ರಿಪ್ಪನ್‌ಪೇಟೆಯಲ್ಲಿ ಆಯೋಜಿಸಿದ್ದ ರೋಟರಿ ನೂತನ ಪದಾಕಾರಿಗಳ ಪದಗ್ರಹಣ ಸಮಾರಂಭವನ್ನು ಜಿಲ್ಲಾ ಗವರ್ನರ್ ಬಿ.ಎಂ.ಭಟ್ ಉದ್ಘಾಟಿಸಿದರು. ಎಂ.ಬಿ.ಲಕ್ಷ್ಮಣ ಗೌಡ, ಭರತ್‌ಕುಮಾರ್, ಎಂ.ರಾಮಚಂದ್ರ, ಸೆಬಾಸ್ಟಿನ್ ಇತರರಿದ್ದರು. 
ಜಿಲ್ಲೆ

ಸಮಾಜ ಸೇವೆ ಎಲ್ಲರ ಆದ್ಯತೆಯಾಗಲಿ

ರಿಪ್ಪನ್‌ಪೇಟೆ: ಶ್ರೇಷ್ಠವಾದ ಮಾನವ ಜನ್ಮದಲ್ಲಿ ಪರೋಪಕಾರ ಮಾಡದಿದ್ದರೆ ಜೀವನ ಸಾರ್ಥಕ ಆಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೈಲಾದಷ್ಟು ಸಮಾಜಸೇವೆ ಮಾಡಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ಬಿ.ಎಂ.ಭಟ್ ಹೇಳಿದರು.

ಪಟ್ಟಣದ ವಿಶ್ವಮಾನವ ಸಮುದಾಯ ಭವನದಲ್ಲಿ ಶನಿವಾರ ರೋಟರಿ ಸಂಸ್ಥೆ ಆಯೋಜಿಸಿದ್ದ ನೂತನ ಪದಾಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಸೇವೆ ಎಂಬುದು ಅಂತಾರಾಷ್ಟ್ರೀಯ ಮಟ್ಟದ ರೋಟರಿ ಸಂಸ್ಥೆಯ ಧ್ಯೇಯ ಎಂದರು.

ನೂತನ ಅಧ್ಯಕ್ಷ ಎ.ಎಂ.ಕೃಷ್ಣರಾಜು, ಕಾರ್ಯದರ್ಶಿ ರವೀಂದ್ರ ಬಲ್ಲಾಳ್, ಕಾರ್ಯಕಾರಿ ಸಮಿತಿ ಸದಸ್ಯರು ಅಕಾರ ಸ್ವೀಕರಿಸಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು. ಎಂ.ಬಿ.ಲಕ್ಷ್ಮಣ ಗೌಡ, ಭರತ್‌ಕುಮಾರ್ ಕೋಡ್ಲು, ಎಂ.ರಾಮಚಂದ್ರ, ಸೆಬಾಸ್ಟಿನ್, ಶಿವಕುಮಾರ್ ಶೆಟ್ಟಿ, ಎಂ.ಬಿ.ಮಂಜುನಾಥ ಇತರರಿದ್ದರು.