ಶಹಾಪುರ: ಪತ್ರಿಕೆಗಳು ಮತ್ತು ಪತ್ರಕರ್ತರು ಸಮಾಜ ಹಾಗೂ ಆಡಳಿತ ವ್ಯವಸ್ಥೆ ನಡುವೆ ಸೇತುವೆ ಇದ್ದಂತೆ. ಸರ್ಕಾರ ಮತ್ತು ಜನರ ನಡುವೆ ಅಭಿವೃದ್ಧಿ ಕೊಂಡಿಯಾಗಿ ಕೆಲಸ ಮಾಡುತ್ತಾರೆ ಎಂದು ರಾಯಚೂರು ಸಂಸದ ಜಿ.ಕುಮಾರ ನಾಯಕ್ ಹೇಳಿದರು.
ನಗರದ ಜೀವ್ಹೆಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಾಮಾಜಿಕ ಸ್ವಾಸ್ಥö್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದು. ಸಮಾಜದ ಸಮಸ್ಯೆಗಳನ್ನು ಆಳುವ ವರ್ಗಕ್ಕೆ ತೋರಿಸುವ ಕಾರ್ಯ ಶ್ಲಾಘನೀಯ ಎಂದರು.
ಸಮಾಜದ ಆರೋಗ್ಯ ಕಾಪಾಡುವಲ್ಲಿ ಪತ್ರಿಕೆಗಳ ಪಾತ್ರ ಬಹಳ ಮುಖ್ಯ. ಪತ್ರಿಕೆಗಗಳು ಅಂಕುಶದAತೆ ಕೆಲಸ ಮಾಡುತ್ತಿರುವುದರಿಂದಲೇ ಒಂದಷ್ಟು ಒಳ್ಳೆಯ ವಾತಾವರಣ ನಿರ್ಮಾಣಗೊಳ್ಳುತ್ತಿದೆ. ಸಮಾಜದ ಆಗು ಹೋಗುಗಳ ಬಗ್ಗೆ ಗಮನ ಸೆಳೆಯುವುದರ ಜತೆಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕಾರ್ಯವೈಖರಿ ಪ್ರಶ್ನಿಸುವಂತಹ ಎದೆಗಾರಿಕೆ ಪತ್ರಕರ್ತರಲ್ಲಿದೆ ಎಂದು ಕುಮಾರ ನಾಯಕ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ, ಡಿವಿಜಿ ಮತ್ತು ಡಾ. ಎಪಿಜೆ ಅಬ್ದುಲï ಕಲಾಂರ ಪುಣ್ಯ ಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಪತ್ರಿಕೆಗಳ ಅಸ್ತçವೇ ಲೇಖನಿ, ಇದು ಖಡ್ಗಕ್ಕಿಂತ ಹರಿತವಾದದ್ದು, ಇದರ ಬಳಕೆ ಆರೋಗ್ಯಕರ ಸಮಾಜಕ್ಕೆ ದಿಕ್ಸೂಚಿ ಆಗಲಿ ಮತ್ತು ಜನಪರ ಆಶಯಗಳಿಗೆ ಪೂರಕವಾಗಲಿ ಹೊರತು ಮಾರಕವಾಗದಿರಲಿ ಕಿವಿ ಮಾತು ಹೇಳಿದರು.
ಸಾನಿಧ್ಯ ವಹಿಸಿದ್ದ ಕುಂಬಾರಗೇರಿ ಹಿರಿಯ ಮಠದ ಪೀಠಾಧಿಪತಿ ಸೂಗುರೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿ¯್ಲÁಧ್ಯP್ಷÀ ಮಲ್ಲಪ್ಪ ಸಂಕೀನ ಮಾತನಾಡಿ, ರಾಜ್ಯದ ಯಾವ ತಾಲೂಕು ಪತ್ರಕರ್ತರಿಗೆ ನಿವೇಶನಗಳು ಸಿಕ್ಕಿಲ್ಲ , ಆದರೆ, ಶಹಾಪುರದ ಪತ್ರಕರ್ತರಿಗೆ ನಿವೇಶನಗಳು ಸಿಕ್ಕಿವೆ. ಅದಕ್ಕೆ ಸಚಿವ ದರ್ಶನಾಪುರವರ ಸತತ ಪ್ರಯತ್ನ ಕಾರಣ ಎಂದರು.
ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. ಪತ್ರಕರ್ತ ಶರಣು ಗದ್ದುಗೆ ಪ್ರಾಸ್ತವಿಕವಾಗಿ ಮಾತನಾಡಿದರು. ಸಗರ ದರ್ಗಾದ ಸೈಯದ್ ಶಫೀಯುದ್ಧೀನ್, ತಾಪಂ ಇಒ ಸೋಮಶೇಖರ ಬಿರಾದಾರ, ವೈದ್ಯಾಧಿಕಾರಿ ಡಾ.ಯಲ್ಲಪ್ಪ ಪಾಟೀಲï, ವೆಂಕಟೇಶ ಟೊಣಪೆ, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ಕಾಮನಟಗಿ, ಜಿಲ್ಲಾ ಕಾರ್ಯದರ್ಶಿ ಮಹೇಶ ಕಲಾಲï, ತಾಲೂಕ ಪತ್ರಕರ್ತರ ಸಂಘದ ಅಧ್ಯP್ಷÀ ಮಲ್ಲಿಕಾರ್ಜುನ ಮುದ್ನೂರ, ಸರ್ಕಾರಿ ನೌಕರ ಸಂಘದ ಅಧ್ಯP್ಷÀ ರಾಯಪ್ಪಗೌಡ ಹುಡೇದ, ಪ್ರಮುಖರಾದ ಸೋಮಶೇಖರಯ್ಯ ಹಿರೇಮಠ, ಡಾ.ಆನಂದ, ಇಕ್ಬಾಲï ಲ¯್ಲೆÆÃಟಿ, ರಮೇಶ, ಶಿವಪುತ್ರ ಜವಳಿ, ಶಿವಕುಮಾರ ತಳವಾರ, ದೇವು ಭೀಮರಾಯನಗುಡಿ ಮೊದಲಾದವರಿದ್ದರು. ಮಹೇಶ ಪತ್ತಾರ ಮತ್ತು ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು, ವಿಶಾಲï ದೋರನಹಳ್ಳಿ ಸ್ವಾಗತಿಸಿದರು, ಬಸವರಾಜ ಕರೆಗಾರ ವಂದಿಸಿದರು.