ರಾಮನಾಥಪುರದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶರಣರ ವಚನಗಳ ಪುಸ್ತಕಗಳನ್ನು ವಿತರಿಸಲಾಯಿತು. ಕುಮಾರಸ್ವಾಮಿ, ಶೇಷಕುಮಾರ್ ಇತರರಿದ್ದರು. 
ಜಿಲ್ಲೆ

ಸಮಾಜದ ಒಳಿತಿಗೆ ಸುತ್ತೂರು ಶ್ರೀ ಗಳ ಕೊಡುಗೆ ಅಪಾರ

ಅರಕಲಗೂಡು: ಶಿವ ಶರಣ ವಚನ ಸಾಹಿತ್ಯದ ಬೆಳವಣಿಗೆಗೆ ಡಾ.ರಾಜೇಂದ್ರ ಸ್ವಾಮೀಜಿ ಹಾಗೂ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಕೊಡುಗೆ ಅಪಾರ ಎಂದು ಅರೇಮಾದನಹಳ್ಳಿ ಮಹಾಸಂಸ್ಥಾನ ಪೀಠದ ಕಾರ್ಯದರ್ಶಿ ಶೇಷಕುಮಾರ್ ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ತಾಲೂಕಿನ ರಾಮನಾಥಪುರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹಿರೇಮಗಳೂರು ಲಿಂಗೈಕ್ಯ ಶಿವರುದ್ರೇಗೌಡ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶರಣ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಎಂ.ಎನ್.ಕುಮಾರಸ್ವಾಮಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಸಂಚಾಲಕ ಬಿ.ಎನ್. ಮೋಕ್ಷ, ಕಾರ್ಯದರ್ಶಿ ಶ್ರೀನಿವಾಸ್, ಮುಖ್ಯೋಪಾಧ್ಯಾಯ ವಿ.ಬಿ. ರವಿ, ಶಿಕ್ಷಕರಾದ ಜಿ.ಎಂ. ಶಿವರಾಜ್, ಲೋಕೇಶ್, ಕದಳಿ ಮಹಿಳಾ ವೇದಿಕೆ ಸದಸ್ಯೆ ವೀಣಾ ರಾಜಶೇಖರ್ ಇತರರಿದ್ದರು. ಮಕ್ಕಳಿಗೆ ಶರಣರ ವಚನ ಸಾಹಿತ್ಯ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.