ಕಲಬುರಗಿ: ತಾಲೂಕಿನ ಖಣದಾಳ ಗ್ರಾಮದ ವ್ಯಾಪ್ತಿಯ ಜಮೀನುಗಳ ಐಪಿ ಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸೆ ಏಳು ಗಂಟೆ ನಿರಂತರ ವಿದ್ಯುತ್ ನೀಡುವಂತೆ ರಾಜ್ಯ ರೈತ ಸಂಘ, ಹಸಿರು ಸೇನೆ ತಾಲೂಕು ಅಧ್ಯಕ್ಷ ಸಂತೋಷ ರಾಠೋಡ್ ಜೆಸ್ಕಾಂ ಎಇಇಗೆ ಮನವಿ ಸಲ್ಲಿಸಿದ್ದಾರೆ. ಖಣದಾಳ ಗ್ರಾಮದ ಜಮೀನುಗಳ ಐಪಿ ಸೆಟ್‌ಗಳಿಗೆ ವಿದ್ಯುತ್ ನೀಡದೆ ಇರುವುದರಿಂದ ತೊಂದರೆ ಆಗುತ್ತಿದೆ. ಏಳು ಗಂಟೆ ನೀಡುವ ವಿದ್ಯುತ್‌ನಲ್ಲಿ ಪದೇ ಪದೆ ಕಡಿತಗೊಳಿಸುತ್ತಿರುವುದರಿಂದ ಬೋರ್‌ವೆಲ್ ಸುಡುತ್ತಿವೆ, ನೀರು ಹರಿಸಲು ರೈತರು ಸಂಕಷ್ಟ ಎದುರಿಸುವಂತಾಗಿದೆ. ವಿದ್ಯುತ್ ಕಟ್ ಆದಾಗ ಕರೆ ಮಾಡಿದರೂ ಸಿಬ್ಬಂದಿ ಸ್ವೀಕರಿಸುತ್ತಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.