ಜಿಲ್ಲೆ

ಸಮಯ ಪಾಲನೆಯೇ ಯಶಸ್ಸಿನ ಗುಟ್ಟು


ಯಾದಗಿರಿ: ವಿದ್ಯಾಥರ್ಿಗಳು ಶೃದ್ಧೆಯಿಂದ ಅಧ್ಯಯನ ಕೈಗೊಂಡು, ಗುರುಗಳು ಹೇಳಿಕೊಟ್ಟ ಪಾಠವನ್ನು ಸದಾ ಮನನ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಇಟ್ಟುಕೊಂಡು ಗುರಿ ತಲುಪಲು ಪ್ರಯತ್ನಿಸಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಕಿವಿಮಾತು ಹೇಳಿದರು.

ನಗರದ ಪ್ರೇರಣಾ ವಿಜ್ಞಾನ ಪಿಯುಸಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ವಿದ್ಯಾಥರ್ಿಗಳ ಪ್ರತಿಭಾ ಪುರಸ್ಕಾರ ಮತ್ತು ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆದುಕೊಳ್ಳಬೇಕಾದರೆ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಿತ್ತು. ಆದರೆ ಇಂದು ಪರಸ್ಥಿತಿ ಹಾಗಿಲ್ಲ. ಸಕರ್ಾರದೊಂದಿಗೆ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ಕೊಡಲು ಮುಂದೆ ಬರುತ್ತಿವೆ ಎಂದರು.

ಆಧುನಿಕ ಯುಗದಲ್ಲಿ ಜಗತ್ತಿನ ವಿದ್ಯಮಾನಗಳನ್ನು ಅರಿಯುವುದರೊಂದಿಗೆ ವಿದ್ಯಾಥರ್ಿಗಳು ತಮ್ಮ ಭವಿಷ್ಯತ್ತನ್ನು ರೂಪಿಸಿಕೊಳ್ಳುಲು ಪ್ರಯತ್ನಿಸಬೇಕು. ಸಮಯ ಪರಿಪಾಲನೆಯೇ ನಮ್ಮ ಯಶಸ್ಸಿನ ಗುಟ್ಟು ಎಂಬುದು ನೆನಪಿಟ್ಟುಕೊಳ್ಳಬೇಕು. ಪಾಲಕರು ನಿಮ್ಮ ಮೇಲಿಟ್ಟ ನಂಬಿಕೆ, ವಿಶ್ವಾಸವನ್ನು ಉಳಸಿಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ನೀಟ್ನಲ್ಲಿ 560 ಅಂಕ ಪಡೆದು ಯಾದಗಿರಿ ಯಿಮ್ಸ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ವಿದ್ಯಾಥರ್ಿನಿ ಮೇಘನಾ ಪಾಟೀಲ್ ಬಾಡಿಯಾಳ, 466 ಅಂಕ ಪಡೆದು ರಾಯಚೂರು ರಿಮ್ಸ್ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥರ್ಿ ಅಭಿಷೇಕ ಕೋತ್ವಾಲ್ರನ್ನು ಸನ್ಮಾನಿಸಲಾಯಿತು.