ಗದಗ: ಗುಜರಾತಿನಲ್ಲಿರುವ ಮಹಾತ್ಮ ಗಾಂಧಿ ಅವರ ಸಬರಮತಿ ಆಶ್ರಮ ನೋಡಲೇ ಇಲ್ಲ ಎಂದು ಕೊರಗಬೇಡಿ. ಒಂದೇ ಒಂದು ಸಲವಾದರೂ ರಾಷ್ಟ್ರಪಿತ ನಡೆದಾಡಿದ್ದ ಆಶ್ರಮ ಕಣ್ತುಂಬಿಕೊಳ್ಳಬೇಕು ಎಂಬ ಕನಸಿಟ್ಟುಕೊಂಡವರಿಗೊಂದು ಸಿಹಿ ಸುದ್ದಿ ಇಲ್ಲಿದೆ. ಗದಗ ನಗರದಲ್ಲಿ ಗಾಂಧಿ ಅವರ ಸಬರಮತಿ ಆಶ್ರಮ ನೋಡಿ ಆನಂದಿಸುವ ಸದವಕಾಶವನ್ನು ಸ್ಥಳೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯ (ಆರ್ಡಿಪಿಆರ್ಯುು) ಒದಗಿಸಿಕೊಟ್ಟಿದೆ.
ಹೌದು, ಗದಗ ತಾಲೂಕಿನ ನಾಗಾವಿ ಗ್ರಾಮದ ಗುಡ್ಡದ ಬಳಿ ನಿರ್ವಣಗೊಳ್ಳುತ್ತಿರುವ ಆರ್ಡಿಪಿಆರ್ಯುು ಕಟ್ಟಡದ ಆವರಣದಲ್ಲಿ ಈ ಸಬರಮತಿ ಆಶ್ರಮವನ್ನು ಹೋಲುವ ಕಟ್ಟಡವನ್ನು 72 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಲಾಗಿದೆ. 2019ರ ಜನವರಿಯಲ್ಲಿ ಆರಂಭವಾದ ತದ್ರೂಪಿ ಕಟ್ಟಡದ ಕಾಮಗಾರಿ 2020ರ ಅಕ್ಟೋಬರ್ ತಿಂಗಳಾಂತ್ಯಕ್ಕೆ ಕಾಮಗಾರಿ ಪೂರ್ಣಗೊಂಡಿದೆ. ಉಳಿದಿರುವ ಸಣ್ಣ ಪುಟ್ಟ ಕೆಲಸ ಕಾರ್ಯಗಳು ಭರದಿಂದ ಸಾಗಿದ್ದು, ನ. 11ರಂದು ಕಟ್ಟಡ ಲೋಕಾರ್ಪಣೆಗೊಳ್ಳಲಿದೆ.
ಗುಜರಾತಿನ ಸಬರಮತಿಯಲ್ಲಿರುವ ಗಾಂಧಿ ಅವರ ಮೂಲ ಆಶ್ರಮ 3800 ಚದರಿ ಅಡಿ ಜಾಗದಲ್ಲಿ ನಿರ್ವಣವಾಗಿದೆ. ನಾಗಾವಿಯ ತದ್ರೂಪಿ ಕಟ್ಟಡವೂ 3800 ಚದರ ಅಡಿ ಜಾಗದಲ್ಲಿ ನಿರ್ವಿುಸಲಾಗಿದೆ. ಈ ಆಶ್ರಮ ಗುಜರಾತಿನ ಸಬರಮತಿಯಲ್ಲಿರುವ ಗಾಂಧಿ ಆಶ್ರಮದ ಪಡಿಯಚ್ಚಿನಂತಿದೆ. ಈ ಕಟ್ಟಡದಲ್ಲಿ ಪ್ರಾರ್ಥನಾ ಮಂದಿರ, ಧ್ಯಾನ ಮಂದಿರ, ಕಸ್ತೂರಬಾ ಮಂದಿರ ನಿರ್ವಿುಸಲಾಗಿದೆ. ಅಲ್ಲದೆ, ಮಹಾತ್ಮ ಗಾಂಧಿ ಅವರ ಸ್ವಾತಂತ್ರ್ಯ ಹೋರಾಟದ ಚಿತ್ರಗಳು, ಜೀವನ ಸಾಧನೆ ಹಾಗೂ ಅವರ ನೇತೃತ್ವದಲ್ಲಿ ನಡೆದ ವಿಶಿಷ್ಟ ಘಟನೆಗಳು, ಐತಿಹಾಸಿಕ ಸಂಗತಿಗಳನ್ನು ಮೆಲುಕು ಹಾಕುವಂತಹ ಸವಿವರ ಚಿತ್ರಗಳ ಪ್ರದರ್ಶನ ಇಲ್ಲಿದೆ.
ಗಾಂಧಿ ಪರಿಕಲ್ಪನೆ
ಗಾಂಧಿ ಅವರ ತತ್ತ್ವ ಚಿಂತನೆ ಮತ್ತು ಆದರ್ಶಗಳ ಆಧಾರಿತ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುವುದು ಹಾಗೂ ಅವುಗಳನ್ನು ಯುವ ಪೀಳಿಗೆಯಲ್ಲಿ ರೂಢಿಸುವ ಧ್ಯೇಯೋದ್ದೇಶದೊಂದಿಗೆ ಒಂದು ಪ್ರೇರಣಾ ಕೇಂದ್ರವಾಗಿ ಆರ್ಡಿಪಿಆರ್ಯುು ಆವರಣದಲ್ಲಿ ಗಾಂಧಿ ಅವರ ಸಬರಮತಿ ಆಶ್ರಮದ ಪ್ರತಿಕೃತಿ ನಿರ್ವಣಗೊಂಡಿದೆ. ಗಾಂಧಿ ಅವರು ಗದಗ ಜಿಲ್ಲೆಗೆ ಭೇಟಿ 100 ವರ್ಷ ಸಂದ ಸವಿನೆನಪಿಗಾಗಿ ನಗರದ ಹೊಲವಲಯದಲ್ಲಿ ನೂತನವಾಗಿ ನಿರ್ವಣಗೊಳ್ಳುತ್ತಿರುವ ಆರ್ಡಿಪಿಆರ್ಯುು ಆವರಣದಲ್ಲಿ ಗಾಂಧಿ ಅವರ ಸಬರಮತಿ ಆಶ್ರಮದ ತದ್ರೂಪಿ ಕಟ್ಟಡವನ್ನು ನಿರ್ವಿುಸಲಾಗಿದೆ ಎಂದು ಆರ್ಡಿಪಿಆರ್ಯುು ಅಧಿಕಾರಿಗಳು ಹೇಳುತ್ತಾರೆ.
ಪ್ರವಾಸಿ ತಾಣದ ಗರಿ
ಗದಗ ನಗರದ ಭೀಷ್ಮ ಕೆರೆಯಲ್ಲಿ ನಿರ್ವಿುಸಿರುವ 116 ಅಡಿ ಎತ್ತರದ ಜಗಜ್ಯೋತಿ ಬಸವೇಶ್ವರ ಮೂರ್ತಿ ಸ್ಥಳ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಅದೇ ಮಾದರಿಯಲ್ಲಿ ಆರ್ಡಿಪಿಆರ್ಯುು ಆವರಣದಲ್ಲಿ ನೂತನವಾಗಿ ನಿರ್ವಣಗೊಂಡಿರುವ ಗಾಂಧಿ ಅವರ ಸಬರಮತಿ ಆಶ್ರಮದ ಪ್ರತಿಕೃತಿ ಕಟ್ಟಡ ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಲಿದೆ.
ಇಂದು ಲೋಕಾರ್ಪಣೆ
ಆಶ್ರಮದ ತದ್ರೂಪಿ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ ನ. 11ರಂದು ಬೆಳಗ್ಗೆ 11ಕ್ಕೆ ಆಯೋಜಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ನೂತನ ಕಟ್ಟಡ ಲೋಕಾರ್ಪಣೆಗೊಳಿಸುವರು. ಶಾಸಕ ಎಚ್.ಕೆ. ಪಾಟೀಲ ಅವರು ಭೋಜನ ಶಾಲೆ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಗದಗ ಜಿಲ್ಲೆಯಲ್ಲಿ ಗಾಂಧಿ ಕೃತಿ, ಸಂಸದ ಶಿವಕುಮಾರ ಉದಾಸಿ ಅವರು ಭಾರತದಲ್ಲಿ ಪಂಚಾಯತ್ರಾಜ್ ವ್ಯವಸ್ಥೆಯ ಆಯಾಮಗಳು ಸಂಪುಟ-2 ಕೃತಿ ಬಿಡುಗಡೆಗೊಳಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ ಅಧ್ಯಕ್ಷತೆ ವಹಿಸುವರು.
ಭಾರತದ ಗ್ರಾಮೀಣ ಪ್ರದೇಶ ಸುಧಾರಣೆಯಾಗಬೇಕು ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಕನಸು ಕಂಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಗ್ರಾಮೀಣ ಮೇರು ಜಾಗತಿಕ ಬೇರು ಎಂಬ ಧ್ಯೇಯವಾಕ್ಯದೊಂದಿಗೆ ಗದಗ ನಗರದಲ್ಲಿ ಆರಂಭಗೊಂಡಿರುವ ದೇಶದ ಮೊಟ್ಟ ಮೊದಲ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯ ಆವರಣದಲ್ಲಿ ಗಾಂಧಿ ಅವರ ಸಬರಮತಿ ನಿರ್ವಣಗೊಂಡಿರುವುದು ಅತ್ಯಂತ ಖುಷಿ ನೀಡುವ ಕ್ಷಣ. ಗಾಂಧಿ ಅವರ ಜೀವನಗಾಥೆ, ಸ್ವಾತಂತ್ರ್ಯ ಹೋರಾಟಗಳ ಕುರಿತು ಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.| ಡಾ. ಬಸವರಾಜ ಲಕ್ಕಣ್ಣವರ, ಕುಲಸಚಿವಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯ, ಗದಗ