ರಾಮದುರ್ಗ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳಗೆ ಬಿಜೆಪಿ ಮಂಡಲದ ನೇತತ್ವದಲ್ಲಿ ಮನವಿ ಸಲ್ಲಿಸಲಾಯಿತು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮುಖಂಡರಾದ ಪಿ.ಎ್. ಪಾಟೀಲ, ರಾಜೇಶ ಬೀಳಗಿ ಇತರರಿದ್ದರು. 
ಜಿಲ್ಲೆ

ಸಮರ್ಪಕ ವಿದ್ಯುತ್ ಪೂರೈಸಿ

ರಾಮದುರ್ಗ: ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ತಾಲೂಕು ಘಟಕದ ನೇತತ್ವದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಪಟ್ಟಣದ ಮಿನಿ ವಿಧಾನಸೌಧ ಎದುರು ಬುಧವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಹಾಗೂ ಹೆಸ್ಕಾಂ ಇಲಾಖೆಯ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ರೈತರಿಗೆ ಈ ಹಿಂದೆ ಬಿಜೆಪಿ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ನೀಡುತ್ತಿದ್ದ ರಾಜ್ಯ ಸರ್ಕಾರದ 4,000 ರೂ. ಹಣವನ್ನು ಕಾಂಗ್ರೆಸ್ ಸರ್ಕಾರ ಮೊಟಕುಗೊಳಿಸಿದೆ.ಲೋಡ್‌ಶೆಡ್ಡಿಂಗ್ ಹೆಸರಿನಲ್ಲಿ ರೈತರ ವಿದ್ಯುತ್ ಪಂಪ್‌ಸೆಟ್‌ಗೆ ಸರಿಯಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ವಿದ್ಯುತ್ ಬಿಲ್ ಉಚಿತ ಎಂದು ಹೇಳಿ, ಬಿಲ್ ಪಾವತಿ ಮಾಡುವವರಿಗೆ 200-300ರೂ. ಬದಲಿಗೆ 1,000 ರೂ. ಹೆಚ್ಚುವರಿ ಹೊರೆ ಹಾಕುತ್ತಿದೆ. ರೈತ ಆತ್ಮಹತ್ಯೆಗಳು ಅಧಿಕವಾಗಿದ್ದು, ಶೀಘ್ರ ಸರ್ಕಾರ ನೆರವಿಗೆ ಬರಬೇಕು. ಇಲ್ಲವಾದಲ್ಲಿ ತೀವ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಹಾಗೂ ಹೆಸ್ಕಾಂ ಎಇಇ ಶಿವಪ್ರಕಾಶ ಕರಡಿ, ಮನವಿಯನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ ಬೀಳಗಿ, ಮುಖಂಡರಾದ ಪಿ.ಎ್. ಪಾಟೀಲ, ಡಾ.ಕೆ.ವಿ. ಪಾಟೀಲ, ಜಾನಪ್ಪ ಹಕಾಟಿ, ವಿಠ್ಠಲ ಜಟಗನ್ನವರ, ಡಾ.ಬಿ.ಎನ್. ಮಾದನ್ನವರ, ಬಸನಗೌಡ ದ್ಯಾಮನಗೌಡ್ರ, ಭೀಮಸಿ ಸಿಂಗಾರಗೊಪ್ಪ, ಶಂಕರ ಹುರಕಡ್ಲಿ, ಈರನಗೌಡ ಹೊಸಗೌಡ್ರ, ಸುರೇಶ ಡುಳ್ಳೋಳ್ಳಿ ಇತರರು ಇದ್ದರು.