ಕಮಲನಗರದ ತಹಸಿಲ್ ಕಚೇರಿಯಲ್ಲಿ ಸಂವಿಧಾನ ಸಮರ್ಪಣಾ ದಿನ ಅಂಗವಾಗಿ ಮಂಗಳವಾರ ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ ಪ್ರತಿಜ್ಞಾವಿಧಿ ಬೋಧಿಸಿದರು. ಶಿರಸ್ತೇದಾರ್ ಅಶ್ವಿನ ಪಾಟೀಲ್, ಎಸ್‌ಡಿಎ ಝರೆಪ್ಪಾ ಕಾಂಬಳೆ, ಮಾಣಿಕ ನಂದಿ, ವಿಕ್ರಮ ಪಾಂಚಾಳ, ಶ್ರೀಕಾಂತ, ಸುಭಾಷ ಹೆಗ್ಗೆ, ಏಕನಾಥ ಗಾಯಕವಾಡ, ಸುನೀಲ ಘಾಟೆ ಇತರರಿದ್ದರು. 
ಜಿಲ್ಲೆ

ಸಮಬಾಳು ನೀಡಿದೆ ಭಾರತದ ಸಂವಿಧಾನ

ಕಮಲನಗರ: ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಭಾರತದ ಸಂವಿಧಾನವು ಸರ್ವರಿಗೂ ಸಮಬಾಳು-ಸಮಪಾಲು ನೀಡಿದೆ ಎಂದು ತಹಸೀಲ್ದಾರ್ ಅಮೀತಕುಮಾರ ಕುಲಕರ್ಣಿ ಹೇಳಿದರು.

ತಹಸಿಲ್ ಕಚೇರಿಯಲ್ಲಿ ಮಂಗಳವಾರ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸಂವಿಧಾನ ದೇಶದ ಪ್ರತಿ ಪ್ರಜೆಗೂ ಸಮಾನ ಹಕ್ಕು ನೀಡಿದೆ. ದೇಶದ ಸಾರ್ವಭೌಮತೆ ಹಾಗೂ ಪ್ರಜೆಗಳ ಹಕ್ಕುಗಳ ರಕ್ಷಣೆ ಸಂವಿಧಾನದಿಂದ ಮಾತ್ರ ಸಾಧ್ಯ. ಸಂವಿಧಾನ ಜನರ ಜೀವನಾಡಿಯಾಗಿದ್ದು, ಪ್ರತಿಯೊಬ್ಬರೂ ಸಂವಿಧಾನ ಗೌರವಿಸಬೇಕು ಎಂದರು.

ಶಿರಸ್ತೇದಾರ್ ಅಶ್ವಿನ ಪಾಟೀಲ್, ಎಸ್‌ಡಿಎ ಝರೆಪ್ಪ ಕಾಂಬಳೆ, ಮಾಣಿಕ ನಂದಿ, ವಿಕ್ರಮ ಪಾಂಚಾಳ, ಶ್ರೀಕಾಂತ, ಸುಭಾಷ ಹೆಗ್ಗೆ, ಏಕನಾಥ ಗಾಯಕವಾಡ, ಸುನೀಲ ಘಾಟೆ ಇತರರಿದ್ದರು.