ಕೊಳ್ಳೇಗಾಲ ಪಟ್ಟಣದಲ್ಲಿ ಮಂಗಳವಾರ ಸುವರ್ಣ ಸಂಭ್ರಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಎಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಅವರಿಗೆ ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆ ಸಿಬ್ಬಂದಿ ಸನ್ಮಾನಿಸಿದರು. ರಾಜೇಶ್, ಜಗದೀಶ್, ಭಾಸ್ಕರ್ ಇತರರು ಇದ್ದರು. 
ಜಿಲ್ಲೆ

ಸಮಾಜ ಸೇವೆ ಪವಿತ್ರವಾದ ಕಾರ್ಯ

ಕೊಳ್ಳೇಗಾಲ: ಸಮಾಜ ಸೇವೆ ಎಂಬುದು ಒಂದು ಪವಿತ್ರ ಕಾರ್ಯ ಎಂದು ಕರ್ನಾಟಕ ಸಂಭ್ರಮ-50 ಸುವರ್ಣ ಮಹೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತೆ ಎಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದ ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.

ನಾನು ಸಮಾಜ ಸೇವೆಯಲ್ಲಿ ಯಾವುದೇ ರೀತಿಯ ಫಲಾಪೇಕ್ಷೆ ಬಯಸಿಲ್ಲ. ಮಾಡುವ ಪ್ರತಿಯೊಂದು ಕೆಲಸವೂ ಕೂಡ ಸಮಾಜದ ಒಳಿತಿಗಾಗಿ ಮಾಡಬೇಕು. ಅದರಂತೆ, ನಮ್ಮ ಸಂಸ್ಥೆ ಸೇವೆ ಮಾಡುತ್ತಿದೆ. ದಿ.ಎಚ್. ಕೃಷ್ಣಸ್ವಾಮಿ ಅವರು ಕಷ್ಟದ ದಿನಗಳಲ್ಲಿ ವಿದ್ಯಾಸಂಸ್ಥೆ ತೆರೆದರು. ಶೂನ್ಯ ಬಂಡವಾಳವಿದ್ದರೂ ಏನಾದರೂ ಸಮಾಜಕ್ಕೆ ಮಾಡಬೇಕೆಂದು ಮುಂದಾದರು. ಇಂದು ಅವರು ಹಾಕಿ ಕೊಟ್ಟ ಮಾರ್ಗದಲ್ಲಿಯೇ ಎಚ್.ಕೆ.ಟ್ರಸ್ಟ್ ಕಾರ್ಯ ನಿರ್ವಹಿಸುತ್ತಿದೆ. ಈ ಸೇವೆಯನ್ನು ರಾಜ್ಯ ಸರ್ಕಾರ ಗುರುತಿಸಿ ನನಗೆ ಪ್ರಶಸ್ತಿ ನೀಡಿರುವುದಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಈ ವೇಳೆ ಪ್ರೇಮಲತಾ ಕೃಷ್ಣಸ್ವಾಮಿ ಅವರಿಗೆ ವಿಶ್ವಚೇತನ ವಿದ್ಯಾ ಸಂಸ್ಥೆ ಸಿಬ್ಬಂದಿ ಅಭಿನಂದನೆ ಸಲ್ಲಿಸಿದರು. ವಿಶ್ವ ಚೇತನ ವಿದ್ಯಾಸಂಸ್ಥೆ ಸಂಯೋಜಕ ರಾಜೇಶ್, ಜಗದೀಶ್, ಪ್ರಾಂಶುಪಾಲ ಭಾಸ್ಕರ್, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳಿದ್ದರು.