ಜಿಲ್ಲೆ

ಸಮಾಜದಲ್ಲಿ ಶಿಕ್ಷಕರು, ಇಂಜಿನಿಯರ್‌ಗಳ ಪಾತ್ರ ಅನನ್ಯ

ಮದ್ದೂರು: ಸಮಾಜದಲ್ಲಿ ಶಿಕ್ಷಕರು ಹಾಗೂ ಇಂಜಿನಿಯರ್‌ಗಳ ಪಾತ್ರ ಅನನ್ಯ ಎಂದು ರೋಟರಿ ಅಧ್ಯಕ್ಷ ಎಸ್.ಪಿ.ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ರೋಟರಿ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ರೋಟರಿ ಸಂಸ್ಥಾಪನ ದಿನ, ಶಿಕ್ಷಕರು ಹಾಗೂ ಇಂಜಿನಿಯರ್‌ಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕರು ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ಕೊಡುಗೆ ನೀಡಿದರೆ, ಇಂಜಿನಿಯರ್‌ಗಳು ದೇಶದ ನಿರ್ಮಾಣ, ಅಭಿವೃದ್ಧಿ ಹಾಗೂ ತಾಂತ್ರಿಕ ಪ್ರಗತಿಗೆ ತಮ್ಮದೆಯಾದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇವರನ್ನು ಪರಿಗಣಿಸಿ ಉತ್ತಮ ಶಿಕ್ಷಕರು ಹಾಗೂ ಇಂಜಿನಿಯರ್‌ಗಳನ್ನು ಸನ್ಮಾನಿಸಲಾಗುತ್ತಿದೆ ಎಂದರು.

ರೋಟರಿ ಸಂಸ್ಥೆ ಹಲವು ವರ್ಷಗಳಿಂದ ನಿರಂತರವಾಗಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜತೆಗೆ ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸುವ ಜತೆಗೆ ಅವರು ಮತ್ತಷ್ಟು ಉತ್ತಮ ಸೇವೆ ಮಾಡಲು ಪ್ರೇರೇಪಣೆ ನೀಡಲಾಗುತ್ತಿದೆ ಎಂದರು.

ಬಿ.ವಿ.ಶ್ರೀನಿವಾಸ್, ಎಂ.ಎಲ್.ಶ್ರೀದೇವಿ, ಬಿ.ಸಿ.ವೆಂಕಟಲಕ್ಷ್ಮೀ, ಕೆ.ವಿ.ಶ್ರೀನಿವಾಸು, ಎನ್.ಶಿವಣ್ಣ, ಅಕ್ಷರಂ ವೆಂಕಟೇಶ್, ಸುದರ್ಶನ್‌ಗೌಡ, ಎನ್.ಪ್ರವೀಣ್ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾ ಪಾಲಕ ಎಲಿಜಬೆತ್ ಚರಿಯನ್, ರೋಟರಿ ಯೂನಿಕ್ ಕನ್ಸಲೆಂಟ್ಸ್ ವಿ.ಅಶ್ವತ್ಥರಾಮಯ್ಯ, ಜಿಲ್ಲಾ ಕಾರ್ಯದರ್ಶಿ ಜಗದೀಶ್, ವಲಯ ಪಾಲಕ ಟಿ.ಎಸ್.ರಾಜೇಶ್, ಜಿಲ್ಲಾ ಸಹ ಪಾಲಕಿ ಬಿ.ಎಸ್.ಅನುಪಮಾ, ರೋಟರಿ ಕಾರ್ಯದರ್ಶಿ ಎನ್.ಮಂಜುನಾಥ ನಾಯ್ಡು ಇದ್ದರು.