ಜಿಲ್ಲೆ

ಸಮರ್ಪಕವಾಗಿ ನೀರು ಪೂರೈಸಲಿ

ವಿದ್ಯಾ ಶೆಟ್ಟನಗೌಡ್ರ

ಸಂಬರಗಿ: ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ನೀರು ಸರಬರಾಜು ಇಲಾಖೆ ಅಽಕಾರಿ ರವಿಂದ್ರ ಮೂರಗಾಲಿ ಎಚ್ಚರಿಕೆ ನೀಡಿದರು.

ಸಮೀಪದ ಮದಭಾವಿ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಹುಗ್ರಾಮ ಕುಡಿಯುವ ನೀರಿನ ಸಮಸ್ಯೆ ಕುರಿತು ೯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ವಾಟರ್‌ಮನ್‌ಗಳ ಸಭೆಯಲ್ಲಿ ಮಾತನಾಡಿ, ಕೃಷ್ಣಾ ನದಿಯಲ್ಲಿ ೪.೭ ಟಿಎಂಸಿ ನೀರು ಇದೆ. ಮೇ.೧೫ರ ವರೆಗೂ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವುದಿಲ್ಲ. ವಾಟರ್‌ಮನ್‌ಗಳು ಸರಿಯಾಗಿ ನೀರು ಪೂರೈಕೆ ಮಾಡಬೇಕು ಎಂದು ಸೂಚಿಸಿದರು.

ಗ್ರಾಪಂ ಅಧ್ಯಕ್ಷ ಮಹಾದೇವ ಕೋರೆ ಮಾತನಾಡಿ, ಮದಭಾವಿ ಗ್ರಾಮದ ವ್ಯಾಪ್ತಿಯ ತೋಟದ ವಸತಿಗಳಲ್ಲಿ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಅಧಿಕಾರಿಗಳು ಗಮನಹರಿಸಿ ಸರಿಯಾಗಿ ನೀರು ಪೂರೈಸಬೇಕು ಎಂದು ಮನವಿ ಮಾಡಿದರು.

ನೀರಾವರಿ ವಲಯಾಧಿಕಾರಿ ಕಿರಣ ಮಾಳಿ, ಪಿಡಿಒ ಸಂತೋಷ ಸನದಿ, ಪಿಡಿಒ ಪರಶುರಾಮ ಮದಗುಣಕಿ, ಎಸ್.ಎಂ. ರಾತೋಡ ಹಾಗೂ ಇತರರು ಇದ್ದರು.