ಶೃಂಗೇರಿ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಆಂಬುಲೆನ್ಸ್ ಚಾಲಕ ಸತೀಶ್ ಅವರನ್ನು ಗೌರವಿಸಲಾಯಿತು. ಡಿ.ಸಿ.ಶಂಕರಪ್ಪ, ಮಂಜುನಾಥ್, ಕಳಸಪ್ಪ, ಇಂದಿರಾ ಇತರರಿದ್ದರು. 
ಜಿಲ್ಲೆ

ಸಮಯ ವ್ಯರ್ಥ ಮಾಡಬೇಡಿ

ಎಸ್.ಎನ್.ರವೀಂದ್ರ

ಶೃಂಗೇರಿ: ಬದುಕು ಕ್ಷಣಿಕವಾಗಿದ್ದು, ಇರುವ ಸಮಯವನ್ನು ಸದುಪಯೋಗ ಮಾಡಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಲಯನ್ಸ್ ಕ್ಲಬ್ ವೈಸ್‌ಗವರ್ನರ್ ತಾರಾನಾಥ್ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಬದುಕಿನ ಪ್ರತಿ ಕ್ಷಣವೂ ಮುಖ್ಯ. ಕಳೆದಿರುವ ಸಮಯ ಮತ್ತೆ ನಮಗೆ ದೊರೆಯುವುದಿಲ್ಲ. ಜೀವನದಲ್ಲಿ ಉತ್ತಮವಾದುದನ್ನೇ ಆಯ್ಕೆ ಮಾಡಿಕೊಂಡಾಗ ನೆಮ್ಮದಿಯ ಬದುಕು ನಮ್ಮದಾಗುತ್ತದೆ. ಜೀವನದಲ್ಲಿ ಸಂತೋಷ, ತೃಪ್ತಿಯನ್ನು ನಾವೇ ಪಡೆದುಕೊಳ್ಳಬೇಕು. ಇದನ್ನು ಯಾರೂ ಕಸಿಯಲು ಸಾಧ್ಯವಿಲ್ಲ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಧರ್ಮಪ್ಪ ಹೆಗ್ಡೆ ಪದವಿ ಸ್ವೀಕರಿಸಿ ಮಾತನಾಡಿ, ಎರಡನೇ ಅವಧಿಗೆ ಅಧ್ಯಕ್ಷನಾಗಿ ಸಮಾಜಮುಖಿ ಕಾರ್ಯಕ್ರಮವನ್ನು ಕ್ಲಬ್‌ನಿಂದ ಹಮ್ಮಿಕೊಳ್ಳುತ್ತೇನೆ. ಲಯನ್ಸ್ ಜಿಲ್ಲಾ ಕಾರ್ಯಕ್ರಮದೊಂದಿಗೆ ಸ್ಥಳೀಯವಾಗಿ ರೈತರಿಗೆ ಉಪಯುಕ್ತ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದರು.

ಸಿಬಿಎಸ್‌ಇ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಡಾ. ಅಣ್ಣಾದೊರೆ ಅವರ ಪುತ್ರ ಸಮೃದ್ಧ್, ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಂಬುಲೆನ್ಸ್ ಚಾಲಕ ಸತೀಶ್ ಅವರನ್ನು ಗೌರವಿಸಲಾಯಿತು.

ಕಾರ್ಯದರ್ಶಿ ಬಿ.ಜಿ.ಮಂಜುನಾಥ್, ಖಜಾಂಚಿ ಪ್ರಕಾಶ್ ಹೆಗ್ಡೆ, ಇಂದಿರಾ ಹೆಗ್ಡೆ, ಉಮೇಶ್ ಪುದುವಾಳ್, ಡಿ.ಸಿ.ಶಂಕರಪ್ಪ, ಎಚ್.ಕೆ.ಸುಬ್ರಹ್ಮಣ್ಯ, ಕೆ.ಎಂ.ಮಂಜುನಾಥ್, ಸತೀಶ್ ಭಟ್, ಟಿ.ಟಿ.ಕಳಸಪ್ಪ ಇತರರಿದ್ದರು.