ಹುಲಸೂರು: ಪತ್ರಕರ್ತರು ಯಾವುದೇ ಆಸೆ, ಆಕಾಂಕ್ಷೆಗಳಿಲ್ಲದೆ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡುವುದರ ಜೊತೆಗೆ ಸಮಾಜದಲ್ಲಿ ಪತ್ರಕರ್ತರಿಗೆ ದೊಡ್ಡ ಜವಾಬ್ದಾರಿ ಇದೆ ಎಂದು ಕಾಂಗ್ರೆಸ್ ನ ಯುವ ಮುಖಂಡ ಸಾಗರ ಈಶ್ವರ ಖಂಡ್ರೆ ಹೇಳಿದ್ದರು.
ಪಟ್ಟಣದ ಶಾಂತೇಶ್ವರ ಎಂಟರ್‌ಪ್ರೆಸಸ್ ಹಾಗೂ ಕಾಂಗ್ರೆಸ್ ಯುವ ನಾಯಕ ಸಾಗರ ಈಶ್ವರ ಖಂಡ್ರೆ ರವರ ವತಿಯಿಂದ ತಾಲ್ಲೂಕು ಕಾರ್ಯನಿರತರ ಪತ್ರಕರ್ತರಿಗೆ ಸನ್ಮಾನಿಸಿ ಮಾತನಾಡಿದರು. ಮಾತನಾಡಿದ ಸಾಗರ ಈಶ್ವರ ಖಂಡ್ರೆ ಶಾಸಕಾಂಗ ,ಕಾರ್ಯಂಗ ನ್ಯಾಯಾಂಗ ವನ್ನು ತಿದ್ದಿ ಸರಿ ದಾರಿಗೆ ತರುವ ಕೆಲಸ ಪತ್ರಕರ್ತರು ಮಾಡುತ್ತಾರೆ . ಸಮಾಜದಲ್ಲಿ,ರಾಜಕೀಯದಲ್ಲಿ ಆಗುವ ಒಳ್ಳೆಯ ದು,ಕೆಟ್ಟದು ಘಟನೆಗಳ ಬಗ್ಗೆ ನಮಗೆ ಗೋತ್ತು ಪಡಿಸುವರೇ ಪತ್ರಕರ್ತರು ,ಅವರ ಸಮಾಜಸೇವೆ ಅಮೋಘನೀಯವಾಗಿದೆ ಅಂತಹ ಪತ್ರಕರ್ತರಿಗೆ ಗುರುತಿಸಿ ಸ್ಮಾನಿಸಿ ಗೌರವಿಸುವ ಕೆಲಸ ನಮ್ಮ ನಿಮ್ಮಿಂದ ಆಗಬೇಕಾಗಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಆನಂದ ದೇವಪ್ಪಾ ಮಾತನಾಡಿ ಪತ್ರಿಕಾ ರಂಗದಲ್ಲಿ ಸಂಪಾದಕರಿಗೆ ಹಾಗೂ ಪತ್ರಕರ್ತರಿಗೆ ಬಹಳಷ್ಟು ಕಷ್ಠಗಳು ಬರುತ್ತವೆ, ಅವೆಲ್ಲ ಬದಿಗಿಟ್ಟು ಶಾಸಕಾಂಗ, ಕಾರ್ಯಂಗ, ನ್ಯಾಯಾಂಗ ಮೂರು ಅಂಗದವರು ತಪ್ಪು ದಾರಿಗೆ ಬಂದಾಗ ಪತ್ರಿಕಾ ರಂಗ ನಾಲ್ಕನೇ ಅಂಗವಾಗಿ ನಮಗೇ ತಿದ್ದುವ ಕೆಲಸಮಾಡುತ್ತದೆ, ನಮ್ಮ ಭಾಗದ ನಿಜವಾದ ಜ್ವಲಂತ ವಿಷಯಗಳ ಬಗ್ಗೆ ಮೆಲಕು ಹಾಕುವ ಕೆಲಸ ಪತ್ರಕರ್ತರಿಂದ ಆಗಲಿ ಎಂದರು.
ತಹಸಿಲ್ದಾರ್ ಶಿವಾನಂದ ಮೇತ್ರೆ , ಮಾಜಿ ಜಿಪಂ ಸದಸ್ಯ ಸುಧೀರ ಕಾಡಾದಿ, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಪತ್ರಕರ್ತ ರಾಜಕುಮಾರ ಹೊನ್ನಾಡೆ, ಶಿವಲಿಂಗಯ್ಯಾ ಕನ್ನಾಡೆ, ಮಾತನಾಡಿದರು.
ಹುಲಸೂರ ತಾಲ್ಲುಕಾ ಕಾರ್ಯನಿರತ ಎಲ್ಲಾ ಪತ್ರಕರ್ತರಿಗೆ ವೇದಿಕೆ ಮುಖಾಂತರ ಸನ್ಮಾನಿಸಿ ಗೌರವಿಸಲಾಯಿತು. ಪ್ರವೀಣ ಕಾಡಾದಿ, ವಿದ್ಯಾ ಸಾಗರ ಬನಸೂಡೆ , ವೀರಶೆಟ್ಟಿ ,ನಾಗೇಶ ನಿಲಂಗೆ,ಸೋಮನಾಥ ನಿಲಂಗೆ,ಪ್ರಮೋದ ಸ್ವಾಮಿ ,ಗುಲಾಮ ಬಡಾಯಿ,ಪ್ರದೀಪ ಪಾರಶೆಟ್ಟೆ,ಲೊಕೇಶ ಧಬಾಲೆ,,ದಯಾನಂದ ನಿಮಾಣೆ,ಅರಣುಕುಮಾರ ಮಾಹಜನ,ಶಿವರಾಜ ವಿರಣ್ಣನವರು ಹಾಗೂ ತಾಲ್ಲೂಕಿನ ಪತ್ರಕರ್ತರು, ಸಾರ್ವಜನಿಕರು ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.