ಮಳವಳ್ಳಿ: ಪೌರಕಾರ್ಮಿಕ ಸಮುದಾಯ ಶಿಕ್ಷಣ, ಆರ್ಥಿಕತೆ ಹಾಗೂ ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.
ಪಟ್ಟಣದ ಪುರಸಭೆ ವತಿಯಿಂದ ಗುರುವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಟ್ಟಣದಲ್ಲಿ ಪೌರಕಾರ್ಮಿಕರಿಗೆ ಮಂಜೂರಾಗಿರುವ ನಿವೇಶನಗಳ ಜಾಗವನ್ನು ತಾಂತ್ರಿಕ ಕಾರಣಗಳಿಂದ ಖಾತೆ ಮಾಡಿಕೊಟ್ಟಿಲ್ಲವೆಂದ ದೂರು ಕೇಳಿಬಂದಿದೆ. ಕೂಡಲೇ ದಾಖಲೆ ಸಮಸ್ಯೆ ಸರಿಪಡಿಸುವ ಮೂಲಕ ಫಲಾನುಭವಿಗಳ ಹೆಸರಿಗೆ ಖಾತೆ ಮಾಡಿಕೊಡಬೇಕೆಂದು ವೇದಿಕೆಯಲ್ಲಿದ್ದ ಮುಖ್ಯಾಧಿಕಾರಿ ಹರಿಪ್ರಸಾದ್ ಅವರಿಗೆ ಸೂಚಿಸಿದರು.
ಪೌರಕಾರ್ಮಿಕರು ನಿತ್ಯವೂ ತಮ್ಮ ಆರೋಗ್ಯ ಲೆಕ್ಕಿಸದೆ ಸ್ವಚ್ಛತಾ ಕಾರ್ಯ ಮಾಡುತ್ತಿರುವುದರಿಂದ ಪಟ್ಟಣದ ಜನರು ಸ್ವಚ್ಛಂದ ಪರಿಸರವನ್ನು ಕಾಣಲು ಸಾಧ್ಯವಾಗಿದೆ. ಆದರೆ ಪೌರಕಾರ್ಮಿಕರು ರಕ್ಷಾ ಕವಚ ಬಳಸಬೇಕು ಎಂದರು.
ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷ ಪ್ರಶಾಂತ್, ಸದಸ್ಯರಾದ ನಂದಕುಮಾರ್, ಪುಟ್ಟಸ್ವಾಮಿ, ರಮೇಶ್, ಬಸವರಾಜು, ರವಿ, ರಾಜಶೇಖರ್, ಶಿವಸ್ವಾಮಿ, ನಾಗೇಶ್, ಸಿದ್ದರಾಜು, ನೂರುಲ್ಲಾ, ಮಣಿ, ಪ್ರಮೀಳಾ, ಕುಮಾರ್, ಆತೀಯಾ ಬೇಗಂ, ವೇಣು, ರಾಜಣ್ಣ, ಜಗದೀಶ್, ರಾಜೀವ್, ಮಾಜಿ ಅಧ್ಯಕ್ಷ ದೊಡ್ಡಯ್ಯ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಾದೇಶ್, ಮಾಜಿ ಅಧ್ಯಕ್ಷ ಬೈರಪ್ಪ ಇತರರಿದ್ದರು.