ದೊಡವಾಡ ಗ್ರಾಮಕ್ಕೆ ಸಮರ್ಪಕ ವಿದ್ಯುತ್​ ಪೂರೆಸುವಂತೆ ಆಗ್ರಹಿಸಿ ಬೆಲಹೊಂಗಲ ಹೆಸ್ಕಾಂ ಎಇಇ ರಾಜೇಂದ್ರ ಆಚಾರ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ನಿಂಗಪ್ಪ ಚೌಡಣ್ಣವರ, ವಿಠ್ಠಲ ಗಾಬಿ, ವೀರೇಂದ್ರ ಸಂಗೊಳ್ಳಿ ಇತರರು ಇದ್ದರು. 
ಜಿಲ್ಲೆ

ಸಮರ್ಪಕವಾಗಿ ವಿದ್ಯುತ್​ ಪೂರೈಸಲಿ

ಬೈಲಹೊಂಗಲ: ಹೆಸ್ಕಾಂನಿಂದ ತಾಲೂಕಿನ ದೊಡವಾಡ ಗ್ರಾಮಕ್ಕೆ ಸಮರ್ಪಕ ವಿದ್ಯುತ್​ ಪೂರೆಕೆಯಲ್ಲಿ ಆಗುತ್ತಿರುವ ತೊಂದರೆ ಸರಿಪಡಿಸುಂತೆ ಗ್ರಾಮದ ಪಿಕೆಪಿಎಸ್​ ಆಡಳಿತ ಮಂಡಳಿ ವತಿಯಿಂದ ಬೆಲಹೊಂಗಲ ಹೆಸ್ಕಾಂ ಎಇಇ ರಾಜೇಂದ್ರ ಆಚಾರ್ಯ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಬೆಳವಡಿ ಎಸ್​ಒ ಕಚೇರಿ ಎದುರು ಹಲವು ಬಾರಿ ಪ್ರತಿಭಟನೆ ಮಾಡಿದರೂ ಹೆಸ್ಕಾಂ ಅಧಿಕಾರಿಗಳು ದಿನಕ್ಕೆ 10 ರಿಂದ 15 ಬಾರಿ ವಿದ್ಯುತ್​ ಪೂರೆಕೆ ನಿಲ್ಲಿಸುತ್ತಲೇ ಇದ್ದಾರೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಮತ್ತು ದಿನನಿತ್ಯದ ಕೆಲಸಗಳಿಗೂ ತೀವ್ರ ತೊಂದರೆಯಾಗಿದೆ. ಕಾರಣ ಕೇಳಿದರೂ ಹೆಸ್ಕಾಂ ಕರ್ತವ್ಯನಿರತ ಸಿಬ್ಬಂದಿ ಕರೆಗೆ ಸ್ಪಂದಿಸುವುದಿಲ್ಲ ಮತ್ತು ಇಲ್ಲ ಸಲ್ಲದ ಸಬೂಬು ಹೇಳುತ್ತಾರೆ. ಹೆಸ್ಕಾಂ ಕಣ್ಣಾ ಮುಚ್ಚಾಲೆಯಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಡಚಣೆ ಉಂಟಾಗುತ್ತಿದೆ. ಆದ್ದರಿಂದ ಅಧಿಕಾರಿಗಳು ಮನವಿಗೆ ಸ್ಪಂದಿಸಿ ಕೂಡಲೆ ವಿದ್ಯುತ್​ ಪೂರೆಕೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಗ್ರಾಮಸ್ಥರೆಲ್ಲ ಬೆಲಹೊಂಗಲ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಅವರು ಅಧಿಕಾರಿಗಳನ್ನು ಎಚ್ಚರಿಸಿದರು.

ರೆತ ಮುಖಂಡ ನಿಂಗಪ್ಪ ಚೌಡಣ್ಣವರ, ಪಿಕೆಪಿಎಸ್​ ಅಧ್ಯ ವಿಠ್ಠಲ ಗಾಬಿ, ನಿರ್ದೇಶಕರಾದ ವೀರೇಂದ್ರ ಸಂಗೊಳ್ಳಿ, ನಾಗಪ್ಪ ಸವದತ್ತಿ, ಗಿರೀಶ ಧಾರವಾಡ, ಉದಯ ಕೊಟಬಾಗಿ ಇತರರು ಉಪಸ್ಥಿತರಿದ್ದರು.