ಜಿಲ್ಲೆ

ಸಮಯದ ಸದ್ಬಳಕೆಯಾಗಲಿ

ಅಥಣಿ ಗ್ರಾಮೀಣ: ವಿದ್ಯಾರ್ಥಿಗಳು ಅಮೂಲ್ಯವಾದ ಸಮಯವನ್ನು ಹಾಳು ಮಾಡದೇ ಸದುಪಯೋಗಪಡಿಸಿಕೊಂಡು ಅಸಾಧ್ಯವಾದುದನ್ನು ಸಂಶೋಧನೆ ಮೂಲಕ ಮಾಡಿ ತೋರಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಪ್ರೋ.ಎಸ್.ಬಿ.ಬಿರಾದಾರ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಹಾಗೂ ಆರ್‌ಡಿಸಿ ವತಿಯಿಂದ ಬಿಎ ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಸಂಶೋಧನಾ ವಿಧಾನ ಕಾರ್ಯಾಗಾರದಲ್ಲಿ ಮಾತನಾಡಿ, ವೈಜ್ಞಾನಿಕ ಸಂಶೋಧನೆಗಿಂತ ಮನುಷ್ಯರು ಅಳೆಯುವ ಸಾಮಾಜಿಕ ಸಂಶೋಧನೆ ಕ್ಲಿಷ್ಟಕರವಾದದ್ದು, ಹೀಗಾಗಿ ಕಾಲೇಜಿನ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಪ್ರತಿಯೊಂದು ವಿಷಯದಲ್ಲಿಯೂ ಆಳವಾದ ಅಧ್ಯಯನ ಮಾಡಿ ಉತ್ತಮ ಸಂಶೋಧಕರಾಗಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಪ್ರೋ.ಪರಪ್ಪ ಮಗದುಮ್ಮ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಸಂಶೋಧನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಆರ್‌ಡಿಸಿ ಸಂಯೋಜಕಿ ಡಾ.ವಿದ್ಯಾಶ್ರೀ ಕೋಲಕಾರ ಮಾತನಾಡಿದರು. ಪ್ರೋ.ವೈಶಾಲಿ ಅಪರಾಜ, ಕಾಕಾಸಾಹೇಬ ಶೇಡಶ್ಯಾಳೆ, ಶೈಲಶ್ರೀ ತುಬಚಿ, ಭೀಮು ಮಚಗಾರ, ಮೀನಾಕ್ಷಿ ಕುಲಕರ್ಣಿ, ಪಲ್ಲವಿ ಎಂ.ಎಂ, ಲಕ್ಷ್ಮಣ ಕರೆಣ್ಣವರ, ಸಚಿನ ಪವಾರ, ಮಂಜುನಾಥಸ್ವಾಮಿ. ಎ.ಎಚ್ ಇತರರಿದ್ದರು. ಪ್ರೋ.ಶ್ರೀಕಾಂತ ಜಾಧವ ಸ್ವಾಗತಿಸಿದರು. ಪ್ರೋ.ದಯಾನಂದ ಎನ್.ಎಲ್ ನಿರೂಪಿಸಿದರು. ಸದ್ರಾಂ ಗಡದೆ ವಂದಿಸಿದರು.