ಚಿಕ್ಕೋಡಿಯ ಸಂಪಾದನಾ ಚರಮೂರ್ತಿ ಮಠದಲ್ಲಿ ಪುರಸಭೆ ಸದಸ್ಯರನ್ನು ಸತ್ಕರಿಸಲಾಯಿತು. ನಿಡಸೋಸಿ ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ಡಾ.ಶಿವಯೋಗಿ ದೇವರು, ಜಗದೀಶ ಕವಟಗಿಮಠ, ಪ್ರವೀಣ ಕಾಂಬಳೆ, ಸಂಜಯ ಕವಟಗಿಮಠ, ವಿಶ್ವನಾಥ ಕಾಮಗೌಡ ಇತರರಿದ್ದರು. 
ಜಿಲ್ಲೆ

ಸಮಾಜ ಮೇಲೆತ್ತುವ ಕೆಲಸ ಮಾಡಿದ ಹಾನಗಲ್ ಶ್ರೀ

ಚಿಕ್ಕೋಡಿ, ಬೆಳಗಾವಿ: ಮನೆ ಬಾಗಿಲಿಗೆ ಧರ್ಮ ಸಿಗಲಿ ಹಾಗೂ ಜನರಲ್ಲಿ ಮಾನವೀಯ ಮೌಲ್ಯಗಳು ಉಳಿಯಲಿ ಎಂಬ ಉದ್ದೇಶದಿಂದ ಹಾನಗಲ್ ಕುಮಾರಸ್ವಾಮಿಗಳು ಶಿವಯೋಗ ಮಂದಿರ, ವೀರಶೈವ ಮಹಾಸಭೆ ಪ್ರಾರಂಭಿಸಿ ಸಮಾಜ ಮೇಲೆತ್ತುವ ಕೆಲಸ ಮಾಡಿದವರು ಎಂದು ನಿಡಸೋಸಿ ಸಿದ್ದಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಸಂಪಾದನಾ ಚರಮೂರ್ತಿ ಮಠದಲ್ಲಿ ಹಾನಗಲ್ ಕುಮಾರಸ್ವಾಮಿಗಳ 155ನೇ ಜಯಂತಿಯಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಧರ್ಮದ ಜತೆಗೆ ಶಿಕ್ಷಣ ಕೊಡುವ ಕೆಲಸ ಆಗಬೇಕು ಎಂದ ಕುಮಾರಸ್ವಾಮಿಗಳು ಹೇಳಿದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಲ್ಲಿ ಎಲ್ಲ ಸ್ವಾಮೀಜಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು ಎಂದರು.

ಚಿಕ್ಕೋಡಿ ಸಂಪಾದನಾ ಸ್ವಾಮೀಜಿ, ಕಾರಂಜಿಮಠದ ಡಾ.ಶಿವಯೋಗಿ ದೇವರು, ಚಿಂಚಣಿ ಸಿದ್ದಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ, ಎಸ್.ಎಸ್.ಕವಟಲಾಪುರೆ, ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ, ಸಾಯಿ ಸಹಕಾರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜಗದೀಶ ಕವಟಗಿಮಠ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ, ರಾಮ ಮಾನೆ, ಬಾಬು ಮಿರ್ಜೆ, ವಿಶ್ವನಾಥ ಕಾಮಗೌಡ, ವರ್ಧಮಾನ ಸದಲಗೆ ಇತರರಿದ್ದರು.