ಜಿಲ್ಲೆ

ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸ್ಥಳದಲ್ಲೇ ಹಲವು ಸಮಸ್ಯೆಗಳನ್ನು ಪರಿಹರಿಸಲಾಯಿತು.

ಗ್ರಾಮದ ಪ್ರೌಢಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 15 ಅರ್ಜಿಗಳು ಸಲ್ಲಿಕೆಯಾಗಿದ್ದವು. ತಾಲೂಕು ಕಾರ್ಯ ನಿರ್ವಾಹಕಾಧಿಕಾರಿಗೆ 6, ಕಂದಾಯ ಇಲಾಖೆಗೆ 5, ಕೃಷಿ ಇಲಾಖೆಗೆ 2, ಶಿಕ್ಷಣ ಇಲಾಖೆಗೆ ಸಂಬಂಧಿಸಿದ 1 ಅರ್ಜಿ ಸಲ್ಲಿಕೆಯಾಗಿತ್ತು.

ಅರ್ಜಿ ಸ್ವೀಕರಿಸಿದ ತಹಸೀಲ್ದಾರ್ ಆನಂದಪ್ಪ ನಾಯಕ್ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳನ್ನು ಗ್ರಾಮ ಮಟ್ಟದಲ್ಲೇ ನಿವಾರಿಸಲು ಸಾಧ್ಯವಾದಷ್ಟು ಯತ್ನಿಸಲಾಗುತ್ತದೆ. ಇಲಾಖೆಯಲ್ಲಿರುವ ಸಾರ್ವಜನಿಕರ ಕೆಲಸಗಳನ್ನು ಇನ್ನಷ್ಟು ಸುಲಭವಾಗಿಸುವ ಉದ್ದೇಶದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆಯೋಜಿಸುತ್ತಿದ್ದು, ಪ್ರತಿಯೊಬ್ಬರೂ ಇದರ ಅನುಕೂಲ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲುಪ್ರಸಾದ್ ಕಾರ್ಯಾಕ್ರಮ ಉದ್ಘಾಟಿಸಿದರು. ಉಪ ತಹಸೀಲ್ದಾರ್ ಪುಷ್ಪವತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಂತರಾಜು, ಸಹಾಯಕ ಕೃಷಿ ನಿರ್ದೇಶಕ ಅಮೃತೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಪಶುವೈದ್ಯಾಧಿಕಾರಿ ಡಾ.ಸುಗಂಧರಾಜನ್, ಅರಣ್ಯ ಇಲಾಖೆ ರಮೇಶ್, ಪಿಡಿಒ ಲಲಿತಾ, ಗ್ರಾಪಂ ಸದಸ್ಯರಾದ ರಾಚಪ್ಪ, ಪ್ರಸಾದ್, ರಾಜಸ್ವ ನಿರೀಕ್ಷಕ ಯದುಗಿರಿ, ರಾಜಶೇಖರ್, ನಂಜುಂಡ, ಗ್ರಾಮ ಲೆಕ್ಕಿಗರಾದ ಮಲ್ಲೇಶ್, ನವೀನ್, ಪ್ರದೀಪ್, ಶರತ್,ಅನಿಲ್, ದೇವೇಂದ್ರನಾಯಕ್, ನಂದಕುಮಾರ್ ಸೇರಿದಂತೆ ಇತರರಿದ್ದರು.