ಜಿಲ್ಲೆ

ಸಮಾಜ ಸೇವಕ ಜಿ.ಓ. ಮಹಾಂತಪ್ಪ ಅವರ ನಿಧನಕ್ಕೆ: ಶ್ರದ್ಧಾಂಜಲಿ

ಹಾಸನ: ಸಮಾಜ ಸೇವಕ ಜಿ.ಓ. ಮಹಾಂತಪ್ಪ ಅವರ ನಿಧನಕ್ಕೆ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿಯ ವತಿಯಿಂದ ನಗರದ ಕಸಾಪ ಭವನದಲ್ಲಿ
ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ,ಮಹಾಂತಪ್ಪ ಅವರು ನಮ್ಮ ಅವಧಿಯಲ್ಲಿ ತಾಲೂಕು ಮಾಜಿ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದರು.ಕಲಾವಿದರ ಹಿತಕಾಯಲು ಅವರು ಯಾವಾಗಲೂ ಶ್ರಮಿಸುತ್ತಿದ್ದರು.ಆದ್ದರಿಂದ ಕಲಾವಿದರ ಹಿತರಕ್ಷಣಾ ಸಮಿತಿಯ ಸಂಘ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ನಗರದ ಅನೇಕ ಕಡೆ ಮಹಂತಪ್ಪರವರನ್ನು ಸ್ಮರಿಸುವ ಕೆಲಸ ಮಾಡಿದ್ದಾರೆ ಎಂದರು.
ಸಾಹಿತ್ಯ ಪರಿಷತ್ತುನ ನಮ್ಮ ಅವಧಿಯಲ್ಲಿ ಒಂದು ಕಲಾವಿದರ ಕೊಠಡಿ ನಿರ್ಮಾಣ ಮಾಡಬೇಕು ಎನ್ನುವ ಕಲ್ಪನೆ ಇಟ್ಟುಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತನ್ನು ಪುನರ್ ನಿರ್ಮಾಣ ಮಾಡಿ ಇನ್ನೆರಡು ಅಂತಸ್ತಿನ ಕಟ್ಟಡ ಕಟ್ಟುವ ಬಗ್ಗೆ ನಾವುಗಳು ಚರ್ಚೆ ಮಾಡಲಾಗಿತ್ತು. ಇದರಿಂದ ಕಲಾವಿದರಿಗೆ ಅನುಕೂಲವಾಗಲಿದೆ ಎನ್ನುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಯಿತು. ಅದನ್ನು ಮುಂದಿನ ದಿನಗಳಲ್ಲಿ ಮಾಡುವುದಾಗಿ ವಿಶ್ವಾಸವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಿದರೆ ರವಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು, ಸಾಹಿತಿ ಗೊರೂರು ಅನಂತರಾಜು, ಅಂತರರಾಷ್ಟ್ರೀಯ ಕಲಾವಿದ ಗುಂಡೂರಾಜ್, ಮಹಾಂತೇಶ್, ಶೇಖರಪ್ಪ, ರಾಜಶೇಖರ್, ವಿಜಯ ಕುಮಾರ್, ರಮೇಶ್ ಗೌಡಪ್ಪ, ವೇದ ಶಿವಕುಮಾರ್, ಯರೇಹಳ್ಳಿ ಮಂಜೇಗೌಡರು, ಪ್ರಭಾಕರ್, ತಟ್ಟೆಕೆರೆ ಪ್ರಕಾಶ್ ಭಾಗವಹಿಸಿದ್ದರು.