ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ಮುಸ್ಲಿಂ ಹಾಸ್ಟೆಲ್ ವಕ್ಫ್ ಸಂಸ್ಥೆ ನೊಂದಾಯಿತ ಸದಸ್ಯರು ಮುಸ್ಲಿಂ ಹಾಸ್ಟೆಲ್ ವಕ್ಫ್ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಶಾಂತಿಭAಗ ಮಾಡುವ ಜೊತೆಗೆ ಹಲ್ಲೆಗೆ ಮುಂದಾಗಿರುವ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ ಶಾಂತಿ ಕಾಪಾಡುವ ಜೊತೆಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶಿರಾಜ್ ಯೂಸೂಫ್ ಹಾಜಿ, ಜಮೀರ್ ಅಹ್ಮದ್, ಫೈರೋಜ್ ಅಹ್ಮದ್, ರಜ್ವಿ, ಗೌಸ್ ಮುನೀರ್ ಮತ್ತಿತರರಿದ್ದರು. 
ಜಿಲ್ಲೆ

ಸಭೆಯಲ್ಲಿ ಹಲ್ಲೆ ನಡೆಸಲು ಮುಂದಾದವರ ವಿರುದ್ಧ ಕ್ರಮ ಕೈಗೊಳ್ಳಿ

ಚಿಕ್ಕಮಗಳೂರು: ನಗರದ ಮುಸ್ಲಿಂ ಹಾಸ್ಟೆಲ್ ವಕ್ಫ್ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಶಾಂತಿಭAಗ ಮಾಡುವ ಜೊತೆಗೆ ಹಲ್ಲೆಗೆ ಮುಂದಾಗಿರುವ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ ಶಾಂತಿ ಕಾಪಾಡುವ ಜೊತೆಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಹಾಸ್ಟೆಲ್ ವಕ್ಫ್ ಸಂಸ್ಥೆ ನೊಂದಾಯಿತ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಬೇಲೂರು ರಸ್ತೆಯಲ್ಲಿರುವ ಮುಸ್ಲಿಂ ಹಾಸ್ಟೆಲ್ ವಕ್ಫ್ ಸಂಸ್ಥೆಯ ಆಡಳಿತ ಸಮಿತಿಯ ಆಯ್ಕೆ ಪ್ರಕ್ರಿಯೆಯ ಮಹಾಸಭೆ ಮಂಗಳವಾರ ಕರೆಯಲಾಗಿತ್ತು. ಈ ಸಭೆಯಲ್ಲಿ ೫೦೬ ಜನರ ಸದಸ್ಯರ ಪೈಕಿ ಸುಮಾರು ೪೦೦ ಸದಸ್ಯರು ತಮ್ಮ ಗುರುತಿನ ಚೀಟಿಯನ್ನು ನೋಂದಾಯಿಸಿ ಭಾಗವಹಿಸಿದ್ದರು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಶಾಂತಿಪೂರಕವಾಗಿ ಪ್ರಾರಂಭವಾದ ಆಯ್ಕೆ ಪ್ರಕ್ರಿಯೆಯ ಸಮಯದಲ್ಲಿ ೫ ಜನರ ತಂಡ ಉz್ದೆÃಶ ಪೂರ್ವಕವಾಗಿ ಗೊಂದಲ ಸೃಷ್ಟಿಸಿ ದಾಂದಲೆ ನಡೆಸಿ ಹಲ್ಲೆಗೆ ಮುಂದಾಗುವ ಜೊತೆಗೆ ಗುಂಪು ಘರ್ಷಣೆಗೆ ಕಾರಣಕರ್ತರಾಗಿದ್ದಾರೆ ಎಂದು ದೂರಲಾಗಿದೆ.

ಇದರಿಂದಾಗಿ ಸಮುದಾಯದವರಲ್ಲಿ ಉದ್ವಿಗ್ನತೆ ವಾತಾವರಣ ನಿರ್ಮಾಣವಾಗಿದೆ. ಆ ವ್ಯಕ್ತಿಗಳು ಆಗಾಗ್ಗೆ ನಗರದ ವಕ್ಫ್ ಸಂಸ್ಥೆಗಳಲ್ಲಿ ನಡೆಯುವ ಸಭೆಗಳಲ್ಲಿ ಪದೇ ಪದೇ ಶಾಂತಿ ಭಂಗ ಉಂಟುಮಾಡಿ ಸಮುದಾಯದಲ್ಲಿ ದ್ವೇಷ ಹುಟ್ಟು ಹಾಕುವ ಹುನ್ನಾರ ಮಾಡಿಕೊಂಡು ಬಂದಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮಂಗಳವಾರ ನಡೆದ ಘಟನೆ ಕುರಿತು ಜಿಲ್ಲಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಶಾಹೀದ್ ರಜ್ವಿ ಅವರ ಹೆಸರನ್ನು ಬಳಸಿಕೊಂಡು ಅವರ ವಿರುದ್ಧ ಅನವಶ್ಯಕವಾಗಿ ಸುಳ್ಳು ದೂರನ್ನು ಸಲ್ಲಿಸಲಾಗಿದೆ. ಜೊತೆಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಸಾರ್ವಜನಿಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಲಾಗಿದೆ.

ಪ್ರಸ್ತುತ ಶಾಹಿದ್ ರಜ್ವಿ ಅನೇಕ ದಿನಗಳಿಂದ ವಿದೇಶ ಪ್ರವಾಸದಲಿದ್ದು, ಸಾರ್ವಜನಿಕ ವಲಯದಲ್ಲಿ ಉನ್ನತ ಮಟ್ಟದ ಹುದ್ದೆಯೊಂದಿಗೆ ಹಾಗೂ ಸಮಾಜಸೇವೆಗಳಿಂದಾಗಿ ಅಪಾರವಾದ ಗೌರವ ಮತ್ತು ಅನೇಕ ರೀತಿಯ ಕೀರ್ತಿಯನ್ನು ಹೊಂದಿದ್ದಾರೆ. ಅಂಥವರ ಬಗ್ಗೆ ಅಪಪ್ರಚಾರ ಮಾಡಿ ಮಾನ ಹಾನಿ ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿದರು.

ಈ ಬೆಳವಣಿಗೆಯಿಂದಾಗಿ ವಕ್ಫ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾನಸಿಕವಾಗಿ ಹಿಂಸೆಗೊಳಪಟ್ಟು ಮಹಾಸಭೆಯನ್ನು ಮೊಟುಕುಗೊಳಿಸಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಸಂಬAಧಪಟ್ಟ ಇಲಾಖೆ ಗಮನಕ್ಕೆ ತಂದು ಹಲ್ಲೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ಶಾಂತಿ ಕಾಪಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಅಂಜುಮಾನ್ ಸಂಸ್ಥೆ ಅಧ್ಯಕ್ಷ ಶಿರಾಜ್, ಮುಸ್ಲಿಂ ಹಾಸ್ಟೆಲ್ ವಕ್ಫ್ ಸಂಸ್ಥೆ ಸದಸ್ಯರಾದ ಯೂಸೂಫ್‌ಹಾಜಿ, ಜಮೀರ್ ಅಹ್ಮದ್, ಫೈರೋಜ್ ಅಹ್ಮದ್, ರಜ್ವಿ, ಗೌಸ್‌ಮುನೀರ್, ಸುಹೈಲ್ ಅಹ್ಮದ್, ಅಬ್ರಾರ್‌ಖಾನ್, ಮಸೂದ್ ಅಹ್ಮದ್ ಇದ್ದರು.