ಯಾದಗಿರಿ: ಆರ್ಯ ಈಡಿಗ ಸಮಾಜದ ಅಭಿವೃದ್ಧಿಗೆ ಸದಾ ಶ್ರಮಿಸುವುದಾಗಿ ಎಂಎಲ್‌ಸಿ ಜಗದೇವ ಗುತ್ತೇದಾರ್ ಹೇಳಿದರು.
ನಗರದಲ್ಲಿ ಸಮಾಜದ ಜಿಲ್ಲಾ ಘಟಕದಿಂದ ಸೋಮವಾರ ಸಂಜೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಡಿಗ ಸಮಾಜದ ಜನರು ಅಪಾರ ಸಂಖ್ಯೆಯಲ್ಲಿದ್ದಾರೆ. ರಾಜಕೀಯ ಮತ್ತು ಸಾಮಾಜಿಕವಾಗಿ ಬೆಳೆಯುವ ನಿಟ್ಟಿನಲ್ಲಿ ಒಗ್ಗಟ್ಟಿನ ಅವಶ್ಯಕತೆ ಮುಖ್ಯವಾಗಿದ್ದು, ಎಲ್ಲರೂ ಸಂಘಟಿತರಾಗಬೇಕು. ಅಲ್ಲದೆ ಸಮಾಜದ ಅಭಿವೃದ್ಧಿಗೆ ಮತ್ತು ಮಕ್ಕಳ ಶಿಕ್ಷಣಕ್ಕೆ ಜಿಲ್ಲೆಯ ಮುಖಂಡರು ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಜಿಲ್ಲೆಯ ಸಮಾಜದ ಮುಖಂಡರು ಮನವಿ ಸಲ್ಲಿಸಿದಾಗ, ದಿನಾಂಕ ನಿಗದಿಗೊಳಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಭೇಟಿ ಮಾಡಿ ಆ ಮೂಲಕ ಬೇಡಿಕೆ ಈಡೇರಿಸುವುದಾಗಿ ಹೇಳಿದರು.
ಸಮಾಜದ ಜಿಲ್ಲಾಧ್ಯಕ್ಷ ಮಹೆಂದ್ರಕುಮಾರ ಅನಪುರ, ಮಾರ್ಗದರ್ಶಕ ಮಲ್ಲಿಕಾರ್ಜುನ್ ಪೊಲೀಸ್, ರಾಮಯ್ಯ ಶಾಬಾದಿ, ಸುಭಾಷ ಕಲಾಲï ಮುಂಡರಗಿ, ನಾಗರಾಜಗೌಡ ಮನಸಗಲ್ ಮಾತನಾಡಿದರು. ಮಲ್ಲಿಕಾರ್ಜುನ ಶಾಬಾದಿ, ನರೇಂದ್ರಗೌಡ ಮಾನಸಗಲï, ಅಂಬಯ್ಯ ಶಾಬಾದಿ ಹಾಗೂ ಸಮಾಜದ ವಿವಿಧ ಘಟಕಗಳ ಪದಾಧಿಕಾರಿಗಳಾದ ದೇವಪ್ಪಗೌಡ ಗುತ್ತೇದಾರ್, ಸೂರ್ಯಕಾಂತ ಕಟ್ಟಿಮನಿ, ವೆಂಕಟೇಶ ಕಲಾಲï, ಮರೆಪ್ಪ ಇಬ್ರಾಹಿಂಪುರ, ನಂದಕುಮಾರ ಜಿ¯್ಲÁಪುರ, ಮಾರುತಿ ಕಲಾಲï, ಕಾಶಪ್ಪ ಗುತ್ತೇದಾರ್, ಲಕ್ಷಿö್ಮÃಕಾಂತ ನಿಡಜಿಂತಿ, ಆಂಜನೇಯ ಕಲಾಲ್, ಬಾಲಾಜಿ ಪೊಲೀಸ್, ಶಿವಶರಣುಗೌಡ ಕಲಾಲï, ರಾಘವೇಂದ್ರ ಕಲಾಲï, ದತ್ತು ಗುತ್ತೇದಾರ್ ಇತರರಿದ್ದರು.