ಜಿಲ್ಲೆ

ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿ

ಚಿತ್ರದುರ್ಗ: ಧನಾತ್ಮಕ ಚಿಂತನೆಯೊಂದಿಗೆ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವಂತೆ ವಿನ್ನರ್ ಅಕಾಡೆಮಿ ಸಂಸ್ಥಾಪಕ ಶಿವರಾಜ್ ಕಬ್ಬೂರ್ ಸ್ಪರ್ಧಾತ್ಮಕ ಪರೀಕ್ಷಾ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ತರಬೇತಿ ಕೇಂದ್ರ ಹಾಗೂ ಕಬ್ಬೂರ್ ಎಜುಕೇಷನ್ ಸೊಸೈಟಿಯಿಂದ ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಏರ್ಪಡಿಸಿದ್ದ ಪೋಲೀಸ್ ಕಾನ್ಸ್‌ಟೇಬಲ್ ನೇಮಕ ಪರೀಕ್ಷೆ ವಸತಿಯುತ ಪೂರ್ವ ತರಬೇತಿಯ ಸಮಾರೋಪದಲ್ಲಿ ಮಾತನಾಡಿದರು. ಯವಜನರು ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದರು.

ಮೈಸೂರಿನ ಕುಮಾರ್ ಮಾತನಾಡಿ, ಸತತ ಪ್ರಯತ್ನದಿಂದ ಯಶಸ್ಸು ಗಳಿಸಲು ಸಾಧ್ಯ ಎಂದರು. ದೈಹಿಕ ಶಿಕ್ಷಣ ಉಪನ್ಯಾಸಕರಾದ ಬಿ.ಎಂ. ಸುನೀಲ್‌ಕುಮಾರ್, ಎನ್‌ಸಿಸಿ ಅಧಿಕಾರಿ ಜಿ. ರಂಗನಾಥ್, ರಮೇಶ್ ಇತರರಿದ್ದರು.