ಜಿಲ್ಲೆ

ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಖ್ಯ

ಯಲಬುರ್ಗಾ (ಕೊಪ್ಪಳ): ಸದೃಢ, ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಶ್ಯಾಮೀದ್‌ಸಾಬ್ ಮುಲ್ಲಾ ಹೇಳಿದರು.


ತಾಲೂಕಿನ ಕರಮುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃ?್ಣನ್ ಜಯಂತಿ ನಿಮಿತ್ತ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಶಿಕ್ಷಕರ ವೃತ್ತಿ ಎಲ್ಲಾ ವೃತ್ತಿಗಿಂತ ಪವಿತ್ರವಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಕರು ಕಲಿಸುವ ಪಾಠ ಸಮಾಜ ಬದಲಾವಣೆಗೆ ಪೂರಕವಾಗಿದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳು ಕೂಡ ಶಿಕ್ಷಕರನ್ನು ಗೌರವದಿಂದ ಕಾಣುವ ಮನೋಭಾವನೆ ಸದಾಕಾಲವೂ ಬೆಳೆಸಿಕೊಳ್ಳಬೇಕು. ಸರ್ವಪಲ್ಲಿ ರಾಧಾಕೃಷ್ಣನ್ ತತ್ವ, ಆದರ್ಶ ಇಂದಿನ ಶಿಕ್ಷಕರು ಕೂಡ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಹೆಚ್ಚಿನ ಮಟ್ಟದಲ್ಲಿ ಆದರ್ಶ ಶಿಕ್ಷಕರಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದರು.


ತಾಪಂ ಮಾಜಿ ಅಧ್ಯಕ್ಷ ಸಂಗಪ್ಪ ಬಂಡಿ ಮಾತನಾಡಿದರು.


ಈ ಸಂದರ್ಭ ಗಣ್ಯರಾದ ಮಂಜುನಾಥ ಕುಕನೂರು, ಮುತ್ತಣ್ಣ ಬಲಕುಂದಿ, ಗಂಗಪ್ಪ ಹವಳಿ, ಮುಖ್ಯಶಿಕ್ಷಕ ಬಸವರಾಜ ಕರಾಟಿ, ಶಿಕ್ಷಕ ಬಸವರಾಜ ಕೂಂಡಗುರಿ, ದೈಹಿಕ ಶಿಕ್ಷಕ ನಾಗರಾಜ ತಳವಾರ್, ಎಸ್ಡಿಎಂಸಿ ಸದಸ್ಯರಾದ ತಿಪ್ಪಣ್ಣ ಮ್ಯಾಗೇರಿ, ರವಿಚಂದ್ರ ಕೆಂಚರಡ್ಡಿ, ದೇವಮ್ಮ ರಾಟಿ, ವೀರಣ್ಣ ಮಾನಶೆಟ್ಟ, ಪರಸಪ್ಪ ಲಮಾಣಿ, ಶರಣಪ್ಪ ಸೇರಿದಂತೆ ಇತರರಿದ್ದರು.