ಕಲಬುರಗಿ: ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳಿಂದ ಪ್ರಭಾವಿತರಾದ ಡಾ.ಮಲ್ಲಿಕರ‍್ಜುನ ರ‍್ಖಗೆ ಅವರು ಉನ್ನತ ಸ್ಥಾನದಲ್ಲಿದ್ದು, ಸಮಾಜ ಸುಧಾರಣೆಗೆ ಹೋರಾಡುತ್ತಿದ್ದಾರೆ. ಅವರೊಬ್ಬ ದೇಶದ ಸವರ‍್ನ್ನತ ನಾಯಕರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಬಣ್ಣಿಸಿದರು.
ಪಾಲಿ ಇನ್ಸ್ಟಿಟ್ಯೂಟ್ ನಳಂದ ಹಾಗೂ ಸಪ್ನ ಬುಕ್ ಹೌಸ್ನಿಂದ ಗುಲ್ರ‍್ಗ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರೊ.ಎಚ್.ಟಿ.ಪೋತೆ ಅವರ "ಸವರ‍್ನ್ನತ ನಾಯಕ ಡಾ. ಮಲ್ಲಿಕರ‍್ಜುನ ರ‍್ಖಗೆ' ಹಾಗೂ ಪ್ರೊ.ಮಲ್ಲೇಪುರಂ ವೆಂಕಟೇಶ ಅವರ "ಪ್ರವಾಸಿಗರು ಕಂಡ ಬೌದ್ಧ ಸಂಸತಿ' ಗ್ರಂಥಗಳನ್ನು ಲೋಕರ‍್ಪಣೆಗೊಳಿಸಿ ಮಾತನಾಡಿ, ದೇವಸ್ಥಾನದ ಮುಂದೆ ಸಾಲುಗಟ್ಟಿ ನಿಲ್ಲುವುದಕ್ಕಿಂತ ಗ್ರಂಥಾಲಯದ ಮುಂದೆ ಸರದಿ ನಿಂತಾಗ ಜಗತ್ತೇ ಗೌರವಿಸುತ್ತದೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಪ್ರೊ.ಕಾ.ವೆಂ.ಶ್ರೀನಿವಾಸ ಮರ‍್ತಿ ಕೃತಿಗಳ ಕುರಿತು ಮಾತನಾಡಿ, ಪ್ರೊ.ಪೋತೆ ಅವರು ರ‍್ಖಗೆ ಅವರ ನ್ಯಾಯ, ಸ್ವಾಭಿಮಾನ ಮತ್ತು ಹೋರಾಟದ ಸಾಂಗತ್ಯಗಳನ್ನು ಬರೆದಿದ್ದಾರೆ. ನ್ಯಾ.ಶಿವರಾಜ ಪಾಟೀಲ್, ದಲಿತ ಕವಿ ಸಿದ್ದಲಿಂಗಯ್ಯ, ಬರಗೂರು ರಾಮಚಂದ್ರಪ್ಪ, ಪ್ರೊ.ಮಲ್ಲೇಪುರಂ ವೆಂಕಟೇಶ, ಪೋತೆ ಅವರ ಸೃಜನಶೀಲ ಬರಹಗಳಲ್ಲಿ ಸಮಾಜಕ್ಕಾಗಿ ಮತ್ತು ಶೋಷಿತರ ಬದುಕಿಗೆ ಧ್ವನಿಯಾದವ ರ‍್ಖಗೆ ಅವರ ವ್ಯಕ್ತಿತ್ವ ಕಾಣುತ್ತದೆ ಎಂದರು.
ಪ್ರೊ.ಮಲ್ಲೇಪುರಂ ವೆಂಕಟೇಶ ಅವರ ಪ್ರವಾಸಿಗರು ಕಂಡ ಬೌದ್ಧ ಸಂಸತಿ ಕೃತಿಯಲ್ಲಿ ಭಾರತ ಪ್ರವಾಸ ಕೈಗೊಂಡ ವಿದೇಶಿ ಪ್ರವಾಸಿಗರು ಭಾರತ ಮತ್ತು ಬೌದ್ಧ ಸಂಸತಿಯ ನೈಜ ಟನೆ ದಾಖಲಿಸಿದ್ದಾರೆ. ಬುದ್ಧ ಮತ್ತು ಬೌದ್ಧ ರ‍್ಮ ಅಧ್ಯಯನ ಮಾಡಲು ವಿದೇಶಗಳ ಅನೇಕ ಸಂತರು, ದರ‍್ಶನಿಕರು ಭಾರತಕ್ಕ ಬಂದಿದ್ದಾರೆ. ೬ ಮುಖ್ಯ ಪ್ರವಾಸಿಗರು, ೧೮ ಜನ ಮೈನರ್ ಪ್ರವಾಸಿಗರ ಬರಹಗಳಿವೆ ಎಂದು ಹೇಳಿದರು.
ಸಂಸತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ವೆಂಕಟೇಶ ಮಾತನಾಡಿ, ನಳಂದ ವಿಹಾರ ಹೇಗಿತ್ತೆಂದು ತಿಳಿಯಲು ಪ್ರವಾಸಿಗರು ಕಂಡ ಬೌದ್ಧ ಸಂಸತಿ ಕೃತಿ ನೆರವಾಗಬಲ್ಲದು. ಜೀವದ ಹಂಗು ತೊರೆದು ಭಾರತಕ್ಕೆ ಪ್ರವಾಸಿಗರು ಬರುತ್ತಿದ್ದರು ಎಂಬುದಕ್ಕೆ ಪುರಾವೆಯಿದೆ ಎಂದರು.
ಕಲಬುರಗಿ ರಂಗಾಯಣ ನಿಕಟಪರ‍್ವ ನರ‍್ದೇಶಕ ಪ್ರಭಾಕರ ಜೋಶಿ ಮಾತನಾಡಿದರು. ಕನ್ನಡ ಅಧ್ಯಯನ ಸಂಸ್ಥೆ ನರ‍್ದೇಶಕ ಪೊ.ಎಚ್.ಟಿ.ಪೋತೆ ಅಧ್ಯಕ್ಷತೆ ವಹಿಸಿದ್ದರು. ಡಾ.ಎಂ.ಬಿ.ಕಟ್ಟಿ ಸ್ವಾಗತಿಸಿದರು. ಡಾ.ಪ್ರೇಮ ಅಪಚಂದ ನಿರೂಪಣೆ ಮಾಡಿದರು.