ಜಿಲ್ಲೆ

ಸಮಾಜಕ್ಕೆ ಜನಸೇವೆಯ ಧರ್ಮಗುರುಗಳ ಅಗತ್ಯವಿದೆ

ಚಾಮರಾಜನಗರ: ಜನಸೇವೆಗಾಗಿ ತಮ್ಮ ಇಡೀ ಜೀವಮಾನವನ್ನು ಮುಡಿಪಾಗಿಟ್ಟಿದ್ದ ಫಾದರ್ ಎಸ್.ಡಿ.ಜೋಸೆಫ್ ಅವರಂತಹ ಧರ್ಮಗುರುಗಳ ಅವಶ್ಯಕತೆ ಸಮಾಜಕ್ಕೆ ಅಗತ್ಯವಾಗಿದೆ ಎಂದು ಧರ್ಮಗುರು ಫಾದರ್ ಜ್ಞಾನ ಪ್ರಕಾಶ್ ಹೇಳಿದರು.

ತಾಲೂಕಿನ ನಾಗವಳ್ಳಿ ಗ್ರಾಮದ ಯೇಸುವಿನ ಪವಿತ್ರ ಹೃದಯ ದೇವಾಲಯದಲ್ಲಿ ಗುರುವಾರ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಾದರ್ ಎಸ್.ಡಿ.ಜೋಸ್ೆ ಅವರು ಜನರ ಸೇವೆಗಾಗಿ ತಮ್ಮ ಜೀವಮಾನವನ್ನು ಮುಡಿಪಾಗಿಟ್ಟಿದ್ದರು. ಅವರ ದಾನ-ಧರ್ಮ ಸದಾಕಾಲ ನೆನಪಲ್ಲಿಡುವಂತದ್ದಾಗಿದೆ. ಉತ್ತಮ ಆದರ್ಶವಾದ ಜೀವನವನ್ನು ನಡೆಸಿದ್ದರು. ಇಂತಹ ಧರ್ಮಗುರುಗಳು ಪ್ರಸ್ತುತ ಸಮಾಜಕ್ಕೆ ಅಗತ್ಯವಾಗಿದೆ. ಅವರು ಎಳೆದುಕೊಂಡು ಬಂದಿರುವ ಧಾರ್ಮಿಕ ತೇರನ್ನು ಪ್ರತಿಯೊಬ್ಬರು ಸೇರಿ ಮುನ್ನಡೆಸಬೇಕಿದೆ ಎಂದು ಹೇಳಿದರು.

ನಾಗವಳ್ಳಿ ಗ್ರಾಮದ ಯೇಸುವಿನ ಪವಿತ್ರ ಹೃದಯ ದೇವಾಲಯದಲ್ಲಿ ಸೇವೆ ಸಲ್ಲಿಸಿದ ಸಂಧರ್ಭದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ದೇವಾಲಯ ನಿರ್ಮಾಣ, ಶಾಲೆ, ಆಸ್ಪತ್ರೆ ಹಾಗೂ ಮಹಿಳಾ ಸಂಘಗಳ ಸ್ಥಾಪನೆ ಮಾಡಿದ್ದರು. ಅವರ ಸೇವೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಫಾದರ್‌ಗಳಾದ ಅಂತೋಣಿಸ್ವಾಮಿ, ಎಲ್.ಜೋನಾಸ್, ನಿರ್ಮಲ್ ಕುಮಾರ್, ವಿನ್ಸೆಂಟ್, ಆರೋಗ್ಯ ನಾದನ್, ಉಪನ್ಯಾಸಕ ಸ್ಟೀವನ್, ಅರುಳಪ್ಪ, ಅಂತೋನಿ ನಿಕೊಲಾಸ್, ಟೋನಿ, ದೊರೆ, ಅನಿಲ್ ಸೆಲ್ವರಾಜ್, ಸುನೀಲ್ ಬಾಸ್ಕೋ ಹಾಗೂ ಇತರರು ಭಾಗವಹಿಸಿದ್ದರು.