ತಿ. ನರಸೀಪುರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಟ್ರಸ್ಟ್ ನ ಸ್ಥಳಾಂತರಗೊಂಡ ಕಚೇರಿ ಉದ್ಘಾಟನೆ ಸಂದರ್ಭ ತಹಸೀಲ್ದಾರ್ ಸಿ.ಜಿ. ಗೀತಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿಇಒ ಅನಿಲ್ ಕುಮಾರ್, ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ, ಸೇವಾಶ್ರಯ ಫೌಂಡೇಶನ್ ಅಧ್ಯಕ್ಷ ಮಣಿಕಂಠರಾಜ್ ಗೌಡ ಇತರರು ಇದ್ದರು. 
ಜಿಲ್ಲೆ

ಸಮಾಜದ ಸಮಸ್ಯೆಗೆ ಸದಾ ಸ್ಪಂದಿಸಿ

ತಿ. ನರಸೀಪುರ: ಸಮಾಜದ ಸಮಸ್ಯೆಗೆ ಸದಾ ಸ್ಪಂದಿಸೋಣ ಎಂದು ತಹಸೀಲ್ದಾರ್ ಸಿ.ಜಿ. ಗೀತಾ ಹೇಳಿದರು.

ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಟ್ರಸ್ಟ್ ನ ಸ್ಥಳಾಂತರಗೊಂಡ ಕಚೇರಿ ಉದ್ಘಾಟನೆ, ಬೀದಿ ಬದಿ ವ್ಯಾಪಾರಸ್ಥರ ಅಭಿವೃದ್ಧಿ ಸಂಘದ 101ನೇ ಘಟಕ ಮತ್ತು ವಿವಿಧ ಅನುದಾನಗಳ ವಿತರಣಾ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸೇವಾ ಚಟುವಟಕೆಗಳು ಮಾದರಿಯಾಗಿವೆ. ಬೀದಿ ಬದಿ ವ್ಯಾಪಾರಸ್ಥರು, ನಿರ್ಗತಿಕರು ಮತ್ತು ಕಡುಬಡವರನ್ನೂ ಸಂಸ್ಥೆ ಗುರುತಿಸಿ ಆರ್ಥಿಕ, ಆರೋಗ್ಯ ಮತ್ತಿತರ ಸೇವೆ ನೀಡುತ್ತಿದೆ. ವಿವಿಧ ಸಮಾಜಮುಖಿ ಯೋಜನೆೆಗಳನ್ನು ಹಮ್ಮಿಕೊಂಡು ಬಡವರ ಆಶಾಕಿರಣವಾಗಿದೆ ಎಂದು ಶ್ಲಾಘಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ನ ಕೇಂದ್ರ ಕಚೇರಿ ಸಿಇಒ ಅನಿಲ್ ಕುಮಾರ್ ಅನುದಾನ ವಿತರಿಸಿ ಮಾತನಾಡಿ, ಗ್ರಾಮೀಣ ಜನರಿಗೆ ಸೇವಾ ಸೌಲಭ್ಯ ಒದಗಿಸಿ ಅವರ ಬದುಕಿಗೊಂದು ಭದ್ರತೆ ಕಲ್ಪಿಸುವುದು ಸಂಸ್ಥೆಯ ಧ್ಯೇಯ ಎಂದು ಅವರು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಧಾರ್ಮಿಕ ಚಟುವಟಿಕೆಗಳೊಂದಿಗೆ ಅನ್ನದಾನ, ವಿದ್ಯಾದಾನದಲ್ಲಿ ಅಗ್ರ ಪಂಕ್ತಿಯಲ್ಲಿದೆ. ಆಯುರ್ವೇದ. ಪ್ರಕೃತಿ ಚಿಕಿತ್ಸೆ, ಯೋಗ ಮತ್ತಿತರ ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗಳೊಂದಿಗೆ ನಾವಿದ್ದೇವೆ ಎಂದರು.

ಬಿಸಿ ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ. ಎಂ ಲಕ್ಷ್ಮಣ್, ಸೇವಾಶ್ರಯ ಫೌಂಡೇಶನ್ ಅಧ್ಯಕ್ಷ ಮಣಿಕಂಠರಾಜ್ ಗೌಡ, ಜನಜಾಗೃತಿ ಸಮಿತಿ ಸದಸ್ಯರಾದ ಕಿರಗಸೂರು ಶಂಕರ್. ತಾಯೂರು ಪ್ರಕಾಶ್, ಪ್ರಸಾದ್ ನಾಯಕ್, ಪುಷ್ಪಲತಾ ರಾಜಶೇಖರ್ ಮೂರ್ತಿ, ಮಂಜುನಾಥ್, ಸುಜಾತ, ಟ್ರಸ್ಟ್‌ನ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಇತರರು ಇದ್ದರು.