ಎನ್.ಆರ್.ಪುರದಲ್ಲಿ ಶ್ರೀ ಶಂಕರ ಭಾರತೀ ಸಭಾಭವನ ನಿರ್ಮಾಣಕ್ಕೆ ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ 7.50 ಲಕ್ಷ ರೂ. ಮೊತ್ತದ ಚೆಕ್‌ನ್ನು ಶ್ರೀ ಶಂಕರ ಭಾರತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ರವಿಶಂಕರ್‌ಗೆ ಹಸ್ತಾಂತರಿಸಿದರು. 
ಜಿಲ್ಲೆ

ಸಭಾಭವನ ನಿರ್ಮಾಣಕ್ಕೆ ಆರ್ಥಿಕ ನೆರವು

ಎನ್.ಆರ್.ಪುರ: ಶೃಂಗೇರಿ ಮಠದಿಂದ ಎನ್.ಆರ್.ಪುರ ಅಗ್ರಹಾರದ ಗಾಯತ್ರಿ ದೇವಿ ದೇವಸ್ಥಾನದ ಪಕ್ಕ ಶ್ರೀ ಶಂಕರ ಭಾರತೀ ನೂತನ ಸಭಾಭವನ ನಿರ್ಮಾಣಕ್ಕೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅವರು ಶೃಂಗೇರಿಯ ಗುರುಭವನದಲ್ಲಿ 7.50 ಲಕ್ಷ ರೂ. ಮೊತ್ತದ ಚೆಕ್‌ನ್ನು ಶ್ರೀ ಶಂಕರ ಭಾರತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ರವಿಶಂಕರ್ ಅವರಿಗೆ ಹಸ್ತಾಂತರಿಸಿದರು.

ಈ ಹಿಂದೆ ಅಗ್ರಹಾರದಲ್ಲಿ ಗಾಯತ್ರಿ ದೇವಿ ಪ್ರತಿಷ್ಠಾಪನೆ, ಕುಂಭಾಭಿಷೇಕ ಹಾಗೂ ಶ್ರೀ ಶಂಕರ ಭಾರತಿ ಸಭಾಭವನದ ಶಂಕುಸ್ಥಾಪನೆ ನೇರವೇರಿಸಿದ ಸಂದರ್ಭದಲ್ಲಿ ಶ್ರೀ ಜಗದ್ಗುರುಗಳು ಅನುಗ್ರಹ ಭಾಷಣದಲ್ಲಿ ಶೃಂಗೇರಿ ಶಾರದಾ ಪೀಠದಿಂದ ಶಾರದಾ ಪ್ರಸಾದ ರೂಪದಲ್ಲಿ ಶ್ರೀ ಶಂಕರ ಭಾರತಿ ಸಭಾಭವನಕ್ಕೆ ಸಹಾಯ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಚೆಕ್ ಹಸ್ತಾಂತರಿಸಿದರು.

ಶ್ರೀ ಶಂಕರ ಭಾರತಿ ಟ್ರಸ್ಟ್ ಕಾರ್ಯದರ್ಶಿ ಎಸ್.ಎನ್.ಅನಂತಪದ್ಮನಾಭ, ತಾಲೂಕು ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಕೊನೋಡಿ ಗಣೇಶ್, ಉಪಾಧ್ಯಕ್ಷೆ ಅನ್ನಪೂರ್ಣ, ಕಾರ್ಯದರ್ಶಿ ಎಸ್.ಎನ್.ಸುರೇಶ, ಗೌರವಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಖಜಾಂಚಿ ಅಭಿಷೇಕ್, ಸದಸ್ಯರಾದ ನಾಗಲಕ್ಷ್ಮೀ, ಗೀತಾ, ಶ್ರೀವಲ್ಲಿ, ಟ್ರಸ್ಟ್ ಸದಸ್ಯ ರಮೇಶ ಚಂದ್ರ ಶರ್ಮಾ ಇದ್ದರು.