ಜಿಲ್ಲೆ

ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ

ಶನಿವಾರಸಂತೆ: ರೋಟರಿ ಕ್ಲಬ್ ಶನಿವಾರಸಂತೆ ವತಿಯಿಂದ ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸೇವಕರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ರೋಟರಿ ಜೋನ್-6ರ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್ ಅವರ ಶನಿವಾರಸಂತೆ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ಕಾರ್ಯಕ್ರಮದ ಸಂದರ್ಭ ಸಮೀಪದ ಚಿನ್ನಳ್ಳಿ ಗ್ರಾಮದ ದೇವ್ ರಾಸಾರ್ಟ್‌ನಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ರೋಟರಿ ಕ್ಲಬ್ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ 5 ಮಂದಿ ಸೇವಕರಿಗೆ ಪ್ರಶಸ್ತಿ ನೀಡಿ ಅವರು ಗೌರವಿಸಿದರು.


ಸನ್ಮಾನಿತರು: ಸ್ವಾಮಿ ವಿವೇಕಾನಂದ ಯೂತ್ ಮೊಮೆಂಟ್ ಸೋಮವಾರಪೇಟೆಯ ಕಾರ್ಯಕರ್ತೆ ಸುನಿತಾ, ಶನಿವಾರಸಂತೆ ಹಿಂದು ರುದ್ರಭೂಮಿ ಸಮಿತಿಯ ಲಿಂಗಪ್ಪ, ಗೌಡಳ್ಳಿಯ ಸಮಾಜ ಸೇವಕ ಗಣೇಶ್, ಶನಿವಾರಸಂತೆ ಸಮೂದಾಯ ಆರೋಗ್ಯ ಕೇಂದ್ರದ ಸತ್ಯನಾರಾಯಣ ಹಾಗೂ ಶನಿವಾರಸಂತೆ ಗ್ರಾ.ಪಂ.ನ ತ್ಯಾಜ್ಯ ವಿಲೇವಾರಿ ವಾಹನದ ಚಾಲಕ ನಾಗೇಶ್ ಅವರನ್ನು ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.


ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ.ಜಯಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಸಹಾಯಕ ಗವರ್ನರ್ ಸತೀಶ್‌ಕುಮಾರ್, ವಲಯ ಸೇನಾನಿ ಎಚ್.ವಿ.ದಿವಾಕರ್, ಶನಿವಾರಸಂತೆ ರೋಟರಿ ಕ್ಲಬ್‌ಗೆ ಮುಂದಿನ ಸಾಲಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚಂದ್ರಕಾಂತ್ ಇದ್ದರು. ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು, ವಿವಿಧ ರೋಟರಿ ಕ್ಲಬ್‌ಗಳ ಅಧ್ಯಕ್ಷರು ಸದಸ್ಯರು, ರೋಟರಿ ಕ್ಲಬ್ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.

ಪೋಟೋ7 ಎಸ್‌ಎಸ್12
ರೋಟರಿ ಕ್ಲಬ್ ಶನಿವಾರಸಂತೆ ವತಿಯಿಂದ ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸೇವಕರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಕಾಶ್ ಕಾರಂತ್, ಕೆ.ಪಿ.ಜಯಕುಮಾರ್, ಸುನಿತಾ, ಗಣೇಶ್, ಲಿಂಗಪ್ಪ, ನಾಗೇಶ್ ಇತರರು ಇದ್ದರು.