ಬಾಳೆಹೊನ್ನೂರಿನಲ್ಲಿ ಅಮ್ಮ ೌಂಡೇಷನ್‌ನಿಂದ ಲಾನುಭವಿಗಳಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಸುಧಾಕರ್ ಶೆಟ್ಟಿ, ಕೆ.ಕೆ.ವೆಂಕಟೇಶ್, ಕೆ.ಟಿ.ಗೋವಿಂದೇಗೌಡ, ಬಿ.ಕೆ.ಮಧುಸೂದನ್, ಕೆ.ಆರ್.ದೀಪಕ್, ಉದಯ್ ಸುವರ್ಣ ಇತರರಿದ್ದರು. 
ಜಿಲ್ಲೆ

ಸಮಾಜಸೇವೆ ರಾಜಕೀಯ ಲಾಭಕ್ಕಲ್ಲ

ಬಾಳೆಹೊನ್ನೂರು: ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವಾಗ ಯಾವುದೇ ರಾಜಕೀಯ ಉದ್ದೇಶ ಇರಬಾರದು ಎಂದು ಅಮ್ಮ ೌಂಡೇಷನ್ ಸಂಸ್ಥಾಪಕ ಸುಧಾಕರ್ ಎಸ್. ಶೆಟ್ಟಿ ಹೇಳಿದರು.

ಅಮ್ಮ ೌಂಡೇಷನ್‌ನಿಂದ ಬಾಳೆಹೊನ್ನೂರು ವ್ಯಾಪ್ತಿಯ ವಿವಿಧ ಲಾನುಭವಿಗಳಿಗೆ ಉಚಿತ ಕನ್ನಡಗಳನ್ನು ವಿತರಿಸಿ ಮಾತನಾಡಿ,

ಒಳ್ಳೆಯ ಕೆಲಸಗಳನ್ನು ಮಾಡುವಾಗ ಯಾವುದಾದರೂ ರಾಜಕಾರಣ ಮಾಡಿದರೆ ಅದು ಮೂರ್ಖತನದ ಪರಮಾವಧಿ ಎನ್ನಬಹುದು. ಒಳ್ಳೆಯ ಕೆಲಸಗಳನ್ನು ಮಾಡುವಾಗ ಜಾತಿ, ಧರ್ಮ, ಪಕ್ಷ ಇದ್ಯಾವುದನ್ನೂ ಗಮನಿಸದೆ, ಅಗತ್ಯವಿದ್ದವರಿಗೆ ಸಹಾಯ ಮಾಡಬೇಕಿದೆ ಎಂದರು.

ಶೃಂಗೇರಿ ಕ್ಷೇತ್ರದಲ್ಲಿ ಉತ್ತಮವಾದ ಉದ್ಯಮ, ಸ್‌ಟಾವೇರ್ ಕಂಪನಿಗಳಿಲ್ಲ. ಈ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲಿ ಅಮ್ಮ ೌಂಡೇಷನ್‌ನಿಂದ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಇದರಿಂದಾಗಿ ನೂರಾರು ಪದವೀಧರರಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ದೊರೆಯುವ ಅವಕಾಶ ಲಭಿಸಿದೆ. ನಾವು ಮಾಡುವ ಯಾವುದೇ ಸೇವೆಗಳು ಸಮಾಜದ ಕೆಳವರ್ಗಕ್ಕೆ ತಲುಪಬೇಕಿದ್ದು, ಅವಶ್ಯಕತೆಯಿದ್ದವರಿಗೆ ಅದನ್ನು ಕೊಟ್ಟಾಗ ಅದರ ಬೆಲೆ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಅಮ್ಮ ೌಂಡೇಷನ್‌ನಿಂದ ಸೀತೂರು, ವರ್ಕಾಟೆ, ನೆಮ್ಮಾರು, ಮೆಣಸೆ ಭಾಗಗಳಲ್ಲಿ ಆರೋಗ್ಯ ಶಿಬಿರ ಆಯೋಜಿಸುವ ಉದ್ದೇಶ ಹೊಂದಲಾಗಿದೆ. ಶಿಕ್ಷಣ, ವೈದ್ಯಕೀಯ ಕ್ಷೇತ್ರಕ್ಕೆ ಒತ್ತು ನೀಡಿದರೆ ಜನರಿಗೆ ಹೆಚ್ಚಿನ ಸೌಲಭ್ಯಗಳು ದೊರೆತಂತೆ ಆಗಲಿದೆ ಎಂದು ಹೇಳಿದರು.

ಪಿಎಸಿಎಸ್ ಅಧ್ಯಕ್ಷ ಕೆ.ಕೆ.ವೆಂಕಟೇಶ್ ಮಾತನಾಡಿ, ಅಮ್ಮ ೌಂಡೇಷನ್‌ನಿಂದ ನೇತ್ರ ತಪಾಸಣಾ ಶಿಬಿರ, ಉಚಿತ ಕನ್ನಡಕಗಳ ವಿತರಣೆ ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ನೇತ್ರದಾನ ನೋಂದಣಿ ಶಿಬಿರ ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಜೆಡಿಎಸ್ ಮುಖಂಡ ಕೆ.ಟಿ.ಗೋವಿಂದೇಗೌಡ ಮಾತನಾಡಿ, ಅಮ್ಮ ೌಂಡೇಷನ್‌ನಿಂದ ಕ್ಷೇತ್ರದಲ್ಲಿ 26 ಆರೋಗ್ಯ ಶಿಬಿರಗಳು ನಡೆದಿವೆ. ಅಶಕ್ತರು, ಕೂಲಿ ಕಾರ್ಮಿಕರು, ಅಗತ್ಯವುಳ್ಳವರಿಗೆ ಉಚಿತ ಪರೀಕ್ಷೆ ನಡೆಸಿ ಶಸಚಿಕಿತ್ಸೆಯನ್ನೂ ಮಾಡಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಅಗತ್ಯವಿದ್ದಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಗ್ರಾಪಂ ಸದಸ್ಯ ಬಿ.ಕೆ.ಮಧುಸೂದನ್ ಮಾತನಾಡಿ, ಅಮ್ಮ ೌಂಡೇಷನ್‌ನಿಂದ ಕರೊನಾ ಸಮಯದಲ್ಲಿ ಉಚಿತ ಮಾಸ್ಕ್, ಸ್ಯಾನಿಟೈಸರ್, ಆಹಾರ ಕಿಟ್, ರೋಗಿಗಳಿಗೆ ಅಗತ್ಯ ಸಾಮಗ್ರಿಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದರ ಸೇವೆ ಇನ್ನಷ್ಟು ಹೆಚ್ಚಬೇಕಿದೆ ಎಂದರು.

ಜೆಡಿಎಸ್ ಮುಖಂಡರಾದ ಕೆ.ಆರ್.ದೀಪಕ್ ಮರಿಗೌಡ, ಉದಯ್ ಸುವರ್ಣ, ಚಂದ್ರಶೇಖರ್, ಅತಿಶಯ್ ಮಾಗುಂಡಿ, ಎಂ.ಆರ್.ಜಗದೀಶ್, ಶಿವದಾಸ್, ಅರವಿಂದ್, ಜೆ.ಬಿ.ಮಂಜುನಾಥ್, ಶೋಭಾ, ಸುಬ್ರಹ್ಮಣ್ಯ, ಶಿವಶಂಕರ್ ಇತರರಿದ್ದರು.