ಜಿಲ್ಲೆ

ಸಮಸ್ಯೆ ನಿವಾರಣೆಗೆ ಪ್ರತ್ಯೇಕ ಸಭೆ

ಕಾರವಾರ: ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್​ನಲ್ಲಿರುವ ವಿವಿಧ ಸಮಸ್ಯೆಗಳ ಕುರಿತು ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಸಭೆ ನಡೆಸಿ ರ್ಚಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಬುಧವಾರ ಆಯೋಜನೆಯಾದ ತ್ರೖೆಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೆಡಿಕಲ್ ಕಾಲೇಜ್​ನಲ್ಲಿ ತ್ಯಾಜ್ಯ ವಿಲೇವಆಾರಿ ಘಟಕ ಇಲ್ಲ. ಅದರ ಹೊಲಸು ನೀರು ಪಕ್ಕದ ಕಾಲನಿಗಳಿಗೆ ನುಗ್ಗುತ್ತಿದೆ. ಹೊಸ ಆಸ್ಪತ್ರೆ ನಿರ್ವಣಕ್ಕೆ 150 ಕೋಟಿ ರೂ. ಮಂಜೂರಾಗಿ, ಟೆಂಡರ್ ಕೂಡ ಆದರೂ ಜೈಲ್ ಸ್ಥಳಾಂತರ ವಿಳಂಬವಾಗಿರುವುದರಿಂದ ಕಾಮಗಾರಿ ಪ್ರಾರಂಭವಾಗಿಲ್ಲ. ಹಾಲಿ ಆಸ್ಪತ್ರೆಯನ್ನು ಒಡೆದುಕೊಡುವಂತೆ ನಿರ್ಮಾಣ ವಿಭಾಗ ಹೇಳುತ್ತಿದೆ. ಆಸ್ಪತ್ರೆಯ ಗುತ್ತಿಗೆ ನೌಕರರಿಗೆ ವೇತನ ಪಾವತಿಯಾಗಿಲ್ಲ ಮುಂತಾದ ಸಮಸ್ಯೆಗಳು ಸಭೆಯಲ್ಲಿ ಚರ್ಚೆಗೆ ಬಂದವು.

ಇದನ್ನೆಲ್ಲ ರ್ಚಚಿಸಲು ಕಾಲೇಜ್​ನ ಡೀನ್ ಡಾ.ಶಿವಾನಂದ ದೊಡ್ಮನಿ ಸಭೆಗೆ ಆಗಮಿಸಿರದ ಕಾರಣ ಸಚಿವರು ಸಿಟ್ಟಾದರು. ಅವರಿಗೆ ಶೋಕಾಸ್ ನೋಟಿಸ್ ನೀಡುವಂತೆ ಸೂಚಿಸಿದರು. ಆದರೆ, ಅಸಹಾಯಕತೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್, ‘ನಾವು ಅವರಿಗೆ ನೋಟಿಸ್ ನೀಡುವಂತಿಲ್ಲ. ಪ್ರತಿ ಬಾರಿ ಕಾಲೇಜ್ ಸಮಸ್ಯೆ ಸಂಬಂಧ ನಮ್ಮ ಕಚೇರಿಯ ಎದುರು ಹಲವು ಪ್ರತಿಭಟನೆಗಳು ನಡೆಯುತ್ತವೆ. ಆದರೆ, ಯಾವುದೇ ಸೂಚನೆ ನೀಡಲು ಕಾಲೇಜ್ ಡೀನ್ ನಮ್ಮ ಅಡಿ ಬರುವುದಿಲ್ಲ ಎಂದರು.

ಎಲ್ಲ ದಾಖಲೆಗಳೊಟ್ಟಿಗೆ ಸಂಬಂಧಪಟ್ಟ ಇಲಾಖೆ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲೇ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಸಚಿವೆ ಜೊಲ್ಲೆ ತಿಳಿಸಿದರು.

ಬೆಂಗಳೂರಿಗೆ ಬುಲಾವ್: ಅಂಕೋಲಾ ಬಸ್ ನಿಲ್ದಾಣ ಕಾಮಗಾರಿ ವಿಳಂಬವಾಗಿರುವ ವಿಚಾರ ಸಭೆಯಲ್ಲಿ ಮಾರ್ಧನಿಸಿತು. ಶಾಸಕಿ ರೂಪಾಲಿ ನಾಯ್ಕ ವಿಷಯ ಪ್ರಸ್ತಾಪಿಸಿ, ಎನ್​ಡಬ್ಲ್ಯುಕೆಆರ್​ಟಿಸಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ಅವರನ್ನು ತರಾಟೆಗೆ ತೆಗೆದುಕೊಂಡರು. ಸ್ವತಃ ಸ್ಥಳ ಪರಿಶೀಲನೆ ನಡೆಸುತ್ತೇನೆ ಎಂದ ಸಚಿವರು, ಎನ್​ಡಬ್ಲ್ಯುಕೆಎಸ್​ಆರ್​ಟಿಸಿ ನಿರ್ಮಾಣ ವಿಭಾಗದ ಇಂಜಿನಿಯರ್​ರನ್ನು ಬೆಂಗಳೂರಿಗೆ ಕರೆಸಿ ರ್ಚಚಿಸುವುದಾಗಿ ತಿಳಿಸಿದರು.

ಮೋದಿ ಕಾರ್ಯಕ್ರಮಕ್ಕೇಕೆ ಕರೆದಿಲ್ಲ: ತುಮಕೂರಿನಲ್ಲಿ ಇತ್ತೀಚೆಗೆ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಸಮಾರಂಭಕ್ಕೆ ಮೀನುಗಾರರನ್ನು ಕರೆದೊಯ್ಯದ ಬಗ್ಗೆ ಶಾಸಕಿ ರೂಪಾಲಿ ನಾಯ್ಕ ಅವರು ಮೀನುಗಾರಿಕೆ ಇಲಾಖೆ ಅಧಿಕಾರಿಗಳಾದ ನಾಗರಾಜ್ ಹಾಗೂ ವೆಂಕಟರಮಣ ಹೆಗಡೆ ಅವರನ್ನು ತರಾಟೆಗೆ ತೆಗೆದುಕೊಂಡರು. ಕ್ರೆಡಿಟ್ ಕಾರ್ಡ್ ವಿತರಣೆಗೆ ಕಾರವಾರದ ಫಲಾನುಭವಿ ಆಯ್ಕೆಯಾಗಿದ್ದನ್ನೂ ತಿಳಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅತಿಕ್ರಮಣದಾರರ ಪರವಾಗಿರಿ: ಅರಣ್ಯಾಧಿಕಾರಿಗಳು ಅತಿಕ್ರಮಣದಾರರ ಬಗ್ಗೆ ಕರುಣೆಯಿಂದ ವರ್ತಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಸಭೆಯಲ್ಲಿ ಸೂಚಿಸಿದರು. ಅತಿಕ್ರಮಣ ತೆರವು, ಅಧಿಕಾರಿಗಳಿಂದ ದೌರ್ಜನ್ಯ ಎಂದು ಪ್ರತಿ ದಿನ ಕೇಳಿ ಬರುತ್ತಿದೆ ಎಂದು ದೂರಿದರು. ಮತ್ಸ್ಯ ಆಶ್ರಯ ಯೋಜನೆಯಲ್ಲಿ ಸಿಆರ್​ರೆಡ್ ವ್ಯಾಪ್ತಿಯಲ್ಲಿ ಮನೆ ರಿಪೇರಿಗೆ, ಮರು ನಿರ್ವಣಕ್ಕೆ ಅವಕಾಶ ಮಾಡಿಕೊಡಬೇಕು. ಜಿಲ್ಲಾ ಮಟ್ಟದ ಸಿಆರ್​ರೆಡ್ ಸಮಿತಿ ಸಭೆಯನ್ನು ಕರಾವಳಿಯ ಇತರ ತಾಲೂಕುಗಳಲ್ಲೂ ನಡೆಸಬೇಕು ಎಂದು ಒತ್ತಾಯಿಸಿದರು. ಬಂದೂಕು ಪರವಾನಗಿ ಸರಳೀಕರಣ ಮಾಡಿ ಎಂದು ಜಿಲ್ಲಾಧಿಕಾರಿ ಬಳಿ ವಿನಂತಿಸಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್, ಬಂದೂಕು ಪರವಾನಗಿ ನವೀಕರಣಕ್ಕೆ ಆನ್​ಲೈನ್ ಅರ್ಜಿ ಸಲ್ಲಿಕೆ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಮೀನುಗಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ದಿನಕರ ಶೆಟ್ಟಿ ಉಸ್ತುವಾರಿ ಸಚಿವರಲ್ಲಿ ವಿನಂತಿಸಿದರು.

ಅಂಗನವಾಡಿ ಮಕ್ಕಳಿಗೂ ಸಮವಸ್ತ್ರ: ಅಂಗನವಾಡಿ ಮಕ್ಕಳಿಗೂ ಸಮವಸ್ತ್ರ ಕೊಡುವ ಚಿಂತನೆ ನಡೆಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಣ್ಣಂದಿನಿಂದಲೇ ಸರ್ಕಾರಿ ವ್ಯವಸ್ಥೆಗಳ ಬಗ್ಗೆ ಬಗ್ಗೆ ಆಸಕ್ತಿ ಮೂಡಿಸಲು ಅಂಗನವಾಡಿಗಳಿಗೆ ಆಟಿಕೆ ಸಾಮಗ್ರಿಗಳು, ಪೀಠೋಪಕರಣ ಒದಗಿಸಲಾಗುವುದು. ಅಂಗನವಾಡಿಗಳಲ್ಲಿ ಅಡುಗೆ ಮಾಡುವುದರಿಂದ ಮಕ್ಕಳಿಗೆ ತೊಂದರೆ ಉಂಟಾಗದಂತೆ ಕ್ರಮ ವಹಿಸಲಾಗುವುದು ಎಂದರು.