ಬಸವಕಲ್ಯಾಣ ತಾಲೂಕಿನ ಹಿರನಾಗಾಂವ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಯನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅನಾವರಣಗೊಳಿಸಿದರು. ಎಂಎಲ್ಸಿ ಎಂ.ಜಿ ಮುಳೆ, ಮಾಜಿ ಸಚಿವ ರಾಜಶೇಖರ್ ಪಾಟೀಲ್, ಡಾ.ಡಿ.ಜಿ ಸಾಗರ್, ಮಾಲಾ ಬಿ. ನಾರಾಯಣರಾವ ಇತರರಿದ್ದರು. 
ಜಿಲ್ಲೆ

ಸಮಸಮಾಜ ಕನಸು ನನಸಾಗಿಸೋಣ

ಬಸವಕಲ್ಯಾಣ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ದೇಶದ ಮೂಲೆ, ಮೂಲೆಗೂ ತಲಿಪಿಸುವ ಮೂಲಕ ಸಮ ಸಮಾಜದ ಕನಸನ್ನು ನನಸು ಮಾಡೋಣ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

ಹಿರನಾಗಾಂವ ಗ್ರಾಮದಲ್ಲಿ ಭಾನುವಾರ ಡಾ.ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ನಮ್ಮೆಲ್ಲರ ಘನತೆ ಗೌರವದ ಸ್ವಾಭಿಮಾನದ ಬದುಕಿಗೆ ಪ್ರೇರಣಾ ಶಕ್ತಿ ಆಗಿರುವ ಅಂಬೇಡ್ಕರ್ ಅವರ ಪ್ರತಿಮೆ ಸಂತೋಷದಿಂದ ಅನಾವಣರ ಮಾಡಿದ್ದೇನೆ ಎಂದರು.

ದಲಿತರು, ಶೋಷಿತ ಸಮುದಾಯದ ಎಲ್ಲರೂ ದೇಶದ ಉದ್ದಗಲಕ್ಕೂ ಇಂದು ಸ್ವಾಭಿಮಾನದ ಬದುಕಿಗೆ ಸಂವಿಧಾನದ ಕಡೆಗೆ ನೋಡುತ್ತಿದ್ದಾರೆ. ರಾಜ್ಯ ಸರ್ಕಾರದಲ್ಲಿ ಇರುವ ಎಲ್ಲ ಅವಕಾಶಗಳನ್ನು ಬಳಸಿ ಹಕ್ಕು ರಕ್ಷಣೆಗಾಗಿ ಅನೇಕ ಕಾನೂನುಗಳನ್ನು ತಂದಿದ್ದೇವೆ. ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ಸ್ವಾಭಿಮಾನದ ಜೀವನಕ್ಕ ಪ್ರೇರಣೆಯಾಗುವಂತ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ಹಿರನಾಗಾಂವನ ಶ್ರೀ ಜಯಶಾಂತಲಿಂಗ ಸ್ವಾಮೀಜಿ, ಚಿಕನಾಗಾಂವನ ಶ್ರೀ ಲೋಕೇಶ ಮಹಾರಾಜ ಸಾನ್ನಿಧ್ಯ, ಪೂಜ್ಯ ಮಿಲಿಂಗ ಗುರೂಜಿ, ಬೌದ್ದಾಚಾರ್ಯ ರವೀಂದ್ರ ಪರ್ತಾಪುರ ಸಮ್ಮುಖ ವಹಿಸಿದ್ದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ ಅಧ್ಯಕ್ಷತೆ ವಹಿಸಿದ್ದರು.

ಎಲ್ಸಿ ಎಂ.ಜಿ.ಮುಳೆ, ಮಾಜಿ ಸಚಿವ ರಾಜಶೇಖರ ಪಾಟೀಲ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ, ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿ ಸಾವಿತ್ರಿ ಸಲಗರ, ಗ್ರಾಪಂ ಅಧ್ಯಕ್ಷೆ ಸವಿತಾ ಕಾಂಬಳೆ, ದಸಂಸನ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ತಾಲೂಕು ಸಂಚಾಲಕ ವಾಮನ ಮೈಸಲಗೆ, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಮಾಲೆ, ಪ್ರಮುಖರಾದ ಸುರೇಶ ಹಾದಿಮನಿ, ಅರುಣ ಪಟೇಲ್, ಸುರೇಶ ಮೋರೆ, ಹಸೀನಾ ಬೇಗಂ ಮುಲ್ಲಾ, ಮಾಣಿಕಪ್ಪ ಘೂಳೆ, ನಾಗರಾಜ ದರ್ಜಿ, ನಾಗಣ್ಣ ಘಾಂಗ್ರೆ, ಪ್ರೇಮ ಬುಡಕೆ, ಮೂರ್ತಿ ಅನಾವರಣ ಸಮಿತಿ ಅಧ್ಯಕ್ಷ ಉದಯಕುಮಾರ ರಾಮಬಾಣ, ಉಪಾಧ್ಯಕ್ಷ ತಿಪ್ಪಣ್ಣ ಮದನಕರ,  ಜ್ಞಾನೇಶ್ವರ ರಾಮಬಾಣ, ಶಂಭುಲಿಂಗ ದೇವಪ್ಪ, ಸುಭಾಷ ದೇವಕರ, ಈಶ್ವರ ರಾಮಬಾಣ, ಮಲ್ಲಪ್ಪ ಹೊಸಮನಿ, ಗೌತಮ ದೇವಕರ ಇತರರಿದ್ದರು. ಶಂಭುಲಿಂಗ ದೇವಕರ ಸ್ವಾಗತಿಸಿದರು. ರಮೇಶ ಉಮ್ಮಾಪುರೆ ನಿರೂಪಣೆ ಮಾಡಿದರು.

ಶಿಕ್ಷಣವೇ ಪ್ರಬಲ ಅಸ್ತ್ರ: ಸಮಾಜದ ಪ್ರಗತಿಗೆ ಶಿಕ್ಷಣವೇ ಪ್ರಬಲ ಅಸ್ತçವಾಗಿದ್ದು, ಶೈಕ್ಷಣಿಕ ಪ್ರಗತಿಯಲ್ಲಿ ಸಮಾಜದ ಪ್ರಗತಿ ಅಡಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ ಹೇಳಿದರು. ಮೂರ್ತಿ ಅನಾವರಣದ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರು ಹಾಕಿಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದು ಸಲಹೆ ನೀಡಿದರು.