ಜಿಲ್ಲೆ

ಸಮರ್ಪಕ ಸೇವೆಗೆ ವೈದ್ಯರಿಗೆ ತಾಕೀತು

ಚಿತ್ರದುರ್ಗ: ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸುವಂತೆ ಜಿಲ್ಲೆಯ ಗ್ರಾಮೀಣ ಭಾಗದ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇ ಂದ್ರಗಳಲ್ಲಿ ಕಾಯಂ ಹಾಗೂ ಗುತ್ತಿಗೆ ವೈದ್ಯಾಧಿಕಾರಿಗಳಿಗೆ ಜಿಪಂ ಸಿಇಒ ಡಾ.ಆಕಾಶ್ ಸೂಚಿಸಿದ್ದಾರೆ. ವೈದ್ಯಾಧಿಕಾರಿಗಳು ಕಡ್ಡಾಯವಾಗಿ ಬೆಳಗ್ಗೆ 9ರಿಂದ ಸಂಜೆ 4.30ರವರೆಗೆ ಆಸ್ಪತ್ರೆಯಲ್ಲಿದ್ದು ಹೊರ ರೋಗಿಗಳ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಬೇಕು.

ಕಡ್ಡಾಯವಾಗಿ ಮಧ್ಯಾಹ್ನ ನಂತರದಲ್ಲಿ ಆರೋಗ್ಯ ಸುರಕ್ಷಣಾಧಿಕಾರಿ,ನಿರೀಕ್ಷಣಾಧಿಕಾರಿಗಳು,ಆಶಾ ಕಾರ‌್ಯಕರ್ತೆಯರ ಕಾರ‌್ಯ ಪ್ರಗತಿ ಪರಿಶೀಲನೆ ನಡೆಸಬೇಕು. ಕಾಯಂ ವೈದ್ಯಾಧಿಕಾರಿಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿರುವ ಆಸ್ಪತ್ರೆ ಹಾಗೂ ಪ್ರಭಾರಿ ಆಸ್ಪತ್ರೆ ವ್ಯಾಪ್ತಿಯ ಶಾಲಾ,ಅಂಗನ ವಾಡಿ ಹಾಗೂ ಇತರ ನಿಯಮಿತ ಕ್ಷೇತ್ರಭೇಟಿ ಕಾರ‌್ಯಗಳನ್ನು ಕೈಗೊಳ್ಳಬೇಕು. ಗುತ್ತಿಗೆ ವೈದ್ಯರು ಡಿಎಚ್‌ಒ ಅಥವಾ ಟಿಎಚ್‌ಒ ಅವರ ನಿರ್ದೇಶನ ದ ಮೇರೆಗೆ ತುರ್ತು ಸಂದರ್ಭದಲ್ಲಿ ಮಾತ್ರ ಕ್ಷೇತ್ರ ಭೇಟಿ ಮಾಡಬೇಕು. ತುರ್ತು ಸಂದರ್ಭ ಹೊರತು ಪಡಿಸಿ ವೈದ್ಯಾಧಿಕಾರಿಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪರಿಶೀಲನೆಗಳನ್ನು ಮಧ್ಯಾಹ್ನದ ನಂತರ ವಿಡಿಯೊ ಕಾನ್ಫರೆನ್ಸ್ ಮೂಲಕವೇ ನಡೆಸಬೇಕು. ಭೌತಿಕ ಸಭೆ ಅಗತ್ಯವಿಲ್ಲವೆಂದು ಸಿಇಒ ನಿರ್ದೇಶಿಸಿದ್ದಾರೆ.