ಗುಳೇದಗುಡ್ಡ: ಹನ್ನೆರಡನೇ ಶತಮಾನದ ಬಳಿಕ ಅಕ್ಕಲಕೋಟೆಯ ಶ್ರೀ ರೇವಣಸಿದ್ಧ ಶಿವಶರಣರು ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು ಎಂದು ಗುರುಸಿದ್ಧೇಶ್ವರ ಮಠದ ಬಸವರಾಜ ಪಟ್ಟದಾರ್ಯ ಸ್ವಾಮಿಗಳು ಹೇಳಿದರು.
ಶ್ರೀ ಗುರುಸಿದ್ಧೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕೋತ್ಸವ ಹಾಗೂ ಅಕ್ಕಲಕೋಟೆ ಶ್ರೀ ಶಿವಶರಣರ ಮಠದ ಶ್ರೀ ರೇವಣಸಿದ್ಧ ಶಿವಶರಣ 163ನೇ ಜನ್ಮದಿನದ ಹಾಗೂ ತೊಟ್ಟಿಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶ್ರೀ ರೇವಣಸಿದ್ಧ ಶಿವಶರಣರು ಕಾಯಕ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಪ್ರೊ. ಸಿದ್ಲಿಂಗಪ್ಪ ಬರಗುಂಡಿ ಉಪನ್ಯಾಸ ನೀಡಿ, ರೇವಣಸಿದ್ಧ ಎಂಬ ಸಾಮಾನ್ಯ ವ್ಯಕ್ತಿ ಜನರಲ್ಲಿ ಬೇರೂರಿದ್ದ ಮೂಢನಂಬಿಕೆ, ಅಜ್ಞಾನ ತೊಲಗಿಸುವಲ್ಲಿ ತನ್ನ ಜೀವನ ಮುಡುಪಾಗಿಟ್ಟು, ಕಾಯಕ ಸಮುದಾಯದ ಒಳಿತಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಗುರುಸಿದ್ದ ಪಟ್ಟದಾರ್ಯ ಸ್ವಾಮಿಗಳು ಮಾತನಾಡಿದರು.
ಅಲದಿ ಶಾಸೀಗಳು, ಮಾಜಿ ಶಾಸಕ ಎಂ.ವಿ. ಬನ್ನಿ, ರವೀಂದ್ರ ಕಲ್ಬುರ್ಗಿ, ಪ್ರೊ. ಚಂದ್ರಶೇಖರ ಹೆಗಡೆ, ಈರಣ್ಣ ಶೇಖಾ, ಸಂಗನಬಸಪ್ಪ ಚಿಂದಿ, ನಾಗೇಶಪ್ಪ ಪಾಗಿ, ಸಂಗಪ್ಪ ಜವಳಿ, ಸಿದ್ದಬಸಪ್ಪ ಕೆಲೂಡಿ, ನೂರಂದಪ್ಪ ಮದ್ದಾನಿ, ಸಂಗನಬಸಪ್ಪ ಕಲ್ಬುರ್ಗಿ, ರಂಗಪ್ಪ ಶೇಬಿನಕಟ್ಟಿ, ಸಿ.ಎಂ. ಚಿಂದಿ, ಶಿವಾನಂದ ಯಣ್ಣಿ, ಆನಂದ ತಿಪ್ಪಾ, ವಿಜಯಕುಮಾರ ಬೆಟಗೇರಿಗೌಡ್ರ, ವಿರೂಪಾಕ್ಷಪ್ಪ ಅರೂಟಗಿ, ಶೇಖರಪ್ಪ ಅರೂಟಗಿ, ಬಸವರಾಜ ಯಂಡಿಗೇರಿ, ರವಿ ಗೌಡರ ಮತ್ತಿತರರಿದ್ದರು.