ರಾಮದುರ್ಗ: ಶಿಣ ಸಂಸ್ಥೆಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮಹತ್ವದ ಪಾತ್ರ ವಹಿಸುತ್ತವೆ. ಉನ್ನತ ಸಾಧನೆ ಮಾಡಲು
ವಿದ್ಯಾ ಪ್ರಸಾರಕ ಸಮಿತಿಯು ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುತ್ತಿರುವುದು ಶ್ಲಾನೀಯ ಎಂದು ೇತ್ರ ಶಿಣಾಧಿಕಾರಿ
ಆರ್.ಟಿ.ಬಳಿಗಾರ ಹೇಳಿದರು.
ಪಟ್ಟಣದ ವಿದ್ಯಾ ಪ್ರಸಾರಕ ಸಮಿತಿಯ ಸುಶೀಲಾತಾಯಿ ವೈ.ಕುಲಗೋಡ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕ್ರೀಡೆ ಹಾಗೂ ಸಾಂಸತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ದ್ವೀತಿಯ ಪಿಯುಸಿಯು ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಟ್ಟವಾಗಿದ್ದು, ಸಮಯ ಪ್ರಜ್ಞೆಯೊಂದಿಗೆ ಅಧ್ಯಯನ ಮಾಡಿದರೆ ನಿಗದಿತ ಗುರಿ ತಲುಪಲು ಸಾಧ್ಯ ಎಂದರು.
ವಿದ್ಯಾ ಪ್ರಸಾರಕ ಸಮಿತಿ ಸದಸ್ಯ ಪಿ.ಎಂ.ಜಗತಾಪ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಓದದೆ ಏನನ್ನೂ ಸಾಧಿಸಲಾಗುವುದಿಲ್ಲ. ವಿದ್ಯಾರ್ಥಿಗಳು ಓದಿ ಹೆಚ್ಚು ಅಂಕ ಗಳಿಸಿದರೆ ಗೌರವ ಹೆಚ್ಚುತ್ತದೆ ಎಂದರು. ಸಮಿತಿ ಅಧ್ಯ ಟಿ.ದಾಮೋದರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಂ.ಬಿ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಸದಸ್ಯರಾದ ಡಾ.ವೆ.ಬಿ. ಕುಲಗೋಡ, ಎಸ್.ಎಸ್. ಸುಲ್ತಾನಪೂರ, ಬಿ.ವೆ. ತಳವಾರ, ಉಪನ್ಯಾಸಕ ಎ.ಆರ್.ಪಮ್ಮಾರ, ಬಿ.ಆರ್. ಪಮ್ಮಾರ, ಎಸ್.ಎಂ. ಕರಿಕಟ್ಟಿ, ವಿದ್ಯಾರ್ಥಿನಿ ರಾಮವ್ವ ಪೂಜಾರ ಇತರರಿದ್ದರು.