ಹುಮನಾಬಾದ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು ಸಾಹಿತಿ ಡಾ.ಗವಿಸಿದ್ದಪ್ಪ ಎಚ್.ಪಾಟೀಲ್ ಉದ್ಘಾಟಿಸಿದರು, ಸಿದ್ದಲಿಂಗ ನಿರ್ಣಾ, ಬಸವರಾಜ ದಯಾಸಾಗರ, ವಿಜಯಕುಮಾರ ಚೆಟ್ಟಿ, ಶ್ರೀಕಾಂತ ಸೂಗಿ ಇತರರಿದ್ದರು. 
ಜಿಲ್ಲೆ

ಸಮಾಜದ ಸ್ವಾಸ್ಥ್ಯಕಾಪಾಡುವಂಥ ಕಾವ್ಯ ರಚನೆಯಾಗಲಿ

ಹುಮನಾಬಾದ್: ಸಮಾಜದ ಸ್ವಾಸ್ಥ್ಯ ಕಾಪಾಡುವಂಥ ಹೊಸ ಸಮಾಜ ನಿರ್ಮಾಣ ಮಾಡುವಂಥ ಕಾವ್ಯ ರಚನೆ ಅಗತ್ಯ. ನಮ್ಮ ಕಾವ್ಯ ಪರಂಪರೆಗೆ ಬುದ್ಧ, ಬಸವ, ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಕಾವ್ಯದಲ್ಲಿ ತಂದರೆ ಕವಿಗಳಿಗೆ ಕಾವ್ಯದ ಪ್ರೀತಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಸಾಹಿತಿ ಡಾ.ಗವಿಸಿದ್ದಪ್ಪ ಎಚ್.ಪಾಟೀಲ್ ಹೇಳಿದರು.

ಪಟ್ಟಣದ ಮಾತೋಶ್ರೀ ಪ್ಯಾರಾಮೆಡಿಕಲ್ ಅಲೈಡ್ ಹೆಲ್ತ್​ ಸೈನ್ಸ್ ಕಾಲೇಜಿನಲ್ಲಿ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯ, ನೆಲ, ಜಲ, ಸಂಸ್ಕೃತಿ ಉಳಿವಿಗಾಗಿ ಕರ್ನಾಟಕ ನಾಮಕರಣವಾಯಿತು. ೧೯೫೬ರಲ್ಲಿ ಮೈಸೂರು ರಾಜ್ಯ,೧೯೬೩ರ ನ.೧ ರಂದು ವಿಶಾಲ ಕರ್ನಾಟಕ ಎಂದು ದೇವರಾಜ ಅರಸು ನಾಮಕರಣ ಮಾಡಿದರು. ಅಂದಿನಿಂದ ಇಂದಿನವರೆಗೂ ನಿರಂತರ ಕನ್ನಡ ಭಾಷೆ ಉಳಿಸಿ ಬೆಳೆಸಿಕೊಂಡು ಬಂದಿದೆ ಎಂದು ಹೇಳಿದರು.

ಬಂಕಲಗಿ, ಶ್ರವಣಕುಮಾರ, ಸುನೀತಾ ಪುಂಡಲೀಕ, ಲಕ್ಷ್ಮೀಕಾಂತ ಕೂಬಾಳಕರ, ಡಾ.ಸುಬ್ಬಣ್ಣ ಕರಕನಳ್ಳಿ, ರವಿದಾಸ ಕಾಂಬಳೆ, ರವಿದಾಸ, ಮೋಹಿನುದ್ಧೀನ್ ಹಣಕುಣಿ, ವೀರಶೆಟ್ಟಿ ಪಾಟೀಲ್, ಸಂಗಮೇಶ ಮುರ್ಕೆ, ಭಗವಾನ, ರಮೇಶ ಸಲಗರ, ಗಣಪತಿ ಕಾವ್ಯ ವಾಚನ ಮಾಡಿದರು.

ರಾಜ್ಯ ಬರಹಗಾರರ ಬಳಗದ ಜಿಲ್ಲಾಧ್ಯಕ್ಷ ವಿಜಯಕುಮಾರ ಚಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕಾಧ್ಯಕ್ಷ ಸಿದ್ದಲಿಂಗ ನಿರ್ಣಾ, ಸಾಹಿತಿ ಡಾ.ಬಸವರಾಜ ದಯಾಸಾಗರ, ದಸಾಪ ತಾಲೂಕಾಧ್ಯಕ್ಷ ಶಿವರಾಜ ಮೇತ್ರೆ, ಕಲಾವಿದ ಡಾ.ಸಿದ್ರಾಮ ವಾಘಮಾರೆ, ಸಾಹಿತಿ ಶ್ರೀಕಾಂತ ಸೂಗಿ, ಐ.ಎಸ್.ಶಕೀಲ್ ಮಾತನಾಡಿದರು.

ಸಿದ್ಧಾರ್ಥ ಮಿತ್ರ (ಹುಮನಾಬಾದ್), ಡಾ.ಸಂಗೀತಾ ಪಾಟೀಲ್ (ಚಿಟಗುಪ್ಪ), ಡಾ.ಸುನೀತಾ ಪಂಕಜ (ಬೀದರ್), ಗಣಪತಿ ದಶರಥ (ಕಮಲನಗರ), ಬಾಲಾಜಿ (ಭಾಲ್ಕಿ) ಇವರನ್ನು ತಾಲೂಕಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಕಾರ್ಯ ನಿರ್ವಹಿಸಲು ಸೂಚಿಸಿದರು.

ವಿ.ಎಂ.ಬಂಕಲಗಿ ಪ್ರಾರ್ಥನೆ ಗೀತೆ ಹಾಡಿದರು, ಈಶ್ವರ ತಡೋಳಾ ಸ್ವಾಗತಿಸಿದರು. ಸಿದ್ದಾರ್ಥ ಮಿತ್ರ ನಿರೂಪಣೆ ಮಾಡಿ ವಂದಿಸಿದರು.