿ ಕಚೇರಿ ಅಧಿಕಾರಿ ಮಂಜು ಅಂಗಡಿ, ಕಂದಾಯ ಅಧಿಕಾರಿ ಸುರೇಶ ಮಾಳಗಿ, ಗ್ರಾಮ ಲೆಕ್ಕಾಧಿಕಾರಿ ಪಿ.ಎಂ. ಕಮ್ಮಾರ ಸಿಬ್ಬಂದಿ ಇದ್ದರು.