oplus_0 
ಜಿಲ್ಲೆ

ಸಮರ್ಪಕ ಆರೋಗ್ಯ ಸೇವೆ ಗ್ರಾಮಾಭಿವೃದ್ಧಿ ಗುರಿ

ಚಿತ್ರದುರ್ಗ:  ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್,ಆರೋಗ್ಯ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಚಿತ್ರದುರ್ಗ ತಾಲೂ ಕು ಡಿಎಸ್‌ಹಳ್ಳಿ ಮತ್ತು ಇಂಗಳದಾಳ್ ಗ್ರಾಪಂಗಳಲ್ಲಿ ಮಂಗಳವಾರ ಪಂಚಾಯಿತಿ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಮತ್ತು ಸಮನ್ವಯ ಇಲಾ ಖೆ ಅಧಿಕಾರಿಗಳಿಗೆ ಗ್ರಾಮ ಆರೋಗ್ಯ ಯೋಜನೆ ತರಬೇತಿ ಕಾರ‌್ಯಾಗಾರ ಏರ್ಪಡಿಸಲಾಗಿತ್ತು.
 ಕಾರ‌್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್,ಸಮರ್ಪಕ ಆರೋಗ್ಯ ಸೇವೆಗಳು, ತಾಯಿ-ಶಿಶು ಮರಣ ನಿಯಂತ್ರಣ, ಕ್ಷಯರೋಗ,ಕೀಟಜನ್ಯ ರೋಗಗಳ ನಿಯಂತ್ರಣ ಮಾನಸಿಕ ಆರೋಗ್ಯಕರ ಸೇವಾ ಸೌಲಭ್ಯಗಳು, ಸಾ ಮಾಜಿಕ ಪಿಡುಗುಗಳಾದ ಬಾಲ್ಯವಿವಾಹ,ಭ್ರೂಣ ಹತ್ಯೆ ನಿಯಂತ್ರಣ ಇತ್ಯಾದಿ ಪ್ರತಿ ಗ್ರಾಮದ ಅಭಿವೃದ್ಧಿ ಗುರಿಗಳನ್ನಾಗಿ ಪರಿಗಣಿಸಲಾಗಿದೆ ಎಂದರು.
 ಡಿಎಸ್‌ಹಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ,ಉಪಾಧ್ಯಕ್ಷೆ ಸರೋಜಮ್ಮ,ಪಿಡಿಒ ಶಿಲ್ಪಾ,ಸದಸ್ಯರು,ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್,ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ರೇಣುಕಮ್ಮ,ಅನಿತಾ,ರೇಖಾ,ಇಂಗಳದಾಳ್ ಗ್ರಾಪಂ ಅಧ್ಯಕ್ಷ ಕೆರುವಲ್ಲಪ್ಪ,ರಾಜಪ್ಪ ಮತ್ತಿತರ ಗ್ರಾಪಂ ಸದಸ್ಯರು,ಸದಸ್ಯ ರಾಜಪ್ಪ,ವಿದ್ಯಾಶ್ರೀ,ಕೆ.ಪಿ.ಶೀಲಾ ಮತ್ತಿತರರು ಇದ್ದರು.
 ----