ಜಿಲ್ಲೆ

ಸಮಾಜ ಪರಿವರ್ತನೆಗೆ ಕಾವ್ಯ ಮಿಡಿಯಲಿ

ಕಲಬುರಗಿ: ಮಾನಸಿಕ ನೆಮ್ಮದಿ ಹಾಗೂ ಸಮಾಜ ಪರಿವರ್ತನೆಗೆ ಕಾವ್ಯ ಸದಾ ಮಿಡಿಯಲಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಚಂದ್ರಕಲಾ ಬಿದರಿ ಹೇಳಿದರು.
ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ-ಶಿಕ್ಷಕಿ ಅನುಪಮಾ ಜಿ.ಅಪಗುಂಡೆ ರಚಿತ ಇನಿ-ದನಿ ಹನಿಗವಿತೆಗಳ ಸಂಕಲನ ಜನಾರ್ಪಣೆ ಮಾಡಿದ ಅವರು, ಮನಸ್ಸು ಕಟ್ಟುವ ಸಾಹಿತ್ಯ ಕೃತಿಗಳು ಹೆಚ್ಚಾಗಿ ಬರಬೇಕು. ಸಾಹಿತ್ಯದೊಳಗೆ ಹನಿಗವಿತೆಗಳು ನಿರಂತರತೆ ಹೊಂದಿದ್ದು, ಕಾಲಘಟ್ಟಕ್ಕೆ ತಕ್ಕಂತೆ ವಿಸ್ತಾರ ಹೊಂದಬೇಕಾಗಿದೆ. ಇನಿ-ದನಿ ಕೃತಿಯಲ್ಲಿ ಸಾಮಾಜಿಕ ಕಳಕಳಿ ತೋರುವ ಹನಿಗವಿತೆಗಳು ವಾಸ್ತವದಿಂದ ಮೂಡಿ ಬಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃತಿ ಪರಿಚಯಿಸಿದ ಹಿರಿಯ ಕಥೆಗಾರ್ತಿ ಕಾವ್ಯಶ್ರೀ ಮಹಾಗಾಂವಕರ್, ಕಾವ್ಯ ಪ್ರೀತಿ, ಸಾಮಾಜಿಕ ಬದುಕನ್ನು ಚಿತ್ರಿಸುವ ಕೃತಿ ಮೌಲಿಕವಾಗಿದೆ. ವ್ಯಂಗ್ಯ, ವಿಡಂಬನೆ ಮೂಲಕ ಬದುಕಿನ ತಲ್ಲಣಗಳಿಗೆ ಸ್ಪಂದಿಸುವ ಕೃತಿ ಜೀವಪರವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಕನ್ನಡ ನಾಡಿನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಕನ್ನಡ ಸಾಹಿತ್ಯದಲ್ಲಿ ಚುಟುಕು ವಿಶಿಷ್ಟವಾದದ್ದು. ಇನ್ನಷ್ಟು ಹೆಮ್ಮರವಾಗಿ ಬೆಳೆಯಲು ಕಸಾಪ ಸಮ್ಮೇಳನಗಳಂತಹ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.
ಕೃತಿ ಲೇಖಕಿ ಅನುಪಮಾ ಅಪಗುಂಡೆ, ಕರ್ನಾಟಕ ವಿಜ್ಞಾನ ಪರಿಷತ್ ನಿಕಟಪೂರ್ವ ಅಧ್ಯಕ್ಷ ಗಿರೀಶ ಕಡ್ಲೇವಾಡ, ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ಕಿರಿಯ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮರೆಪ್ಪ ಬಸವಪಟ್ಟಣ ಮಾತನಾಡಿದರು.
ಹಿರಿಯ ಸಾಹಿತಿಗಳಾದ ಡಾ.ಸ್ವಾಮಿರಾವ ಕುಲಕರ್ಣಿ, ಎ.ಕೆ.ರಾಮೇಶ್ವರ, ಜಿಪಂ ಮಾಜಿ ಸದಸ್ಯ ಪ್ರೇಮಕುಮಾರ ರಾಠೋಡ್, ಪ್ರಮುಖರಾದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಸಿದ್ಧಲಿಂಗ ಬಾಳಿ, ರಾಜೇಂದ್ರ ಮಾಡಬೂಳ ರೇವಣಸಿದ್ದಪ್ಪ ಜೀವಣಗಿ, ಡಾ.ಎಸ್.ಎ. ವಡ್ಡನಕೇರಿ, ವಿನೋದಕುಮಾರ ಜೆ.ಎಸ್., ಧರ್ಮರಾಜ ಜವಳಿ, ರಮಾನಂದ ಹಿರೇಜೇವರ್ಗಿ, ಸಂತೋಷ ಕುಡಳ್ಳಿ, ಪ್ರಭು ಫುಲಾರಿ, ರವೀಂದ್ರಕುಮಾರ ಭಂಟನಳ್ಳಿ, ಭೀಮರಾಯ ಹೇಮನೂರ, ವಿಶ್ವನಾಥ ಮಂಗಲಗಿ, ಆರ್.ಸಿ. ಘಾಳೆ, ಸಿದ್ಧರಾಮ ರಾಜಮಾನೆ, ಚಂದ್ರಕಾAತ ಸೂರನ್, ಪ್ರಮೋದ ಕಟ್ಟಿ, ಎಸ್.ಪಿ. ಸುಳ್ಳದ, ಸಿ.ಎಸ್. ಮಾಲಿಪಾಟೀಲ್, ದೇವೀಂದ್ರಪ್ಪ ಗಣಮುಖಿ, ಅಶೋಕ ದೊಡ್ಮನಿ, ಶಿವಲಿಂಗಪ್ಪ ಅಷ್ಟಗಿ ಇದ್ದರು.