ತೆಲಸಂಗ: ಯಾವುದೇ ಅಭಿವೃದ್ಧಿ ಕಾರ್ಯ ಸುಗಮವಾಗಿ ಆಗಬೇಕಾದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಮನ್ವಯ ಮುಖ್ಯವಾಗುತ್ತದೆ ಎಂದು ಶಾಸಕ ಲಕ್ಷ$್ಮಣ ಸವದಿ ಹೇಳಿದರು.
ಸ್ಥಳಿಯ ಗ್ರಾಪಂ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.ಅಧಿಕಾರಿಗಳು ಪ್ರಾಮಾಣಿಕರಾದರೆ ಜನಪ್ರತಿನಿಧಿಗಳ ಕೆಲಸ ಸಲೀಸಾಗುತ್ತದೆ. ಸ್ಥಳಿಯ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಿದರೆ, ಸರ್ಕಾರಕ್ಕೆ ಒಳ್ಳೆಯ ಹೆಸರು ಹಾಗೂ ಜನಮಾನಸದಲ್ಲಿ ಗೌರವಕ್ಕೆ ಪಾತ್ರರಾಗುತ್ತಾರೆ. ತಾಲೂಕಿನಲ್ಲಿ 3 ವಿದ್ಯುತ್ ಸ್ಟೇಷನ್ಗಳ ನಿರ್ಮಾಣ ಕಾರ್ಯಕ್ಕೆ ಸ್ಥಳ ಪರಿಶೀಲನೆ ಮುಗಿದಿದೆ. ಈ ಭಾಗದ 50 ಸಾವಿರ ಎಕರೆ ಭೂಮಿಗೆ ನೀರಾವರಿ ಕಲ್ಪಿಸುವ 1500 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶ್ರೀ ಸಿಎಂ ಮತ್ತು ಡಿಸಿಎಂ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದರು.
ಗ್ರಾಪಂ ಅಧ್ಯ ವಿಲಾಸ ಮೋರೆ, ಉಪಾಧ್ಯೆ ಮೀನಾ ಬಾಣಿ, ತಾಪಂ ಇಒ ಶಿವಾನಂದ ಕಲ್ಲಾಪೂರ, ಇಂಜಿನಿಯರ್ ವೀರಣ್ಣ ವಾಲಿ, ಸಹಾಯಕ ನಿರ್ದೇಶಕ ಶರಣಗೌಡ ಪಾಟೀಲ, ಮಹಿಬೂಬ್ ಕೋತ್ವಾಲ್, ಪಿಡಿಒ ಬೀರಪ್ಪ ಕಡಗಂಚಿ ಇತರರಿದ್ದರು.
ತೆಲಸಂಗ ಗ್ರಾಪಂ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಶಾಸಕ ಲಕ್ಷ$್ಮಣ ಸವದಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. ವಿಲಾಸ ಮೋರೆ, ಮೀನಾ ಬಾಣಿ, ತಾಪಂ ಇಒ ಶಿವಾನಂದ ಕಲ್ಲಾಪೂರ, ಬೀರಪ್ಪ ಕಡಗಂಚಿ ಇತರರಿದ್ದರು.