ಚಿಕ್ಕಮಗಳೂರು ನೆಹರು ರಸ್ತೆ ಸಮೀಪ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಶ್ರೀ ಸವಿತಾ ಸಮಾಜ ಟ್ರಸ್ಟ್ ಹಮ್ಮಿಕೊಂಡಿದ್ಧ ಪ್ರತಿಭಾ ಪುರಸ್ಕಾರ, ಲೇಖನ ಸಾಮಾಗ್ರಿ, ನೋಟ್‌ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಸಮಾಜಕ್ಕೆ ವಿವಿಧ ಮುಖಂಡರು ದೇಣಿಗೆ ನೀಡಿದರು, ಎ,ಎನ್,ಮಹೇಶ್‌, ಶ್ರೀಧರ್‌ ಮೋಹನ್‌, ಉಮೇಶ್‌ ಕುಮಾರ್‌, ಸಿ,ಎಂ.ಯೋಗೀಶ್‌ ಮತ್ತಿತರರಿದ್ದರು. 
ಜಿಲ್ಲೆ

ಸಮಾಜದ ಬಂಧುಗಳು ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಿ

ಚಿಕ್ಕಮಗಳೂರು: ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಸವಿತಾ ಸಮಾಜದ ಬಂಧುಗಳು ಪ್ರಗತಿ ಸಾಧಿಸಲು ಮೊಟ್ಟಮೊದಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎಂದು ಜಿ ಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ತಿಳಿಸಿದರು.
ನಗರದ ನೆಹರು ರಸ್ತೆ ಸಮೀಪ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಶ್ರೀ ಸವಿತಾ ಸಮಾಜ ಟ್ರಸ್ಟ್ ಹಮ್ಮಿಕೊಂಡಿದ್ಧ ಉಚಿತ ಪ್ರತಿಭಾ ಪುರಸ್ಕಾರ, ಲೇಖನ ಸಾಮಾಗ್ರಿ, ನೋಟ್‌ಬುಕ್ ವಿತರಣೆ ಹಾಗೂ ಸಮಾಜಕ್ಕೆ ಆರ್ಥಿಕ ದೇಣಿಗೆ ನೀಡಿ ಮಾತನಾಡಿದರು. ಇತ್ತೀಚೆಗೆ ಸಮಾಜದ ಹಲವಾರು ಮಂದಿ ಸರ್ಕಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಅಂಬೇಡ್ಕರ್ ನೀಡಿದಂಥ ಶಿಕ್ಷಣವೇ ಮೂಲಕಾರಣ. ಇನ್ನೂ ಕೆಲವೆಡೆ ಸಮಾಜವು ಬಲಿಷ್ಟಗೊಳ್ಳುವ ಅಗತ್ಯವಿರುವ ಹಿನ್ನೆಲೆ ಯಲ್ಲಿ ವಿದ್ಯೆ ಎಂಬ ಹಸಿವನ್ನು ಬೆಳೆಸಿಕೊಂಡು, ಕಲಿಕೆಯೆಂಬ ಆಹಾರವನ್ನು ಸೇವಿಸಿ ಸದೃಢರಾಗಬೇಕು ಎಂದು ಕಿವಿಮಾತು ಹೇಳಿದರು. ಸಮಾಜದ ಬಂಧುಗಳು ಅಪ್ಪ ಹಾಕಿದ ಆಲದ ಮರಕ್ಕೆ ಜೋತುಬೀಳದೇ ಐಎಎಸ್, ಐಪಿಎಸ್ ಅಥವಾ ಉನ್ನತ ಸರ್ಕಾರಿ ಸ್ಥಾನಗಳನ್ನು ಅಲಂಕರಿಸಿದರೆ ಸಮಾಜದ ಅಭಿವೃದ್ದಿಗೂ ಶ್ರಮಿಸಬಹುದು. ಸಮಾಜ ದ ಕೆಲವರು ಆರ್ಥಿಕ ಸದೃಢರಾದವರು ಟ್ರಸ್ಟ್ಗೆ ಸಹಾಯಧನ ಒದಗಿಸಿದರೆ ಜನಾಂಗವು ಅಭಿವೃದ್ದಿ ಹೊಂದಲು ಸಾಧ್ಯ ಎಂದರು. ಪ್ರತಿಭಾ ಪುರಸ್ಕಾರ ಪಡೆದುಕೊಂಡ ವಿದ್ಯಾರ್ಥಿಗಳು ಮುಂದಿನ ಸಾಲಿನಲ್ಲೂ ಪುರಸ್ಕಾರ ಗಳಿಸುವಷ್ಟು ವಿದ್ಯಾಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಈ ಕಾರ್ಯಕ್ರಮಕ್ಕ ನೈತಿಕವಾಗಿ ಅರ್ಥಬರಲಿದೆ. ಸಮಾಜದಲ್ಲಿ ಶಿಕ್ಷಣ ವೇ ದೊಡ್ಡ ಆಸ್ತಿ. ಕಲಿತಷ್ಟು ಮುಗಿಲೆತ್ತರಕ್ಕೆ ಬೆಳೆಯಲು ಸಾಧ್ಯ. ಹೀಗಾಗಿ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಸವಿತಾ ಬಂಧುಗಳು ಮಕ್ಕಳ ಆಸಕ್ತಿ ಹೊಂದಿರುವ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಅಲ್ಲದೇ  ಮೊಬೈಲ್ ಚಟಕ್ಕೆ ಒಳಗಾಗಿರುವ ಮಕ್ಕಳನ್ನು ಸರಿದಾರಿಗೆ ತರಬೇಕು. ಪಠ್ಯದ ಜೊತೆಗೆ ಕ್ರೀಡಾಸಕ್ತಿಯ ಅರಿವನ್ನು ಮೂಡಿಸಿದರೆ ದುಶ್ಚಟಕ್ಕೆ ಬಲಿಯಾಗದೇ ಉತ್ತಮ ನಾಗರೀಕರಾಗಲು ಸಾಧ್ಯ ಎಂದರು. ಸಮಾಜದ ಮುಖಂಡ, ದಾನಿ ಎಂ.ಎಸ್.ಉಮೇಶ್‌ಕುಮಾರ್ ಮಾತನಾಡಿ, ಸಮಾಜದಲ್ಲಿ ಕೆಲವೆಡೆ ಹಿಂದುಳಿದ ವರ್ಗವನ್ನು ಜಾತಿವ್ಯವಸ್ಥೆಯಡಿ ಕೀಳಾಗಿ ಕಾಣುವ ಮೂಲಕ ಅವಮಾನಿಸಲಾಗುತ್ತಿದೆ. ಇದನ್ನು ಮೆಟ್ಟಿನಿಲ್ಲಲು ಶಿಕ್ಷಣ ಎಂಬ ಅಸ್ತ್ರ ಸಂಪೂರ್ಣವಾಗಿ ಕರಗತ ಮಾಡಿಕೊಂಡರೆ ಅವಮಾನಿಸುವವರ ಎದುರು ಸದೃಢವಾಗಿ ನಿಲ್ಲಬಹುದು ಎಂದು ತಿಳಿಸಿದರು. ಸವಿತಾ ಸಮಾಜ ಟ್ರಸ್ಟ್ ಅಧ್ಯಕ್ಷ ಸಿ.ವೆಂಕಟೇಶ್ ಮಾತನಾಡಿ, ಜನಾಂಗದ ಅಭಿವೃದ್ದಿ, ಭವನದ ಕಟ್ಟಡ ನಿರ್ಮಾಣಕ್ಕೆ ಎ.ಎನ್.ಮಹೇಶ್‌ರವರು ಸರ್ಕಾರದಿಂದ ಸವಲತ್ತು, ಆರ್ಥಿಕ ಸಹಾಯವನ್ನು ನೀಡಿ ಪ್ರೋತ್ಸಾಹಿಸಿರುವ ಕಾರಣ ಹಂತ ಹಂತವಾಗಿ ಜನಾಂಗ ಮುನ್ನೆಡೆ ಸಾಧಿಸುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ಶ್ರೀ ಸವಿತಾ ಸಮಾಜ ಟ್ರಸ್ಟ್ಗೆ ಜಿ.ಪಂ. ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ೧ ಲಕ್ಷ ಹಾಗೂ ಉಮೇಶ್‌ಕುಮಾರ್ ೨೫ ಸಾವಿರ ದೇಣಿಗೆ ನೀಡಿದರು. ಬಳಿಕ ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಅತಿಹೆ ಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ೧ ರಿಂದ ೧೦ನೇ ತರಗತಿಯ ಜನಾಂಗ ದ ಮಕ್ಕಳಿಗೆ ನೋಟ್‌ಪುಸ್ತಕ, ಲೇಖನಿ ನೀಡಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀಧರ್‌ಮೋಹನ್, ಸಹ ಕಾರ್ಯದರ್ಶಿ ಕಾಂತರಾಜ್, ಸವಿತಾ ಸಮಾಜದ ಅಧ್ಯಕ್ಷ ಸಿ.ಎಂ.ಯೋಗೀಶ್, ಸಮಾಜದ ಮುಖಂಡರುಗಳಾದ ಎನ್.ಗಿರೀಶ್, ಹರೀಶ್, ಎನ್.ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.