ಜಿಲ್ಲೆ

ಸಮಾಜದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಮುಖ್ಯ

ಗೋಣಿಕೊಪ್ಪಲು: ಯಾವುದೇ ಸಮಾಜ ಅಭಿವೃದ್ಧಿ ಹೊಂದಬೇಕೆಂದರೆ ಅಲ್ಲಿಯ ಮಹಿಳೆಯರು ಎಲ್ಲ ರಂಗದಲ್ಲೂ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಸಾಧ್ಯ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹೇಳಿದರು.

ಹಾತೂರಿನ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಭಗವತಿ ಯುವತಿ ಮಂಡಳಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಭಗವತಿ ಯುವತಿ ಮಂಡಳಿ ಅವರು ಹಲವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಜನಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದು ನಾಡಿನ ಇತರ ಮಹಿಳೆಯರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸ್ಥಳೀಯ ದಾನಿ ಗಿಣಿ ಗಣಪತಿ ಅವರು ಹಾತೂರು ಶಾಲೆಗೆ ಹಾಗೂ ಕೆಲವು ಫಲಾನುಭವಿಗಳಿಗೆ ಧನ ಸಹಾಯ ಮಾಡಿದರು. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೋಡಂದೇರ ಬಾಂಡ್ ಗಣಪತಿ, ಗ್ರಾಮ ಪಂಚಾಯತಿ ಅಧ್ಯಕ್ಷ ಕೊಕ್ಕಂಡ ನಮಿತ ಬಿದ್ದಪ್ಪ, ಉಪಾಧ್ಯಕ್ಷ ಕುಲಚಂಡ ಎಸ್ ಚಿಣ್ಣಪ್ಪ, ಚಂದ್ರಶೇಖರ್, ಕೊಂಗಂಡ ಗಿರಿಜಾ ಪೊನ್ನಮ್ಮ, ದೊಡ್ಡಮನೆ ಭೋಜಮ್ಮ, ಕೊಂಗೇಪಂಡ ಸುಶೀಲಾ ಮಾಚಯ್ಯ, ಗ್ರಾಮ ಪಂಚಾಯಿತಿ ಸದಸ್ಯರು ಕೊಕ್ಕಂಡ ಗಿಣಿ ಗಣಪತಿ, ಹಾತೂರು ಭಗವತಿ ಯುವತಿ ಮಂಡಳಿಯ ಅಧ್ಯಕ್ಷರು ಕೊಕ್ಕಂಡ ರೂಪಾ ಭೀಮಯ್ಯ, ಕಾರ್ಯದರ್ಶಿ ಕುಪ್ಪಂಡ ಮಲಾ ಪೂವಮ್ಮ ಇತರರಿದ್ದರು.