ಕಲಬುರಗಿ: ಪ್ರೀತಿ, ಪ್ರೇಮದ ಬಗ್ಗೆ ಬರೆಯದೇ ಸಮಾಜದಲ್ಲಿ ನಡೆಯುವ ಭ್ರಷ್ಟಾಚಾರ, ಅನೀತಿಗಳ ನ್ಯೂನ್ಯತೆ ಬಗ್ಗೆ ಕವಿಗಳು ಕಾವ್ಯದಲ್ಲಿ ಬಿಂಬಿಸಬೇಕು ಎಂದು ಸಾಹಿತಿ ಡಾ.ಹನುಮಂತರಾವ ಬಿ.ದೊಡ್ಡಮನಿ ಹೇಳಿದರು.
ಕೃಷ್ಣಾ ನಗರದ ವೇಣುವನದಲ್ಲಿ ರ‍್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವೇದಿಕೆ, ರಾಮಪ್ಪ ಗೋನಾಲ ಸಾಹಿತ್ಯ, ಸಾಂಸತಿಕ ಪ್ರತಿಷ್ಠಾನದ ಸಹಯೋಗದಲ್ಲಿ ರ‍್ಪಡಿಸಿದ್ದ ಯುಗಾದಿ, ರಂಜಾನ್ ಹಬ್ಬದ ಭಾವೈಕ್ಯತೆ ಕವಿಗೋಷ್ಠಿಯಲ್ಲಿ ಮಾತನಾಡಿ, ಕವಿಗಳ ಅಂತರಂಗದ ಭಾವನೆ ಅಭಿವ್ಯಕ್ತಿಸುವ ದಿಟ್ಟ ನಿಲುವು ಹೊಂದಬೇಕು ಎಂದರು.
ಮುಖ ನೋಡಿ ವಿರ‍್ಶೆ ಮಾಡಬಾರದು. ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಪಿಎಚ್.ಡಿಗಳು ಇಂತಹ ದುಸ್ಥಿತಿಗೆ ಬಂದಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿದ್ಧರಾಮ ಹೊನ್ಕಲ್ ಮಾತನಾಡಿ, ಜನರ ನೋವಿಗೆ ಮಿಡಿಯುವ ಪ್ರಾಣ ಮಿತ್ರರಂತೆ ಕವಿಗಳು ಕೆಲಸ ಮಾಡಬೇಕು ಎಂದರು.
ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಲಿಂಗಪ್ಪ ಗೋನಾಲ ಮಾತನಾಡಿ, ಕಾವ್ಯಗಳು ಸಮಕಾಲೀನ ಸಮಸ್ಯೆಗೆ ಮುಖಾಮುಖಿ ಆಗಬೇಕು. ಕವಿಯಾದವ ಸುತ್ತಲಿನ ಜನರೊಂದಿಗೆ ಬೆರೆತು ಜೀವನಕ್ರಮಗಳನ್ನು ಕಾವ್ಯದಲ್ಲಿ ಅಡಕಗೊಳಿಸಬೇಕು ಎಂದರು.
ಸಾಹಿತಿ ಡಾ ಸದಾನಂದ ಪರ‍್ಲ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರಾದ ಡಾ.ಬಸವರಾಜ ಕೊನೇಕ್, ಡಾ.ಜಯದೇವಿ ಗಾಯಕವಾಡ,ಈಶ್ವರಪ್ಪ ಕಟ್ಟಿಮನಿ,ಡಾ.ಚಂದ್ರಕಲಾ ಬಿದರಿ, ಡಾ.ಸಿದ್ಧರಾಮ ಹೊನ್ಕಲ್, ಅವರನ್ನು ರಾಮಪ್ಪ ಗೋನಾಲ ಪ್ರತಿಫಿ್ಠಾನ ದಿಂದ ಸನ್ಮಾನಿಸಲಾಯಿತು.
ಡಾ.ಶೀಲಾದೇವಿ ಬಿರಾದಾರ, ಡಾ.ದೇವೇಂದ್ರಪ್ಪ ಕಟ್ಡಿಮನಿ, ಉಷಾ ಗಬ್ಬೂರು, ಸಿದ್ಧರಾಮ ಸರಸಂಬಿ, ರೇಣುಕಾ ಬೆಸ್.ಎಚ್., ಡಾ.ಸುನೀತಾ ಮಾಳಗೆ, ಡಾ.ನಾಗಪ್ಪ ಗೋಗಿ, ಪ್ರಿಯಾಂಕ ಮಾವಿನ, ಭೀಮರಾವ ಹೇಮನೂರು, ರಮೇಶ ಯಾಳಗಿ, ಮಮತಾ ಜಾನೆ, ಡಾ.ಅವಿನಾಶ ದೇವನೂರು, ರೇಣುಕಾ ಹೆಳವರ, ಡಾ.ರಾಜಶೇಖರ ಮಾಂಗ್, ಡಾ.ಸುಖದೇವಿ ಂಟಿ, ಡಾ.ಕಪಿಲ್ ಚಕ್ರರ‍್ತಿ, ಸುಹಾಸಿನಿ.ಜಿ., ಸಾಕ್ಷಿ ಜಿ., ವಿಕಾಸ ಹಿರೇಮಠ, ಅನಸೂಯಾ ಬಾಯಿ ನಾಗನಳ್ಳಿ, ಸಿ.ಎಸ್.ಮಾಲಿಪಾಟೀಲ್, ಸಂತೋಷ ಕರಹರಿ, ಬಸಮ್ಮ ಸಜ್ಜನ, ಸುರೇಶ ಹೇರೂರು, ವೆಂಕಟೇಶ ಕೆ.ಜನಾದ್ರಿ, ಹಿರಗಪ್ಪ ಬರಗಾಲಿ, ದೇವರಾಜ ಭಂಡಾರಿ ಇತರರು ಕವನ ವಾಚಿಸಿದರು.
ಸಿಯುಕೆ ಸಂಗೀತ ವಿಭಾಗದ ಡಾ.ಸ್ವಪ್ನಿಲ್, ಚಂದ್ರಕಾಂತ ಚಾಪೇಕರ್ ಪ್ರರ‍್ಥನೆ ನಡೆಸಿದರು. ರ‍್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಚಂದ್ರಕಲಾ ಬಿದರಿ ಪ್ರಾಸ್ತಾವಿಕ ಮಾತನಾಡಿದರು. ಚಕೋರ ವೇದಿಕೆ ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ್ ಮತ್ತು ಡಾ.ರಾಜಕುಮಾರ ಮಸಳಗೆ ನಿರೂಪಣೆ ಮಾಡಿದರು. ಡಿ.ಪಿ ಸಜ್ಜನ ವಂದಿಸಿದರು.