ಕಲಬುರಗಿ: ತ್ಯಾಗ ಮತ್ತು ಸೇವೆಯ ಮೂಲಕ ಸರ್ವ ಜನಾಂಗದ ಜನರಲ್ಲಿ ಉತ್ತಮ ಬೆಳಕು ಕೊಟ್ಟವರು ಲಿಂಗೈಕ್ಯ ಡಿ.ವಿ.ಪಾಟೀಲ್ ಎಂದು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಾ.ಅರುಣಕುಮಾರ ಪಾಟೀಲ ಅಭಿಪ್ರಾಯಪಟ್ಟರು.
ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದ ಲಿಂ.ಡಿ.ವಿ.ಪಾಟೀಲ ಸ್ಮರಣಾರ್ಥ ನಗರದ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಸೇಡಂ ರಸ್ತೆಯ ವಿ.ವಿ.ಹಾಸ್ಟೆಲ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಧೈರ್ಯನಿಧಿ' ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಪಂ ಸದಸ್ಯ ಅರುಣಕುಮಾರ ಪಾಟೀಲ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ಲಿಂಗಾಯತರಿಗೆ ಡಿ.ವಿ.ಪಾಟೀಲ್ ಧೈರ್ಯದ ನಿಧಿಯಂತೆ ಇದ್ದರು ಎಂದರು. ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪಿ ಪ್ರಾಸ್ತಾವಿಕ ಮಾತನಾಡಿದರು. ಬಸವೇಶ್ವರ ಸಹಕಾರ ಬ್ಯಾಂಕಿನ ನಿದರ್ೇಶಕಿ ಸುಶೀಲಾಬಾಯಿ ಪಾಟೀಲ, ಉಪಾಧ್ಯಕ್ಷ ಎಂ.ಡಿ.ಪಾಟೀಲ, ಜಿಲ್ಲಾ ವೀರಶೈವ ಮಹಾಸಭಾ ಯುವ ಅಧ್ಯಕ್ಷ ಡಾ.ಶಂಭುಲಿಂಗ ಪಾಟೀಲ ಬಳಬಟ್ಟಿ, ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ ನೆಲೋಗಿ, ವಿಜಯಕುಮಾರ ಪಾಟೀಲ ಸೇಡಂ, ಶಿವರಾಜ ಅಂಡಗಿ, ಮಹಾಂತೇಶ ಪಾಟೀಲ, ಭುವನೇಶ್ವರಿ ಹಳ್ಳಿಖೇಡ, ಪ್ರಭವ ಪಟ್ಟಣಕರ್, ಶಿವಾನಂದ ಮಠಪತಿ, ಎಸ್.ಎಂ.ಪಟ್ಟಣಕರ್ ಇದ್ದರು. ಎಸ್.ಎಂ.ಧುಲಂಗೆ, ಡಾ.ಅಮೃತಪ್ಪ ಅಣೂರ ಕವಿ, ಶರಣು ಪಪ್ಪಾ, ಜಯಶ್ರೀ ದೊಡ್ಮನಿ, ಉದಯಕುಮಾರ ಸಾಲಿ ಅವರಿಗೆಧೈರ್ಯನಿಧಿ' ಪ್ರಶಸ್ತಿ ನೀಡಲಾಯಿತು. ಕರೊನಾ ವಿರುದ್ಧ ಯೋಧರಂತೆ ಹೋರಾಡುತ್ತಿರುವ ನೂರಾರು ಜನ ಕರೊನಾ ಸೇನಾನಿಗಳನ್ನು ಸತ್ಕರಿಸಲಾಯಿತು.
ಆರ್.ಜಿ.ಶಟಗಾರ, ಎಸ್.ಎನ್.ಪುಣ್ಯಶೆಟ್ಟಿ, ಹಣಮಂತ ಅಟ್ಟೂರ, ಬಿ.ಎಂ.ಪಾಟೀಲ ಕಲ್ಲೂರ, ಬಸವರಾಜ ಧೂಳಾಗುಂಡಿ, ಚಂದ್ರಶೇಖರ ತಳ್ಳಳ್ಳಿ, ಕಲ್ಯಾಣಪ್ಪ ಪಾಟೀಲ ಮಳಖೇಡ, ಸಾವಿತ್ರಿ ಕುಳಗೇರಿ, ಜಗದೀಶ ಪಾಟೀಲ, ಸಿದ್ಧರಾಮ ಯಳವಂತಗಿ, ಲಕ್ಷ್ಮೀಕಾಂತ ಜೋಳದ, ಅಪ್ಪು ಗುಬ್ಯಾಡ, ಹಣಮಂತರಾವ ಪಾಟೀಲ ಕುಸನೂರ, ಭೀಮರಾವ ಕಟ್ಟಿಮನಿ, ಜಿ.ವೈ,.ಪಾಟೀಲ, ಎಚ್.ಬಿ.ಪಾಟೀಲ, ಶರಣು ಭಾಗೋಡಿ, ಶರಣು ಮತ್ತಿಮೂಡ, ಶರಣಬಸಪ್ಪ ಆವಂಟಗಿ, ಮಲ್ಲಿನಾಥ ಪಾಟೀಲ, ಬಸವರಾಜ ಮಾಡಗಿ, ಶರಣಪ್ಪ ಬುಳ್ಳಾ, ಪ್ರಶಾಂತ ಗುಡ್ಡಾ ಇತರರು ಇದ್ದರು.