ದೋರನಹಳ್ಳಿ ಅಂಬೇಡ್ಕರ್ ನಗರದ ಸಮುದಾಯ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರ ಶನಿವಾರ ಭೇಟಿ ನೀಡಿ ಮಕ್ಕಳ ಸಮಸ್ಯೆ ಆಲಿಸಿದರು. ಸಿಪಿಐ ಚೆನ್ನಯ್ಯ ಹಿರೇಮಠ, ಟಿಎಚ್‌ಒ ರಮೇಶ ಗುತ್ತೇದಾರ್, ಚೇತನರಡ್ಡಿ, ಪರಶುರಾಮ ಬುಕ್ಕಲ್, ಸಿದ್ದಪ್ಪ ರಾಖಂಗೇರಾ, ಮಾನಪ್ಪ ಹುಲಸೂರ, ನಿಜಗುಣ ಪೂಜಾರಿ, ಮಾನಪ್ಪ ಹಾಲಬಾವಿ, ಅಂಬರೀಶ ಹಾಲಬಾವಿ ಇತರರಿದ್ದರು.  
ಜಿಲ್ಲೆ

ಸಮಸ್ಯೆಗೆ ಸ್ಪಂದಿಸಿ ಇಲ್ವೆ ಮನೆಗೆ ನಡಿರಿ

ದೋರನಹಳ್ಳಿ: ಫೋನ್‌ನಲ್ಲಿ ಆಶ್ವಾಸನೆ ಕೊಡುವುದನ್ನು ಬಿಟ್ಟು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಅವಲೋಕನ ನಡೆಸಿ ಪರಿಹರಿಸುವ ಕಾರ್ಯ ಮಾಡಿ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಗ್ರಾಮದ ಅಂಬೇಡ್ಕರ್ ನಗರದ ಸುಮುದಾಯ ಹಿರಿಯ ಪ್ರಾಥಮಿಕ ಶಾಲೆ ಕುರಿತು ಆ.೩ರಂದು ವಿಜಯವಾಣಿಯಲ್ಲಿ `ಸಮಸ್ಯೆಗಳ ಸುಳಿಯಲ್ಲಿ ಅಂಬೇಡ್ಕರ್ ಶಾಲೆ' ತಲೆಬರಹದಡಿ ಪ್ರಕಟಗೊಂಡಿದ್ದ ವಿಶೇಷ ವರದಿಗೆ ಸ್ಪಂದಿಸಿದ ಶಾಸಕರು, ಶನಿವಾರ ಶಾಲೆಗೆ ತೆರಳಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.

ಕಚೇರಿಯಲ್ಲಿ ಕುಳಿತು ಸಮಜಾಯಿಷಿ ನೀಡುವುದಾದರೆ ಕೆಲಸ ಬಿಟ್ಟು ಮನೆಗೆ ನಡೆಯಿರಿ. ನಿಮ್ಮ ಮಕ್ಕಳು ಈ ಶಾಲೆಯಲ್ಲಿದ್ದರೆ ಹೀಗೆ ಬಿಡುತ್ತಿದ್ದೀರೆ ಎಂದು ದೂರವಾಣಿಯಲ್ಲಿ ಬಿಇಒ ಸೀಬಾ ಜಲಿಯನ್ ಅವರನ್ನು ತರಾಟೆಗೆ ತೆಗೆದುಕೊಂಡರು.

ನೀವು ಇಲ್ಲಿಗೆ ಬಂದಿದ್ದೀರಾ? ಮಕ್ಕಳ ಸಮಸ್ಯೆ ನೋಡಿದ್ದೀರಾ? ಮಕ್ಕಳ ಜೀವಕ್ಕೆ ಬೆಲೆ ಇಲ್ಲವೆ ಎಂದು ಪ್ರಶ್ನಿಸಿದ ಅವರು, ವಾರದಲ್ಲಿ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.

ಟಿಎಚ್‌ಒ ರಮೇಶ ಗುತ್ತೇದಾರ್, ಸಿಪಿಐ ಚನ್ನಯ್ಯ ಹಿರೇಮಠ, ಪಿಡಿಒ ಯಂಕಣ್ಣ ದೊರೆ, ವಿವಿಧ ಶಾಲೆ ಎಸ್‌ಡಿಎಂಸಿ ಅಧ್ಯಕ್ಷರಾದ ಚೇತನ ರಡ್ಡಿ, ನಾಗಯ್ಯ ಗುತ್ತೇದಾರ್, ಮಲ್ಲಪ್ಪ ಕೊಂತಲ್, ಪ್ರಮುಖರಾದ ಪರಶುರಾಮ ಬುಕ್ಕಲ್, ಸಿದ್ದಪ್ಪ ರಾಖಂಗೇರಾ, ಮಾನಪ್ಪ ಹುಲಸೂರ, ನಿಜಗುಣ ಪೂಜಾರಿ, ಮಾನಪ್ಪ ಹಾಲಬಾವಿ, ಅಂಬರೀಶ ಹಾಲಬಾವಿ, ಅಬ್ದುಲ್ ಬಾಷಾ, ಹಣಮಂತ ಕಸನ್, ರಾಯಪ್ಪ ಕೊಂಬಿನ್, ಮಾನಪ್ಪ ಜೂಟೇರ್ ಇತರರಿದ್ದರು.

ಕೇಸ್ ದಾಖಲಿಸಿ
ಗ್ರಾಮದ ಯಾವುದೇ ಶಾಲೆಯ ಕಿಟಕಿ, ಬಾಗಿಲು, ಗೇಟ್ ಮುರಿಯುವುದು. ಮಲ-ಮೂತ್ರ ವಿಸರ್ಜನೆ ಮಾಡುವುದು. ಶಾಲಾ ಸೌಕರ್ಯಗಳನ್ನು ಹಾಳು ಮಾಡುವವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿ ಎಂದು ಪಿಐ ಚನ್ನಯ್ಯ ಹಿರೇಮಠ ಅವರಿಗೆ ಶಾಸಕ ತುನ್ನೂರ ಸೂಚಿಸಿದರು.