ಜಿಲ್ಲೆ

ಸಭಿಕರ ಮನರಂಜಿಸಿದ ಚಿಣ್ಣರ ನೃತ್ಯ

ಮೈಸೂರು: ನೃತ್ಯ ವಿದ್ಯಾಪೀಠ ಅಕಾಡೆಮಿ ಆಫ್ ಕ್ಲಾಸಿಕಲ್ ಡಾನ್ಸ್ ಆ್ಯಂಡ್ ಇಂಡಿಯನ್ ಆರ್ಟ್ಸ್ ವತಿಯಿಂದ ನರ್ತನ ಲಹರಿ-2025 ಹಾಗೂ ಶಿವಶಕ್ತಿ ಕಾರ್ಯಕ್ರಮವನ್ನು ನಗರದ ಕಿರುರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.

ಸಂಸ್ಥೆಯ ಸಬ್ ಜೂನಿಯರ್ ಹಾಗೂ ಜೂನಿಯರ್ ಹಂತದ ವಿದ್ಯಾರ್ಥಿಗಳು ನರ್ತನ ಲಹರಿ-205 ದಾಸ ನಮನ ಕಾರ್ಯಕ್ರಮ ನಡೆಸಿಕೊಟ್ಟರು. ಸಿ.ಎನ್.ಅನಿತಾ ಅವರೊಂದಿಗೆ ಎನ್.ಕೀರ್ತನಾ, ನಿಶ್ಚಿತಾ ಕೃಷ್ಣ ವಿಶೇಷ ಭರತನಾಟ್ಯ ಪ್ರದರ್ಶಿಸಿದರು.

ನಯನಾ ನಾಗರಾಜು-ನಟುವಾಂಗ, ಎಸ್.ರಕ್ಷಿತಾ-ಹಾಡುಗಾರಿಕೆ, ಜಿ.ಟಿ.ಸ್ವಾಮಿ-ಮೃದಂಗ ಮತ್ತು ತಾಂಡವಮೂರ್ತಿ-ಪಿಟೀಲು ಸಾಥ್ ನೀಡಿದರು. ಮಕ್ಕಳ ನೃತ್ಯ ಪ್ರದರ್ಶನ ಸಭಿಕರನ್ನು ಮನರಂಜಿಸಿದವು.

ಸಿ.ಎನ್.ಅನಿತಾ ಅವರ ನೃತ್ಯ ಸಂಯೋಜನೆ ಹಾಗೂ ಮಾರ್ಗದರ್ಶನದಲ್ಲಿ ಧರ್ಮ ಬೋಧನೆ ಮಾಲಿಕೆ- 9 ನಡೆಯಿತು. ‘ಪ್ರಕೃತಿ ಮತ್ತು ಧರ್ಮ’ ಕುರಿತು ವಿಶ್ವೇಶ್ವರನಗರದ ಮಹರ್ಷಿ ಪಿಯು ಕಾಲೇಜು ಪ್ರಾಂಶುಪಾಲ ಎಂ.ಮಹಾದೇವಸ್ವಾಮಿ ಪ್ರವಚನ ನೀಡಿದರು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ನೃತ್ಯ ಗಂಗೋತ್ರಿ ಸ್ಕೂಲ್ ಆಫ್ ಡ್ಯಾನ್ಸ್ ನ ನಿರ್ದೇಶಕಿ ಪ್ರೀತಿ ವೆಂಕಟರಾಮು, ಹೊಳೆ ನರಸೀಪುರದ ಸ್ವರ್ಣ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಶೋಭಾ ಬಾಲಕೃಷ್ಣ ಮತ್ತು ಎಲ್ ಆ್ಯಂಡ್ ಟೆಕ್ನಾಲಜಿಯ ವ್ಯವಸ್ಥಾಪಕಿ ಜಿ.ಕೆ. ಕಮಲಾ ಇದ್ದರು