ರಾಯಚೂರು ತಾಲೂಕಿನ ಶಾಖವಾದಿ ಗ್ರಾಮದಲ್ಲಿ ಎಸ್‌ಇಸಿಟಿ, ಜೆಎಂಎಸ್ ಮತ್ತು ಸೇವಾ ಸಮಾಜ ವಿಜ್ಞಾನ ಕಾಲೇಜುಗಳಿಂದ ಹಮ್ಮಿಕೊಂಡಿದ್ದ ಸಮಾಜ ಕಾರ್ಯ ಶಿಬಿರವನ್ನು ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ ಉದ್ಘಾಟಿಸಿದರು. ಎಸ್‌ಇಆರ್‌ಡಿ ಸೊಸೈಟಿ ಅಧ್ಯಕ್ಷ ಡಾ.ಶರಣಬಸವ ಪಾಟೀಲ್ ಜೋಳದೆಡಗಿ, ಆಡಳಿತ ಮಂಡಳಿ ಸದಸ್ಯ ಬಸವರಾಜ, ಪ್ರಾಚಾರ್ಯರಾದ ಎಂ.ಜಿ.ಮಾರುತಿ, ಶಿವಕುಮಾರ, ಶಶಿಧರ, ಪರಶುರಾಮ ಕುರ್ಡಿ, ಭೀಮರಾಯ ರಸ್ತಾಪುರ ಇದ್ದರು. 
ಜಿಲ್ಲೆ

ಸಮಾಜದ ಒಳತಿಗಾಗಿ ಜೀವನ ಸಾಗಿಸಬೇಕು

ರಾಯಚೂರು: ನಿಸರ್ಗ ನಮಗೆ ಯಾವುದೇ ಲಾಪೇಕ್ಷೆಯಿಲ್ಲದೆ ಸಂಪನ್ಮೂಲ ಒದಗಿಸುತ್ತಿದ್ದು, ಮನುಷ್ಯ ಕೂಡಾ ಸಮಾಜ ಒಳಗಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಜೀವನ ಸಾಗಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ ಹೇಳಿದರು.
ತಾಲೂಕಿನ ಶಾಖವಾದಿ ಗ್ರಾಮದಲ್ಲಿ ಎಸ್‌ಇಸಿಟಿ, ಜೆಎಂಎಸ್ ಮತ್ತು ಸೇವಾ ಸಮಾಜ ವಿಜ್ಞಾನ ಕಾಲೇಜುಗಳಿಂದ ಹಮ್ಮಿಕೊಂಡಿದ್ದ ಸಮಾಜ ಕಾರ್ಯ ಶಿಬಿರವನ್ನು ಬುಧವಾರ ಸಂಜೆ ಉದ್ಘಾಟಿಸಿ ಮಾತನಾಡಿ, ಶಿಬಿರದಲ್ಲಿ ವಿದ್ಯಾರ್ಥಿಗಳು ಗ್ರಾಮೀಣ ಜನರ ಜೀವನದ ಅಧ್ಯಯನ ಕೈಗೊಂಡು ಅವರ ಜೀವನ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ವೌಢ್ಯತೆ, ಅನಕ್ಷರತೆ, ಮೂಢನಂಬಿಕೆಗಳನ್ನು ಕ್ಕರಿಸಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಜನರು ಪೂರಕವಾಗಿ ಕೆಲಸ ಮಾಡುವಂತೆ ವಿದ್ಯಾರ್ಥಿಗಳು ಅವರಲ್ಲಿ ಜಾಗೃತಿ ಮೂಡಿಸಬೇಕು ಎಂದು ಎನ್.ಶಂಕ್ರಪ್ಪ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಇಆರ್‌ಡಿ ಸೊಸೈಟಿ ಅಧ್ಯಕ್ಷ ಡಾ.ಶರಣಬಸವ ಪಾಟೀಲ್ ಜೋಳದೆಡಗಿ ಮಾತನಾಡಿ, ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದರ ಜತೆಗೆ ಗ್ರಾಮೀಣ ಪ್ರದೇಶದಲ್ಲಿನ ಜನರ ಬದುಕು, ಬವಣೆಗಳನ್ನು ಅಧ್ಯಯನ ಮಾಡಬೇಕು.
ಭಾರತ ವಿವಿಧತೆಯಲ್ಲಿ ಏಕತೆ ಕಂಡಂತೆ, ದೇಶದದ ಸಂಸ್ಕೃತಿ, ಸಂಪ್ರದಾಯಗಳು ಇಂದಿಗೂ ಹಳ್ಳಿಗಳಲ್ಲಿ ಕಾಣಬಹುದಾಗಿದೆ. ಗಾಂೀಜಿಯವರ ಹಳ್ಳಿಗಳ ಉದ್ಧಾರ ದೇಶದ ಉದ್ಧಾರ ಎನ್ನುವ ಧ್ಯೇಯವನ್ನು ನಾವೆಲ್ಲರೂ ಮನಗಾಣಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸಿದ್ದಮ್ಮ, ಮಾಜಿ ಸದಸ್ಯರಾದ ಮೈಲಾರಿ, ಹಂಪಯ್ಯಸ್ವಾಮಿ, ಆಡಳಿತ ಮಂಡಳಿ ಸದಸ್ಯ ಬಸವರಾಜ, ಪ್ರಾಚಾರ್ಯರಾದ ಎಂ.ಜಿ.ಮಾರುತಿ, ಶಿವಕುಮಾರ, ಶಶಿಧರ, ಪರಶುರಾಮ ಕುರ್ಡಿ, ಭೀಮರಾಯ ರಸ್ತಾಪುರ, ಉಪನ್ಯಾಸಕರಾದ ತಿಮ್ಮಪ್ಪ ಅಸ್ಕಿಹಾಳ, ಹನುಮಂತು ಹೊಸಪೇಟೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.