ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ನವನಗರದಲ್ಲಿ ಅಧಿಕೃತ, ಅನಧಿಕೃತ ಧಾರ್ಮಿಕ ಸ್ಥಳಗಳನ್ನು ಗುರುತಿಸಿ ೨೦ ದಿನಗಳಲ್ಲಿ ವರದಿ ನೀಡಬೇಕು. ಆ ಬಳಿಕ ಅನಽಕೃತ ಧಾರ್ಮಿಕ ಸ್ಥಳಗಳ ತೆರವುಗೊಳಿಸಲು ಮೊತ್ತೊಂದು ಸುತ್ತಿನ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.
ನಗರದ ಜಿ.ಪಂ ಸಭಾಭವನದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ವಿವಿಧ ಧಾರ್ಮಿಕ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಳಗಡೆಯಾದಾಗ ಸರ್ವೇಯಲ್ಲಿ ದೇವಸ್ಥಾನ, ಮಸೀದಿ, ಚರ್ಚ ಗಳನ್ನು ಗುರುತಿಸಿದ ಬಗ್ಗೆ, ಅವುಗಳಲ್ಲಿ ಎಷ್ಟು ಧಾರ್ಮಿಕ ಕೇಂದ್ರಗಳಿಗೆ ಭೂಮಿ ಹಂಚಿಕೆ ಮಾಡಲಾಗಿದೆ ಎನ್ನುವ ಕುರಿತು ಮಾಹಿತಿ ಸಂಗ್ರಹಿಸಬೇಕು. ಜೊತೆಗೆ ಅಽಕೃತ, ಅನಽಕೃತ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡಬೇಕು ಎಂದು ಬಿಟಿಡಿಎ ಅಽಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಹಿಂದೂ ಮುಖಂಡ ಅಶೋಕ ಲಿಂಬಾವಳಿ ಮಾತನಾಡಿ, ಬಾಗಲಕೋಟೆಯಲ್ಲಿ ನೂರಕ್ಕೂ ಹೆಚ್ಚು ಸಣ್ಣಪುಟ್ಟ ದೇವಸ್ಥಾನಗಳಿದ್ದವು, ಸರ್ಕಾರ ಯಾವುದೆ ಮಾಹಿತಿ ನೀಡದೆ ನೀರು ನಿಲ್ಲಿಸಿತು. ದೇವಸ್ಥಾನದ ಮೂರ್ತಿಗಳನ್ನು ಶೆಡ್ಡಗಳಲ್ಲಿ ಇಡಲಾಯಿತು. ಬಿಟಿಡಿಎ ಅಧಿಕಾರಿಗಳು ದೇವಸ್ಥಾನಗಳಿಗೆ ಜಾಗ ನೀಡಲಿಲ್ಲ, ಮೂರ್ತಿಗಳು ಎಲ್ಲಿ ಹೋದವು ಎನ್ನುವುದು ಗೊತ್ತು ಆಗಲಿಲ್ಲ ಎಂದು ಹರಿಹಾಯ್ದ ಅವರು, ಕೆಲ ದೇವಸ್ಥಾನಗಳಿಗೆ ದಾಖಲಾತಿಗಳು ಇಲ್ಲ. ಬಿಟಿಡಿಎ ಮುಖ್ಯ ಇಂಜನಿಯರ ಯಾವುದೇ ಸ್ಥಳಗಳಿಗೆ ಭೇಟಿ ನೀಡಲಿಲ್ಲ. ಬಾಗಲಕೋಟೆ ಮಾರುಕಟ್ಟೆ ವ್ಯಾಪಾರ ಹಾಳು ಮಾಡಿದ್ದು ಆರೋಪಿಸಿದರು.
ಅಶೋಕ ಮುತ್ತಿನಮಠ ಮಾತನಾಡಿ, ಮಾಲ್ಕಿ ಜಾಗದಲ್ಲಿ ಇದ್ದ ದೇವಸ್ಥಾನಗಳಿಗೆ ಜಾಗ ನೀಡಲಾಗಿದೆ. ಟ್ರಸ್ಟ್ಗಳಿದ್ದ ದೇವಸ್ಥಾನಗಳಿಗೆ ಜಾಗ ನೀಡಲಾಗಿದೆ. ಆದರೇ ಆಯಾ ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಪೂಜಿಸಲಾಗುತ್ತಿದ್ದ ದೇವಸ್ಥಾನಗಳಿಗೆ ಜಾಗ ನೀಡಲಿಲ್ಲ. ಬಿಟಿಡಿಎ ಇಲ್ಲ ಸಲ್ಲದ ನೆಪ ಹೇಳುತ್ತದೆ ಹೊರತು ದಾಖಲೆ, ಸರ್ವೇ ಬಗ್ಗೆ ಮಾತನಾಡುವದಿಲ್ಲ ಎಂದು ತಿಳಿಸಿದರು.
ಎ.ಎ.ದಂಡಿಯಾ ಮಾತನಾಡಿ, ಆಲಮಟ್ಟಿ ಹಿನ್ನೀರಿಗೆ ೫೧೯ ಮೀಟರ್, ೫೨೧ ಮೀಟರ್, ೫೨೩ ಮೀಟರ್ ವರೆಗೆ ಅಳತೆ ಮಾಡಿ ಮಸೀದಿ ಮಂದಿರಗಳನ್ನು ಸ್ವಾಧಿನಪಡಿಸಿಕೊಂಡು ನವನಗರದಲ್ಲಿ ಅಂದಾಜು ೪೫೦೦ ಎಕರೆ ಜಾಗದಲ್ಲಿ ಪುನರವಸತಿ ಕಲ್ಪಿಸಲಾಯಿತು. ಆದರೇ ಪೂರ್ಣ ಪ್ರಮಾಣದಲ್ಲಿ ವಿಷಯ ಇತ್ಯರ್ಥವಾಗಲಿಲ್ಲ ಎಂದು ದೂರಿದರು.
ಕುಮಾರಸ್ವಾಮಿ ಹಿರೇಮಠ ಮಾತನಾಡಿ. ನವನಗರದ ಸೆಕ್ಟರ ನಂಬರ ೧೬ ರಲ್ಲಿ ಅನಽಕೃತ ಮಸೀದಿ ಪ್ರಾರಂಭಮಾಡಿದ್ದರು. ೪೮ ನೇ ಸೆಕ್ಟರದಲ್ಲಿ ನಿವೇಶನದ ಹೆಸರಲ್ಲಿ ಮಸೀದಿ ನಿರ್ಮಾಣ ಮಾಡಿz್ದÁರೆ. ೫ ನೇ ಸೆಕ್ಟರದಲ್ಲಿ ಮಸೀದಿ ನಿರ್ಮಾಣ ಮಾಡಿz್ದÁರೆ. ಆದರೇ ನಾವು ಸೆಕ್ಟರ್ ೯೭ ರಲ್ಲಿ ಗಣಪತಿ ಮೂರ್ತಿ ಸ್ಥಾಪನೆ ಮಾಡಿದಕ್ಕೆ ಅಧಿಕಾರಿಗಳು ನೋಟಿಸ್ ನೀಡುತ್ತಾರೆ. ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಮಾಡುವುದು ತರವಲ್ಲ. ಮಸೀದಿ ನಿರ್ಮಾಣಮಾಡಲಿಕ್ಕೆ ನಮ್ಮ ವಿರೋಧವಿಲ್ಲ ಅನಧಿಕೃತವಾಗಿ ನಿರ್ಮಾಣ ಮಾಡಿದ್ದಕ್ಕೆ ನಮ್ಮ ವಿರೋಧ ಎಂದು ಹೇಳಿದರು.
ಸಿಕಂದರ ಅಥಣಿ ಮಾತನಾಡಿ, ನವನಗರದದಲ್ಲಿ ಅನಽಕೃತ, ಅಽಕೃತ ಅವಾಂತರಕ್ಕೆ ಬಿಟಿಡಿಎ ಅಽಕಾರಿಗಳು ಕಾರಣ. ನವನಗರದಲ್ಲಿ ಯಾವುದೆ ಮಸೀದಿಗಳು ಸರ್ಕಾರಿ ಜಾಗದಲ್ಲಿ ಇ¯್ಲÁ. ಎಲ್ಲವನ್ನು ದುಡ್ಡು ಕೊಟ್ಡು ಖರೀದಿ ಮಾಡಿದ್ದೇವೆ ಎಂದರು.
ನಾಗರಾಜ ಹದ್ಲಿ ಮಾತನಾಡಿ, ಹಳೇ ಬಾಗಲಕೋಟೆಯಲ್ಲಿ ಎಷ್ಟು ಮಸೀದಿ ಮಂದಿರಗಳು ಮುಳುಗಡೆಯಾಗಿವೆ. ಎಷ್ಟು ಅಽಕೃತ ಅನಽಕೃತ ಕಟ್ಟಡ ಎಂಬ ಮಾಹಿತಿ ಕಲೆಹಾಕಿ ಕ್ರಮ ತಗೆದುಕೊಳ್ಳಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ ಜಿದ್ದಿ, ಮುಖಂಡರಾದ ರಮೇಶ ಬದ್ನೂರ, ಚಂದ್ರಶೇಕರ ರಾಠೋಡ, ಶಿವು ಮೇಲ್ನಾಡ, ಬಸವರಾಜ ಯಂಕ0ಚಿ, ಶಫೀಕ ಜಮಾದಾರ ಆರ್.ಎಚ್. ಪೆಂಡಾರ, ಅಯೋಬ ಪುಣೇಕಾರ, ಮಹಬೂಬಸಾಬ ರಬಕವಿ, ಅ¯್ಲÁಭಕ್ಷ ಬಾಗೆವಾಡಿ, ವೈ.ಜೆ.ಪಠಾಣ, ಉಮೇಶ ಹಂಚನಾಳ, ಸುರೇಶ ಮಜ್ಜಗಿ, ಸುರೇಶ ಮಾಗಿ, ಚನ್ನವೀರ ಅಂಗಡಿ ಸೇರಿದಂತೆ ಇತರರು ಇದ್ದರು.