ಕುನ್ನಾಳ ಗ್ರಾಮದ ಪಿಎಂಶ್ರೀ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶಾಸಕ ಅಶೋಕ ಪಟ್ಟಣ ಉಚಿತ ನೋಟ್​ಬುಕ್​ ಹಾಗೂ ಬ್ಯಾಗ್​ ವಿತರಿಸಿದರು. ಸುರೇಶ ಪತ್ತೇಪುರ, ಕೃಷ್ಣಗೌಡ ಪಾಟೀಲ ಇತರರಿದ್ದರು. 
ಜಿಲ್ಲೆ

ಸಮಾಜದ ಕಟ್ಟಕಡೆಯ ಮಗುವಿಗೂ ಸಿಗಲಿ ಶಿಣ


ರಾಮದುರ್ಗ: ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ಮಗುವಿಗೂ ಗುಣಾತ್ಮಕ ಶಿಣ ನೀಡುವುದು ಅವಶ್ಯಕವಾಗಿದ್ದು, ಸಮಾಜದ ಕಟ್ಟಕಡೆಯ ಮಗುವಿಗೂ ಉತ್ತಮ ಶಿಣ ಖಾತ್ರಿಪಡಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ತಾಲೂಕಿನ ಕುನ್ನಾಳ ಗ್ರಾಮದಲ್ಲಿ ಶನಿವಾರ ಪಿಎಂಶ್ರೀ ಸರ್ಕಾರಿ ಶಾಲೆಯ ಎರಡು ಸ್ಮಾರ್ಟ್​ಕ್ಲಾಸ್​, ಎರಡು ಹೈಟೆಕ್​ ನಲಿ&ಕಲಿ ತರಗತಿ ಉದ್ಘಾಟನೆ, ಪಿಎಂಶ್ರೀ ಯೋಜನೆಯ ವಿವಿಧ ಚಟುವಟಿಕೆಗಳಿಗೆ ಚಾಲನೆ ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ಸ್ವಂತ ಖರ್ಚಿನಿಂದ ಉಚಿತ ನೋಟ್​ಬುಕ್​ ಹಾಗೂ ಬ್ಯಾಗ್​ ವಿತರಿಸಿ ಅವರು ಮಾತನಾಡಿದರು. ಕುನ್ನಾಳ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಬಾಲಕರ ವಸತಿ ನಿಲಯ, ಪ್ರೌಢಶಾಲೆ ಹಾಗೂ ಇನ್ನಿತರ ಎಲ್ಲ ಸೌಲಭ್ಯಗಳನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಪಿಎಂಶ್ರೀ ಯೋಜನೆಯ ನೋಡಲ್​ ಶಿಕ ಉಮೇಶ್ವರ ಮರಗಾಲ ಪ್ರಾಸ್ತಾವಿಕ ಮಾತನಾಡಿದರು. ಬೆಂಗಳೂರಿನ ಪ್ರತಾಪ ಪರಾಶರ ನೇತೃತ್ವದ ಸುಂದರ ಭಾರತ ಟ್ರಸ್ಟ್​ನವರು ರಾಮದುರ್ಗ ತಾಲೂಕಿನ ವಿವಿಧ ಶಾಲೆಗಳ ಗ್ರಂಥಾಲಯಗಳಿಗೆ ನೀಡಿರುವ ಪುಸ್ತಕ ಹಾಗೂ ಶಬ್ದಕೋಶ ಹಾಗೂ ಗ್ರಾಮದ ತುಂಗಾತಾಯಿ ಮಳಲಿ ಅವರು 5ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿದರು.

ಕೆಪಿಸಿಸಿ ಸದಸ್ಯ ಸುರೇಶ ಪತ್ತೇಪುರ, ಯೂತ್​ ಕಾಂಗ್ರೆಸ್​ ಅಧ್ಯ ಕೃಷ್ಣಗೌಡ ಪಾಟೀಲ, ಹುಲಕುಂದ ಸಮೂಹ ಸಂಪನ್ಮೂಲ ವ್ಯಕ್ತಿ ಪಿ.ಎಂ.ಮಂಟೂರ, ಎಸ್​ಡಿಎಂಸಿ ಪದಾಧಿಕಾರಿಗಳು, ದಾನಿಗಳು, ಮುಖಂಡರು, ಹಳೆಯ ವಿದ್ಯಾರ್ಥಿಗಳು, ಶಿಕ ಸಿಬ್ಬಂದಿ ಇದ್ದರು. ಎ್​.ಎನ್​.ಕುರಬೇಟ ಸ್ವಾಗತಿಸಿದರು. ಎಸ್​.ಎ.ಕಳ್ಳಿ ವಂದಿಸಿದರು.