ಜಿಲ್ಲೆ

ಸಮಗ್ರ ಪ್ರಗತಿಯ ವಿಚಾರ ಕ್ರಾಂತಿಯ ಉತ್ಸವ

ಕಲಬುರಗಿ: ಭಾರತ ವಿಕಾಸ ಸಂಗಮ, ವಿಕಾಸ ಅಕಾಡೆಮಿ, ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಜಯಂತಿ, ಭಾರತೀಯ ಸಂಸ್ಕೃತಿ ಉತ್ಸವವೂ ಸಮಾಜದ ಸಮಗ್ರ ಪ್ರಗತಿಯ ವಿಚಾರ ಕ್ರಾಂತಿಯನ್ನು ಮೂಡಿಸಲಿದೆ ಎಂದು ಭಾರತ ವಿಕಾಸ ಸಂಗಮ ಸಂರಕ್ಷಕ ಬಸವರಾಜ ಪಾಟೀಲ್ ಸೇಡಂ ಹೇಳಿದರು.

ಉತ್ಸವ ನಿಮಿತ್ತ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ನಗರದ ಗಣ್ಯರ ಸಭೆಯಲ್ಲಿ ಮಾತನಾಡಿ, ಹನುಮ ಜನಿಸಿದ, ಶರಣರ ಕಲ್ಯಾಣ ಕ್ರಾಂತಿ ನಡೆದ ನಾಡು, ಕಾಯಕ ತತ್ವವನ್ನು ಜಗತ್ತಿಗೆ ಸಾರಿದ ಕಲ್ಯಾಣ ಕರ್ನಾಟಕ ಹಿಂದುಳಿದಿಲ್ಲ. ಅದರ ಶಕ್ತಿಯನ್ನು ಜನರಿಗೆ ತಿಳಿಸಿ, ಬಡಿದೆಬ್ಬಿಸುವ, ದೇಶದ ಆಗು ಹೋಗುಗಳಿಗೆ ಹೊಸ ದಿಸೆ ತೋರಿಸುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.

ಜ.೨೬ರಿಂದ ಫೆ.೦೬ರವರೆಗೆ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವವನ್ನು ಸಿz್ದೆÃಶ್ವರ ಸ್ವಾಮೀಜಿಯವರಿಗೆ ಅರ್ಪಿಸಲಾಗುತ್ತಿದೆ. ೩೦೦ ಎಕರೆ ವ್ಯಾಪ್ತಿಯಲ್ಲಿ ಬೃಹತ್ ಉತ್ಸವ ನಡೆಯಲಿದ್ದು, ೫೨ ಪುಟದ ಸುದೀರ್ಘ ಆಮಂತ್ರಣ ಮುದ್ರಿಸಲಾಗಿದೆ. ೧೨ ಟನ್ ಕಾಗದ ಬಳಸಿದ್ದು, ಆಮಂತ್ರಣ ಪತ್ರಿಕೆಯೇ ಗಿನ್ನಿಸ್ ದಾಖಲೆ ನಿರ್ಮಿಸಲಿದೆ ಎಂದು ತಿಳಿಸಿದರು.

ವಿಕಾಸ ಅಕಾಡೆಮಿ ವಿಶ್ವಸ್ಥ ಮಾರ್ತಂಡ ಶಾಸ್ತಿç ಪ್ರಾಸ್ತಾವಿಕ ಮಾತನಾಡಿ, ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಸಮಗ್ರ ವಿಶ್ವರೂಪ ದರ್ಶನ ಆಗಲಿದ್ದು, ಶರಣರ ನಾಡು ಕಲಬುರಗಿಯ ಕಂಪು ಎಲ್ಲರ ಸಹಕಾರದಿಂದ ಎಲ್ಲೆಡೆ ಹರಡಬೇಕು. ಸಾಮಾಜಿಕ ಋಣ ತೀರಿಸುವ ಅವಕಾಶ ಇಲ್ಲಿ ದೊರೆಯಲಿದೆ. ದೃಷ್ಟಿ ಬದಲಾದರೆ ಸೃಷ್ಟಿ ಬದಲಾಗುವುದು ಎಂಬ ಚಿಂತನೆಯೊAದಿಗೆ ಬೃಹತ್ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಪ್ರೊ.ದಯಾನಂದ ಅಗಸರ, ಶರಣಬಸವ ವಿವಿ ಅನೀಲಕುಮಾರ ಬಿಡವೆ ಇತರರಿದ್ದರು. ಉಮೇಶ ಶೆಟ್ಟಿ ಸ್ವಾಗತಿಸಿದರು.