ಜಿಲ್ಲೆ

ಹುಳಿಯಾರು ಪಪಂ ಮುಖ್ಯಾಧಿಕಾರಿಗೆ ನೋಟಿಸ್​ ನೀಡಿ

ಜನಸ್ಪಂದನ ಸಭೆಗೆ ಪ್ರಚಾರ ನೀಡದ ಪಟ್ಟಣ ಪಂಚಾಯಿತಿ ಅಧಿಕಾರಿ ಮೇಲೆ ಶಾಸಕ ಸುರೇಶ್​ಬಾಬು ಗರಂ

ಹುಳಿಯಾರು: ಅಧಿಕಾರಿಗಳು ಜನಸ್ಪಂದನ ಸಭೆಯ ಬಗ್ಗೆ ಜನರಿಗೆ ಹಾಗೂ ಪಪಂ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಸಾರ್ವಜನಿಕರಿಗೆ ಹೇಗೆ ಮಾಹಿತಿ ತಿಳಿಯುತ್ತೇ ಎಂದು ಶಾಸಕರ ಎದುರೇ ಜನರು ಆಕ್ರೋಶ ವ್ಯಕ್ತಪಡಿಸಿದ ಟನೆ ಪಟ್ಟಣದಲ್ಲಿ ಶುಕ್ರವಾರ ಶಾಸಕ

ಸಿ.ಬಿ.ಸುರೇಶ್​ಬಾಬು ಆಯೋಜಿಸಿದ್ದ ಮನೆಬಾಗಿಲಿಗೆ ಮನೆ ಮಗ ಶೀರ್ಷಿಕೆಯಡಿ ನಡೆಸುವ ಜನಸ್ಪಂದನ ಸಭೆ ಸಾಯಾಯಿತು.

ಸಭೆಗೆ ಆಗಮಿಸಿದ್ದ ಅಧಿಕಾರಿಗಳು ಸೇರಿದಂತೆ ಜನರು ಕುಳಿತುಕೊಳ್ಳಲು ಚೇರ್​ಗಳಿಲ್ಲದೆ ನಿಂತಿರುವುದನ್ನು ಕಂಡು ಪಪಂ ಮುಖ್ಯಾಧಿಕಾರಿ ಎಸ್​.ನಾಗಭೂಷಣ್​ ಮೇಲೆ ಗರಂ ಆದ ಶಾಸಕರು, ತಹಸೀಲ್ದಾರ್​ಗೆ ದೂರವಾಣಿ ಕರೆ ಮಾಡಿ ಅಧಿಕಾರಿಗಳು ತಮ್ಮೆಲ್ಲ ಕೆಲಸ ಕಾರ್ಯ ಬಿಟ್ಟು ಜನರ ಸಮಸ್ಯೆ ಆಲಿಸಲು ಬಂದಿರುತ್ತಾರೆ. ಆದರೆ, ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ಸರಿಯಾದ ಪ್ರಚಾರ ಮಾಡದೆ ಪಪಂ ಮುಖ್ಯಾಧಿಕಾರಿ ರ್ನಿಲಕ್ಷಿ$್ಯಸಿದ್ದಾರೆ. ಅವರಿಗೆ ನೋಟಿಸ್​ ನೀಡಿ ಎಂದು ಸೂಚಿದರು.

ಹುಳಿಯಾರಿನ ಉರ್ದು ಶಾಲೆ ಮುಂಭಾಗ, ನುರಾನಿ ಮಸೀದಿ ಹತ್ತಿರ ಹಾಗೂ ಬೆಂಕಿ ಗಣಪತಿ ದೇವಸ್ಥಾನದ ಬಳಿ 3 ಕಡೆ ಶಾಸಕರು ಜನಸ್ಪಂದನ ಸಭೆ ನಡೆಸಿದರು. ಎಲ್ಲ ಸಭೆಯಲ್ಲೂ ಮನೆ ಹಾಗೂ ನಿವೇಶನ ಕೋರಿ ಸಾಕಷ್ಟು ಅರ್ಜಿಗಳು ಬಂದಿದ್ದವು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ನಿವೇಶನ ಹಂಚಿಕೆಗೆ ಹುಳಿಯಾರು ಸಮೀಪದಲ್ಲಿ ಸರ್ಕಾರಿ ಜಮೀನಿದ್ದರೆ ಹೇಳಿ ಮಂಜೂರು ಮಾಡಿಸೋಣ ಎಂದು ತಿಳಿಸಿದರು. ಹೊಸಹಳ್ಳಿ ಕೈಮರದ ಬಳಿ ಕೆರೆಸೂರಗೊಂಡನಹಳ್ಳಿ ಸರ್ವೇ ನಂ.35ರಲ್ಲಿ ಸರ್ಕಾರಿ ಜಾಗ ಇರುವ ಬಗ್ಗೆ ಜನರು ಮಾಹಿತಿ ನೀಡಿದರು. ತಕ್ಷಣ ಆರ್​ಐ ಶ್ರೀನಿವಾಸ್​ ಅವರನ್ನು ಕರೆದು ಈ ಜಾಗ ಮಂಜೂರಾತಿಗೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಬೇಕು ಎಂದು ಸೂಚಿಸಿದರು. ಉಳಿದಂತೆ ಖಾತೆ, ಬೀದಿದೀಪ, ನೀರಿನ ಸಮಸ್ಯೆ, ಚರಂಡಿ ಅಶುಚಿತ್ವ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರಿದರು. ಹುಳಿಯಾರು ಪಟ್ಟಣದ 6 ಅಂಗನವಾಡಿ ಕಟ್ಟಡಗಳು ಬಾಡಿಗೆ

ಕಟ್ಟಡದಲ್ಲಿ ನಡೆಯುತ್ತಿವೆ. ಮುಖ್ಯಾಧಿಕಾರಿಗಳಿಗೆ ನಿವೇಶನ ಗುರುತಿಸುವಂತೆ ಮನವಿ ಕೊಟ್ಟಿದ್ದರೂ ಸ್ಪಂದಿಸುತ್ತಿಲ್ಲ ಎಂದು ಅಂಗನವಾಡಿ ನೌಕರರು ದೂರಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಸರ್ಕಾರ ಜಾಗ ಗುರುತಿಸಿ ಕೊಟ್ಟರೆ ಕಟ್ಟಡಕ್ಕೆ ಅನುದಾನ ಕೊಡಿಸುವ ಭರವಸೆ ನೀಡಿದರು.

ಮನೆ ಬಾಗಿಲಿಗೆ ಕಸದ ಟ್ರಾ$್ಯಕ್ಟರ್​ ಬಂದು 6 ತಿಂಗಳಾಗಿದೆ, ಉರ್ದು ಶಾಲೆ ಬಳಿಯ ನೀರಿನ ಘಟಕದ ಹತ್ತಿರ ತಿಪ್ಪೆಯಾಗಿ ದುರ್ನಾತ ಬರುತ್ತಿದೆ. ಚರಂಡಿಗಳು ತುಂಬಿ ಸೊಳ್ಳೆ ಕಾಟ ಹೆಚ್ಚಾಗಿದೆ.ಶಾಸಕರು ಬರುತ್ತಾರೆ ಎಂದು ಕ್ಲೀನ್​ ಮಾಡಿದ್ದಾರೆ. ಆಗಾಗಾ ಕ್ಲೀನ್​ ಮಾಡಲು ಹೇಳಿ ಸಾರ್​. ಇಲ್ಲ,ಆಗಾಗ ನೀವೇ ಬಂದು ಹೋಗಿ ಸರ್​ ಎಂದು ಜನರು ದೂರಿದರು.